ವಿಶ್ವದ ದುಬಾರಿ ಟೆನಿಸ್ ಆಟಗಾರ ನಡಾಲ್ ಒಟ್ಟು ಆಸ್ತಿ ಎಷ್ಟು ಗೊತ್ತಾ?
ಟೆನಿಸ್ ಲೋಕದ ಸ್ಟಾರ್ ಆಟಗಾರರ ಪಟ್ಟಿಯನ್ನು ಒಮ್ಮೆ ನೋಡಿದಾಗ ಆ ಪಟ್ಟಿಯಲ್ಲಿ ಸ್ಪೇನ್ ಆಟಗಾರರ ಹೆಸರು ಮುಂಚೂಣಿಯಲ್ಲಿರುತ್ತದೆ. ಗುರುವಾರ ಸ್ಪೇನ್‌ನ ರಾಫೆಲ್ ನಡಾಲ್ ತಮ್ಮ ರಾಕೆಟ್ ಕೆಳಗಿಡುವುದಾಗಿ ಘೋಷಿಸಿದ್ದಾರೆ. ಸಾಮಾಜಿಕ ತಾಣದಲ್ಲಿ ಈ ಬಗ್ಗೆ ವಿಡಿಯೋ ಒಂದನ್ನು ನಡಾಲ್ ಪೋಸ್ಟ್ ಮಾಡಿದ್ದಾರೆ. ಸ್ಪೇನ್‌ನಲ್ಲಿ ನಡೆಯಲಿರುವ ಡೇವಿಸ್ ಕಪ್ ಟೂರ್ನಿಯಲ್ಲಿ ಕೊನೆಯ ಬಾರಿಗೆ ಆಡುವುದಾಗಿ ಘೋಷಿಸಿದ್ದಾರೆ.
ಟೆನಿಸ್ ಲೋಕದ ಆಲ್‌ಟೈಮ್ ಬೆಸ್ಟ್ ಪ್ಲೇಯರ್‌ಗಳಲ್ಲಿ ನಡಾಲ್‌ಗೂ ಸ್ಥಾನ. ಟೆನಿಸ್ ಮೇಲಿನ ಇವರ ಪ್ರೀತಿ ಇವರನ್ನು ಈ ಹಂತಕ್ಕೆ ಕರೆದುಕೊಂಡು ನಿಲ್ಲಿಸಿದೆ. ನೊವಾಕ್ ಜೊಕೊವಿಕ್ ನಂತರ. ನಡಾಲ್ ವಿಶ್ವದ ಅತ್ಯಂತ ದುಬಾರಿ ಟೆನಿಸ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೆ ಟೆನಿಸ್ ಅಂಗಳಕ್ಕೆ ಕಾಲಿಟ್ಟ ನಡಾಲ್ ಅಮೋಘ ಸಾಧನೆ ಮಾಡಿದ್ದಾರೆ.

ನಡಾಲ್ ಟೆನಿಸ್ ಲೋಕದ ಧೃವತಾರೆ
ನಡಾಲ್ ತಮ್ಮ ವೃತ್ತಿ ಜೀವನದಲ್ಲಿ ಈವರೆಗೆ ಒಟ್ಟು 92 ಬಾರಿ ಎಟಿಪಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇನ್ನು 22 ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ದಾಖಲೆ ಹೊಂದಿದ್ದಾರೆ. 2010ರಲ್ಲಿ ಇವರು ವರ್ಷದ ನಾಲ್ಕೂ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದು ದಾಖಲೆ ನಿರ್ಮಿಸಿದ್ದಾರೆ. ನಡಾಲ್ ತನ್ನ ವೃತ್ತಿ ಜೀವನದಲ್ಲಿ ರೋಜರ್ ಫೆಡರರ್ ಅವರನ್ನು ಒಟ್ಟು 40 ಬಾರಿ ಎದುರಿಸಿದ್ದಾರೆ. ನಡಾಲ್ ATP ಶ್ರೇಯಾಂಕದಲ್ಲಿ 209 ವಾರಗಳನ್ನು ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ. ಇವರು ಸ್ಪೇನ್ ತಂಡ ಐದು ಬಾರಿ ಡೇವಿಸ್ ಕಪ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ.
ನಡಾಲ್ ಆದಾಯದ ಮೂಲ ಟೆನಿಸ್
ವಿಶ್ವದ ದುಬಾರಿ ಟೆನಿಸ್ ಆಟಗಾರರ ಪಟ್ಟಿಯಲ್ಲಿ ನಡಾಲ್‌ಗೂ ಸ್ಥಾನವಿದೆ. ಇವರು ವಿಶ್ವದ ಅತ್ಯಂತ ಆರನೇ ಶ್ರೀಮಂತ ಟೆನಿಸ್ ತಾರೆ. ಇವರ ಆದಾಯದ ಮೂಲ ಎಂದರೆ ಟೆನಿಸ್ ಕ್ರೀಡೆ. ನಡಾಲ್ ಕೇವಲ ಬಹುಮಾನದ ಹಣದಿಂದ 135 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಹಣ ಗಳಿಸಿದ್ದಾರೆ. ವಿವಿಧ ಕಂಪನಿಗಳ ರಾಯಭಾರಿಯ ಮೂಲಕ ಸುಮಾರು 23 ಮಿಲಿಯನ್ ಡಾಲರ್ ಗಳಿಸಿದ್ದಾರೆ.

ನಡಾಲ್ ಮೌಲ್ಯ ಎಷ್ಟು?
ನಡಾಲ್ ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಪ್ರಸಕ್ತ ವರ್ಷ ನಡಾಲ್ 225 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಈ ಮೂಲಕ ವಿಶ್ವದ ಶ್ರೀಮಂತ ಕ್ರೀಡಾ ಪಟುಗಳಲ್ಲಿ ಇವರು ಒಬ್ಬರಾಗಿದ್ದಾರೆ.
ನಡಾಲ್ ಅವರನ್ನು ಆವೆ ಮಣ್ಣಿನ ರಾಜ ಎಂದು ಕರೆಯಲಾಗುತ್ತದೆ. ಇವರು ಒಟ್ಟು 18 ಬಾರಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಅಂಗಳ ಪ್ರವೇಶಿಸಿದ್ದು, 14 ಬಾರಿ ಫ್ರೆಂಚ್ ಓಪನ್ ಟೈಟಲ್ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ನಡಾಲ್ ತಮ್ಮ 36ನೇ ವಯಸ್ಸಿನಲ್ಲಿ ಫ್ರೆಂಚ್ ಓಪನ್ ಗೆದ್ದಾಗ ಈ ಪ್ರಶಸ್ತಿ ಪಡೆದ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದಗ್ದಾರೆ. ಇವರು ಫ್ರೆಂಚ್ ಓಪನ್‌ನಲ್ಲಿ 112 ಪಂದ್ಯಗಳನ್ನು ಗೆದ್ದು ಕೇವಲ 4 ರಲ್ಲಿ ಸೋತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications