ಮ್ಯಾಡ್ರಿಡ್ ಮಾಸ್ಟರ್ಸ್ ಸೋಲಿಗೆ ಮುಯ್ಯಿ ತೀರಿಸಿದ ರಾಫೆಲ್ ನಡಾಲ್

ರೋಮ್: ಜರ್ಮನ್ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸಿರುವ ಸ್ಪೇನ್ ಬಲಿಷ್ಠ ರಾಫೆಲ್ ನಡಾಲ್ ಇಟಾಲಿಯನ್ ಓಪನ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಇಟಾಲಿಯನ್ ಓಪನ್ ಟೂರ್ನಿಯಲ್ಲಿ ಒಟ್ಟು 9 ಬಾರಿ ಚಾಂಪಿಯನ್ ಪಟ್ಟ ಗೆದ್ದ ದಾಖಲೆ ರಾಫೆಲ್ ಹೊಂದಿದ್ದಾರೆ.
ವಿಶ್ವ ಶ್ರೇಯಾಂಕದಲ್ಲಿ ದ್ವಿತೀಯ ಸ್ಥಾನದಲ್ಲಿರುವ ರಾಫೆಲ್ ನಡಾಲ್, ಕಳೆದ ವಾರ ಮ್ಯಾಡ್ರಿಡ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇದೇ ಅಲೆಕ್ಸಾಂಡರ್ ಜ್ವೆರೆವ್ ಎದುರು ಸೋತು ನಿರಾಸೆ ಅನುಭವಿಸಿದ್ದರು. ಅಂದಿನ ಸೋಲಿಗೆ ನಡಾಲ್ ಇಂದು ಮುಯ್ಯಿ ತೀರಿಸಿಕೊಂಡಂತಾಗಿದೆ.
ಶುಕ್ರವಾರ (ಮೇ 14) ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜ್ವೆರೆವ್ ಅವರನ್ನು ನಡಾಲ್ 6-3, 6-4ರ ಅಂತರದಲ್ಲಿ ಸೋಲಿಸಿ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ. ಆದರೆ ಮ್ಯಾಡ್ರಿಡ್ ಮಾಸ್ಟರ್ಸ್‌ನಲ್ಲಿ ನಡಾಲ್ ಅವರು ಜ್ವೆರೆವ್ ವಿರುದ್ಧ ಮೂರು ಸೆಟ್‌ಗಳ ಹೋರಾಟದ ಬಳಿಕ ಸೋತಿದ್ದರು.
ಪಂದ್ಯದ ಬಳಿಕ ಮಾತನಾಡಿದ ನಡಾಲ್, 'ಶ್ರೇಷ್ಠ ಆಟಗಾರನೆದುರಿನ ಈ ಗೆಲುವು ನನಗೆ ಬಹಳ ಪ್ರಮುಖವಾಗಿದೆ,' ಎಂದು ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications