French Open 2024: ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದ ಟೆನಿಸ್ ದಿಗ್ಗಜ ರಾಫೆಲ್ ನಡಾಲ್!
ಮೇ 28 ಮಂಗಳವಾರ, ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಅವರು ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ 2024ರ ಪರುಷರ ಸಿಂಗಲ್ಸ್ ಮೊದಲ ಸುತ್ತಲ್ಲೇ ಸೋಲು ಕಂಡಿದ್ದಾರೆ. ಈ ಮೂಲಕ ಫ್ರೆಂಚ್ ಓಪನ್‌ನಲ್ಲಿ ಮೊದಲ ಬಾರಿಗೆ ರಾಫೆಲ್ ನಡಾಲ್ ನಾಲ್ಕನೇ ಸುತ್ತಿಗೂ ಮುನ್ನವೇ ಹೊರಬಿದ್ದಿದ್ದಾರೆ.
4ನೇ ಶ್ರೇಯಾಂಕದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಗಾಯದಿಂದ ಚೇತರಿಸಿಕೊಂಡು ಟೆನಿಸ್ ಅಂಗಳಕ್ಕೆ ಮರಳಿದ ನಡಾಲ್ ಸೋಲು ಅನುಭವಿಸಿದ್ದಾರೆ. ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 3-6, 6-7, 3-6 ಸೆಟ್‌ಗಳಿಂದ ನಡಾಲ್ ಸೋತಿದ್ದಾರೆ. 14 ಬಾರಿ ಫ್ರೆಂಚ್ ಓಪನ್ ಗೆದ್ದಿರುವ ಚಾಂಪಿಯನ್ ನಡಾಲ್ ಅವರಿಗೆ ಇದು ಕೊನೆಯ ಪಂದ್ಯ ಎಂದು ನಂಬಲಾಗಿದೆ.

ತಮ್ಮ ಸುರ್ವಣ ವೃತ್ತಿಜೀವನದಲ್ಲಿ ನಾಲ್ಕನೇ ಬಾರಿಗೆ ಫ್ರೆಂಚ್ ಓಪನ್ ಟೂರ್ನಿಯಲ್ಲಿ ನಡಾಲ್ ಪರಾಭವಗೊಂಡಿದ್ದಾರೆ. ಅಲ್ಲದೆ,ನಡಾಲ್ ಮೊದಲ ಬಾರಿಗೆ ಕ್ಲೇ ಕೋರ್ಟ್‌ನಲ್ಲಿ ಸತತ 2 ಪಂದ್ಯಗಳಲ್ಲಿ ಸೋತಿದ್ದಾರೆ. ಕ್ಲೇ-ಕೋರ್ಟ್ ಗ್ರ್ಯಾನ್ ಸ್ಲಾಮ್‌ನಲ್ಲಿ ಅವರ ವೃತ್ತಿಜೀವನದ ದಾಖಲೆಯು ಈಗ 112-4 ಆಗಿದೆ.
ಸುಮಾರು 15,000 ಪ್ರೇಕ್ಷಕರು ನಡಾಲ್ ಅವರ ಆಟವನ್ನು ವೀಕ್ಷಿಸಲು ಜಮಾಯಿಸಿದ್ದರು. ಬಹುದಿನಗಳ ಬಳಿಕ ಟೆನಿಸ್ ಅಂಗಳಕ್ಕೆ ಕಾಲಿಟ್ಟ ನಡಾಲ್ ಅವರನ್ನು ಅಭಿಮಾನಿಗಳು ಚಪ್ಪಾಳೆ ಹೊಡೆಯುವ ಮೂಲಕ ಸ್ವಾಗತಿಸಿದರು.
ಇಲ್ಲಿಯವರೆಗೆ ಒಟ್ಟು 22 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಸ್ಪ್ಯಾನಿಷ್ ಆಟಗಾರ ನಡಾಲ್ ಮುಂದಿನ ತಿಂಗಳು ಜೂನ್ 3ರಂದು ತಮ್ಮ 38ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಕಳೆದ ವರ್ಷ 2023ರ ಜನವರಿ ತಿಂಗಳಿಂದ ಸೊಂಟ ಮತ್ತು ಹೊಟ್ಟೆಯ ಗಾಯಗಳಿಂದ ನಡಾಲ್ ಬಳಲುತ್ತಿದ್ದಾರೆ.
ಈ ವರ್ಷ ನಡಾಲ್ 15 ಪಂದ್ಯಗಳನ್ನು ಆಡಿದ್ದು, 8-7 ಅವರ ದಾಖಲೆ ಆಗಿತ್ತು. ಗಾಯಗಳಿಂದಾಗಿ ನಡಾಲ್ ಶ್ರೇಯಾಂಕವು 275 ನೇ ಸ್ಥಾನಕ್ಕೆ ಕುಸಿದಿದೆ. ಮೊದಲ ಬಾರಿಗೆ ನಡಾಲ್ ಫ್ರೆಂಚ್ ಓಪನ್‌ನಲ್ಲಿ ಶ್ರೇಯಾಂಕ ರಹಿತ ಆಟಗಾರರಾಗಿದ್ದರು.
ಅದಕ್ಕಾಗಿಯೇ ಮೊದಲ ಸುತ್ತಿನಲ್ಲಿ ನಡಾಲ್, 2020ರ ಯುಎಸ್ ಓಪನ್‌ನಲ್ಲಿ ರನ್ನರ್-ಅಪ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಮತ್ತು ಕಳೆದ ಮೂರು ವರ್ಷಗಳಲ್ಲಿ ಪ್ಯಾರಿಸ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ ಏಕೈಕ ಆಟಗಾರನಾದ 4ನೇ ಶ್ರೇಯಾಂಕದ ಜ್ವೆರೆವ್ ಅವರನ್ನು ಎದುರಿಸಿದರು.
ನಡಾಲ್ ಅವರು 2024 ಅವರ ಕೊನೆಯ ಋತು ಎಂದು ಸುಳಿವು ನೀಡಿದ್ದರು. ಆದರೆ ಅವರು ಫ್ರೆಂಚ್ ಓಪನ್‌ನಲ್ಲಿ ಮತ್ತೆ ಆಡುವುದಿಲ್ಲ ಎಂಬುದು ಅನುಮಾನಕರವಾಗಿದೆ. ಈ ಹಿಂದೆ ಫ್ರೆಂಚ್ ಓಪನ್‌ನಲ್ಲಿ 2010ರಲ್ಲಿ ರಾಬಿನ್ ಸೊಡರ್ಲಿಂಗ್ ವಿರುದ್ಧ ಹಾಗೂ 2015 ಮತ್ತು 2021ರಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ನಡಾಲ್ ಸೋತಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications