Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಂಟಿ ಜೀವನಕ್ಕೆ ಅಂತ್ಯ ಹಾಡಲು 'ಕಿಂಗ್ ಆಫ್‌ ಕ್ಲೇ' ರಾಫೆಲ್ ನಡಾಲ್ ಸಜ್ಜು

Rafael Nadal all set to get hitched to Mery Perello

ಮ್ಯಾಡ್ರಿಡ್, ಫೆಬ್ರವರಿ 1: ಟೆನಿಸ್ ಲೋಕದ ದೈತ್ಯ ಸ್ಪೇನ್‌ನ ರಾಫೆಲ್ ನಡಾಲ್ ಅವರು ಒಂಟಿ ಜೀವನಕ್ಕೆ ಅಂತ್ಯ ಹಾಡುವ ತಯಾರಿಯಲ್ಲಿದ್ದಾರೆ. ನಡಾಲ್ ತನ್ನ ಬಹುಕಾಲದ ಗೆಳತಿ ಮೇರಿ ಪೆರೆಲ್ಲೊ ಅವರನ್ನು ವರಿಸುವುದರಲ್ಲಿದ್ದಾರೆ. ಇಬ್ಬರ ಮದುವೆ ಸದ್ಯದಲ್ಲೇ ನಡೆಯಲಿದೆ.

32ರ ಹರೆಯದ ಮಾಜಿ ವಿಶ್ವ ನಂ.1 ಆಟಗಾರ ನಡಾಲ್, ಮದುವೆಯ ಬಗ್ಗೆ ಪೆರೆಲ್ಲೊ ಅವರಲ್ಲಿ ಪ್ರಾಸ್ತಾವನೆ ಮಾಡಿದ್ದಾರೆ. ಮೇರಿ ಗ್ರೀನ್ ಸಿಗ್ನಲ್ ಕೊಟ್ಟಿದ್ದೂ ಆಗಿದೆ. ಇಬ್ಬರೂ ಶೀಘ್ರ ದಾಂಪತ್ಯ ಜೀವನಕ್ಕೆ ಕಾಲಿರಿಸುವುದರಲ್ಲಿದ್ದಾರೆ ಎಂದು ಅಸೋಸಿಯೇಷನ್ಸ್ ಆಫ್ ಟೆನಿಸ್ ಪ್ರೊಫೆಷನಲ್ಸ್ (ಎಟಿಪಿ) ಟ್ವೀಟ್ ಮೂಲಕ ಖಾತರಿಪಡಿಸಿದೆ.

ನಡಾಲ್ ಮತ್ತು ಪೆರೆಲ್ಲೊ ಇಬ್ಬರೂ ಸುಮಾರು 14 ವರ್ಷಗಳಿಂದಲೂ ಪ್ರೀತಿಸುತ್ತಿದ್ದರು. ಒಟ್ಟು 17 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಜಯಿಸಿರುವ ರಾಫೆಲ್‌ಗೆ 'ಕಿಂಗ್ ಆಫ್‌ ಕ್ಲೇ' (ಆಮೆ ಮಣ್ಣಿನ ಅಂಕಣದ ರಾಜ) ಎಂಬ ಬಿರುದಿದೆ. ಸದ್ಯ ವಿಶ್ವ ರ್ಯಾಂಕಿಂಗ್‌ನಲ್ಲಿ ನಡಾಲ್ ದ್ವಿತೀಯ ಸ್ಥಾನದಲ್ಲಿದ್ದಾರೆ.

Story first published: Friday, February 1, 2019, 13:41 [IST]
Other articles published on Feb 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+