Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rafael Nadal: ಒಂದು ವರ್ಷದ ಬಳಿಕ ಟೆನ್ನಿಸ್ ಕೋರ್ಟ್‌ಗೆ ರಾಫೆಲ್ ನಡಾಲ್ ವಾಪಸ್; ಎಲ್ಲಿ, ಯಾವಾಗ?

22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ರಾಫೆಲ್ ನಡಾಲ್ ಅವರು ಮುಂಬರುವ ಆಸ್ಟ್ರೇಲಿಯಾದಲ್ಲಿ ನಡೆಯುವ ಬ್ರಿಸ್ಬೇನ್ ಇಂಟರ್‌ನ್ಯಾಶನಲ್‌ ಟೂರ್ನಿಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ.

ಗಮಾನಾರ್ಹವಾಗಿ, ಒಂದು ವರ್ಷದ ಬಳಿಕ ಸ್ಪರ್ಧಾತ್ಮಕ ಟೆನ್ನಿಸ್‌ಗೆ ಬಹು ನಿರೀಕ್ಷಿತ ಮರಳುವಿಕೆಯನ್ನು ಸ್ವತಃ ರಾಫೆಲ್ ನಡಾಲ್ ಅವರೇ ತಿಳಿಸಿದ್ದಾರೆ.

Rafael Nadal will Return to the Tennis Court After a Year In Brisbane International 2024

37ರ ಹರೆಯದ ಸ್ಪೇನ್‌ನ ಟೆನ್ನಿಸ್ ತಾರೆ ರಾಫೆಲ್ ನಡಾಲ್ ಗಾಯದಿಂದಾಗಿ ಸ್ಪರ್ಧಾತ್ಮಕ ಆಟದಿಂದ ದೂರವುಳಿದಿದ್ದರು. ಇದೀಗ ಒಂದು ವರ್ಷದ ವಿರಾಮದ ನಂತರ ಪುನರಾಗಮನಕ್ಕೆ ನಡಾಲ್ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಜನವರಿ 2024ರಲ್ಲಿ ಪಂದ್ಯಾವಳಿಯಲ್ಲಿ ಸ್ಪರ್ಧಿಸಲಿದ್ದಾರೆ.

ರಾಫೆಲ್ ನಡಾಲ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದು, "ಒಂದು ವರ್ಷದ ಕಾಲ ವಿರಾಮ ಪಡೆದ ನಂತರ, ಟೆನ್ನಿಸ್ ಕೋರ್ಟ್‌ಗೆ ಹಿಂತಿರುಗುವ ಸಮಯ ಬಂದಿದೆ. ಅದು ಜನವರಿ ಮೊದಲ ವಾರದಲ್ಲಿ ಬ್ರಿಸ್ಬೇನ್‌ನಲ್ಲಿ. ಅಲ್ಲಿಯೇ ನೋಡೋಣ," ಎಂದು ಹೇಳಿದ್ದಾರೆ.

ರಾಫೆಲ್ ನಡಾಲ್ ಅವರ ಈ ಪ್ರಕಟಣೆಯು ಜನವರಿ 2023ರ ನಂತರ, ಟೆನ್ನಿಸ್ ಅಂಕಣದಲ್ಲಿ ಅವರ ಮೊದಲ ಪ್ರದರ್ಶನವನ್ನು ಕಾಣಬಹುದು.

ಗಮನಾರ್ಹವಾಗಿ, ರಾಫೆಲ್ ನಡಾಲ್ ಅವರು ಆಸ್ಟ್ರೇಲಿಯನ್ ಓಪನ್‌ಗೆ ಎರಡನೇ ಸುತ್ತಿನ ಸೋಲಿನ ಸಂದರ್ಭದಲ್ಲಿ ಅನುಭವಿಸಿದ ಹಿಪ್ ಫ್ಲೆಕ್ಸರ್‌ಗೆ ಗಾಯವಾದ ಕಾರಣ ಟೆನ್ನಿಸ್ ಅಂಕಣದಿಂದ ಹೊರಗುಳಿಯಬೇಕಾಯಿತು.

ಋತುವಿನ ಮೊದಲ ಗ್ರ್ಯಾಂಡ್‌ಸ್ಲಾಮ್‌ನ ನಂತರ, ರಾಫೆಲ್ ನಡಾಲ್ ಅವರು ಫ್ರೆಂಚ್ ಓಪನ್‌ ಸಮಯಕ್ಕೆ ಮರಳಬಹುದೆಂದು ಆಶಿಸಿದ್ದರು. ರೋಲ್ಯಾಂಡ್ ಗ್ಯಾರೋಸ್ ಪ್ರಾರಂಭವಾಗುವ ಒಂದು ವಾರದ ಮೊದಲು, ಕ್ಲೇ ಕೋರ್ಟ್ ಮೇಜರ್‌ನಲ್ಲಿ 14 ಪ್ರಶಸ್ತಿಗಳೊಂದಿಗೆ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದ ಅವರು ಸ್ಪರ್ಧೆಯಿಂದ ದೂರವಿರುವುದಾಗಿ ಘೋಷಿಸಿದರು ಮತ್ತು ಅವರ ಸಂಭಾವ್ಯ ಮರಳುವಿಕೆಯ ಬಗ್ಗೆ ಖಚಿತವಾಗಿರಲಿಲ್ಲ.

ಇದೇ ವೇಳೆ, ಸ್ಪರ್ಧಾತ್ಮಕ ಟೆನ್ನಿಸ್‌ನಲ್ಲಿ 2024ರ ಋತುವು ತಮ್ಮ ಅಂತಿಮ ಋತುವಾಗಿದೆ ಎಂದು ಸ್ಪೇನ್‌ ಟೆನ್ನಿಸ್ ತಾರೆ ಸುಳಿವು ನೀಡಿದ್ದರು.

24 ಗೆಲುವುಗಳೊಂದಿಗೆ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪುರುಷರ ಸಿಂಗಲ್ಸ್ ಪ್ರಶಸ್ತಿಗಳನ್ನು ಹೊಂದಿರುವ ನೊವಾಕ್ ಜೊಕೊವಿಕ್ ಅವರಿಗಿಂತ ರಾಫೆಲ್ ನಡಾಲ್ ಎರಡು ಪ್ರಶಸ್ತಿಗಳ ಹಿಂದಿದ್ದಾರೆ. ಇದೀಗ ಅವರು ಜೊಕೊವಿಕ್ ಸಾಲಿಗೆ ಸೇರಲು ಬಯಸುತ್ತಾರೆ.

"ವಿಷಯಗಳು ಹೇಗೆ ಬದಲಾಗುತ್ತವೆ ಎಂದು ನಿಮಗೆ ತಿಳಿದಿಲ್ಲ," ಎಂದು ರಾಫೆಲ್ ನಡಾಲ್ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆದರೆ, ಮುಂದಿನ ವರ್ಷ ನನ್ನ ವೃತ್ತಿಜೀವನದ ಕೊನೆಯ ವರ್ಷವಾಗಲಿದೆ ಎಂಬುದು ನನ್ನ ಉದ್ದೇಶ ಎಂದು ಅವರು ಸ್ಪಷ್ಟವಾಗಿ ಬಹಿರಂಗಪಡಿಸಿದ್ದರು.

Story first published: Saturday, December 2, 2023, 9:23 [IST]
Other articles published on Dec 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+