ವಿಂಬಲ್ಡನ್ : ವಿಶ್ವದ ನಂ.1 ರಾಫೆಲ್ ನಡಾಲ್ ಔಟ್
ಲಂಡನ್, ಜು.2: ಈ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಫೇವರೀಟ್ ಆಟಗಾರ ಎನಿಸಿದ್ದ ವಿಶ್ವದ ನಂ.1 ಟೆನಿಸ್ ಆಟಗಾರ ಸ್ಪೇನಿನ ರಾಫೆಲ್ ನಡಾಲ್ ಅವರು ಆಸ್ಟ್ರೇಲಿಯಾದ ಯುವ ಆಟಗಾರ ನಿಕ್ ಕೈಗ್ರೋಜ್ ಮುಂದೆ ಮಂಡಿಯೂರಿದ್ದಾರೆ. ವಿಶ್ವದ ನಂ.1 ಆಟಗಾರರನ್ನು ವಿಶ್ವದ 144ನೇ ಶ್ರೇಯಾಂಕಿತ ನಿಕ್ ಮಂಗಳವಾರ ರಾತ್ರಿ ಸೋಲಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ವಿಂಬಲ್ಡನ್ ಟೆನಿಸ್ ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನಲ್ಲಿ ನಡಾಲ್ ಅವರು 7-6 (7/5), 5-7, 7-6 (7/5), 6-3 ಯುವ ಆಟಗಾರ ನಿಕ್ ಕೈಗ್ರೋಜ್ ಗೆ ಅದ್ಭುತ ಆಟಕ್ಕೆ ಸೋಲಲೇ ಬೇಕಾಯಿತು. ಕಳೆದ ದಶಕವೊಂದರಲ್ಲೇ ವೈಲ್ಡ್ ಕಾರ್ಡ್ ಪಡೆದುಕೊಂಡು ಟೂರ್ನಿ ಪ್ರವೇಶಿಸಿದ ಆಟಗಾರನೊಬ್ಬ ಕ್ವಾಟರ್ ಫೈನಲ್ ಹಂತದ ತಲುಪಿರುವುದು ಇದೇ ಮೊದಲು.
ಟಾಪ್ 100 ಶ್ರೇಯಾಂಕಕ್ಕಿಂತ ಅಧಿಕ ಶ್ರೇಯಾಂಕ ಹೊಂದಿರುವ ಆಟಗಾರನೊಬ್ಬ ಈ ರೀತಿ ವಿಶ್ವದ ನಂ.1 ಆಟಗಾರನನ್ನು ಸೋಲಿಸಿದ್ದು ಇದೇ ಮೊದಲು. ಸುಮಾರು 22 ವರ್ಷಗಳ ಹಿಂದೆ ರಷ್ಯಾದ ಆಂಡ್ರೆ ಒಲ್ಹೊವಿಸ್ಕಿ ಅವರು ಆಗಿನ ನಂ.1 ಆಟಗಾರ ಅಮೆರಿಕದ ಜಿಮ್ ಕೊರಿಯರ್ ಅವರನ್ನು ಸೋಲಿಸಿ ಇತಿಹಾಸ ನಿರ್ಮಿಸಿದ್ದರು. ಪುರುಷರ ಸಿಂಗಲ್ಸ್, ಡಬಲ್ಸ್ ಇನ್ನಷ್ಟು ಫಲಿತಾಂಶ ವಿವರ ಮುಂದೆ ಓದಿ

ಯುವ ಆಟಗಾರದ ಮುಂದೆ ಮಂಡಿಯೂರಿದ ವಿಶ್ವದ ನಂ.1
2008 ಹಾಗೂ 2010 ರಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ನಡಾಲ್ ಅವರು ಕಳೆದ ವರ್ಷ ಪ್ರಥಮ ಸುತ್ತಿನಲ್ಲೇ ನಿರ್ಗಮಿಸಿದ್ದರು ಇದಕ್ಕೂ ಹಿಂದಿನ ವರ್ಷ ಎರಡನೇ ರೌಂಡ್ ದಾಟಿರಲಿಲ್ಲ.

ರೋಜರ್ ಫೆಡರರ್ ಗೆ ಜಯ
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ರೋಜರ್ ಫೆಡರರ್ 6-1, 6-4, 6-4 ನೇರ ಸೆಟ್‌ಗಳ ಅಂತರದಲ್ಲಿ ತಮ್ಮ ಎದುರಾಳಿ ಸ್ಪೇನ್‌ನ ಟಾಮಿ ರಾಬ್ರೆಡೊ ಅವರನ್ನು ಮಣಿಸಿದ್ದಾರೆ.

ಸರ್ಬಿಯಾದ ನೊವಾಕ್ ಜೋಕೊವಿಚ್
ನಾಲ್ಕನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ, ಸರ್ಬಿಯಾದ ನೊವಾಕ್ ಜೋಕೊವಿಚ್ ತಮ್ಮ ಎದುರಾಳಿ ಜೊ ವಿಲ್‌ಫ್ರೆಡ್ ಸೋಂಗಾ ವಿರುದ್ಧ 6-3, 6-4, 7-6 (7-5) ಸೆಟ್‌ಗಳಿಂದ ಗೆಲವು ದಾಖಲಿಸಿದ್ದಾರೆ.

ಚಿತ್ರದಲ್ಲಿ ತ್ಸೊಂಗಾ ಗೆಲುವಿನ ಜಿಗಿತ
ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಾಮುಲ್ ಹಕ್ ಖುರೇಷಿ ಜೋಡಿಯು ಕೆನಡಾದ ವಾಸೆಕ್ ಪೊಸ್ಪಿಸಿಲ್ ಹಾಗೂ ಅಮೆರಿಕಾದ ಜಾಕ್ ಸೋಕ್ ಜೋಡಿ ಎದುರು 7-6 (7-3), 6-7 (5-7), 3-6, 6-4, 5-7 ಸೆಟ್‌ಗಳ ಅಂತರದಲ್ಲಿ ಮಣಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications