ವಿಶ್ವ ನಂ. 1 ನಡಾಲ್ ಗೆ 11ನೇ ಫ್ರೆಂಚ್ ಓಪನ್ ಚಾಂಪಿಯನ್ ಕಿರೀಟ


ಪ್ಯಾರೀಸ್, ಜೂ. 10: ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಸ್ಪರ್ಧೆಯಲ್ಲಿ ವಿಶ್ವ ನಂ. 1 ಆಟಗಾರ ರಾಫೆಲ್ ನಡಾಲ್ ಚಾಂಪಿಯನ್ ಆಗಿ ಮೂಡಿಬಂದರು. ಭಾನುವಾರ ನಡೆದ ಅಂತಿಮ ಸೆಣಸಾಟದಲ್ಲಿ ನಡಾಲ್ ಅವರು ಡೊಮಿನಿಕ್ ಥೀಮ್ ವಿರುದ್ಧ ನೇರ ಸೆಟ್ ಗೆಲುವು ದಾಖಲಿಸಿದರು.
ಅತ್ಯಂತ ಆತ್ಮವಿಶ್ವಾಸದಿಂದಲೇ ಪಂದ್ಯವನ್ನಾರಂಭಿಸಿದ ಸ್ಪೇನ್ ಬಲಾಡ್ಯ ನಡಾಲ್ ಆರಂಭದಿಂದಲೂ ಮುನ್ನಡೆ ಸಾಧಿಸಿದರು. ಅಂತಿಮವಾಗಿ ಆಸ್ಟ್ರೀಯಾ ಆಟಗಾರ ಥೀಮ್ ವಿರುದ್ಧ 6-4, 6-3ರ ಜಯ ಸಾಧಿಸಿದರು.
ಈ ಗೆಲುವಿನೊಂದಿಗೆ ನಡಾಲ್ 11ನೇ ಬಾರಿಗೆ ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಗುರುತಿಸಿಕೊಂಡರಲ್ಲದೆ, 17ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯೂ ತನ್ನದಾಗಿಸಿಕೊಂಡರು. ಅಂತೂ ಫೈನಲ್ ನಲ್ಲಿ 'ಕ್ಲೇ ಕೋರ್ಟ್ ಕಿಂಗ್' ಹೆಸರಿಗೆ ತಕ್ಕಂತ ಆಟ ನಡಾಲ್ ಪ್ರದರ್ಶಿಸಿ ಗಮನಸೆಳೆದರು.
ವಿಶ್ವ ರ್ಯಾಂಕಿಂಗ್ ನಲ್ಲಿ 7ನೇ ಶ್ರೇಯಾಂಕಿತ ಥೀಮ್ ಕೂಡ ತಕ್ಕ ಮಟ್ಟಿನ ಎದುರಾಳಿಗೆ ಪೈಪೋಟಿ ನೀಡಿದರು. ಆದರೆ ಅನುಭವಿ ಮತ್ತು ಅಷ್ಟೇ ಬಲಿಷ್ಠ ಸ್ಪ್ಯಾನಿಷ್ ಆಟಗಾರನೆದುರಿಗೆ ಯುವ ಆಟಗಾರ ಥೀಮ್ ತಲೆ ಬಾಗಲೇಬೇಕಾಯಿತು.
ಶನಿವಾರ ನಡೆದ ವನಿತಾ ವಿಭಾಗದ ಫೈನಲ್ ಸ್ಪರ್ಧೆಯಲ್ಲೂ ವಿಶ್ವ ನಂ. 1 ಆಟಗಾರ್ತಿ ಸಿಮೋನಾ ಹಾಲೆಪ್ ಫ್ರೆಂಚ್ ಓಪನ್ ನೊಂದಿಗೆ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಕಾಕತಾಳೀಯವೆಂಬಂತೆ ಇಂದೂ ಅಗ್ರ ಶ್ರೇಯಾಂಕಿತ ಆಟಗಾರನೇ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ವನಿತಾ ವಿಭಾಗದಲ್ಲಿ ಅಮೆರಿಕಾದ ಸ್ಲೋಯೆನ್ ಸ್ಟೀಫನ್ಸ್ ಫ್ರೆಂಚ್ ಓಪನ್ ರನ್ನರ್ಸ್ ಆಗಿ ಗುರುತಿಸಿಕೊಂಡರೆ, ಪುರುಷರಲ್ಲಿ ಆಸ್ಟ್ರೀಯ ಆಟಗಾರ ಡೊಮಿನಿಕ್ ಥೀಮ್ ಗೆ ರನ್ನರ್ಸ್ ಪ್ರಶಸ್ತಿ ಒಲಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications