ರಾಫೆಲ್ ನಾಡೆಲ್ ನಿವೃತ್ತಿ: ಟೆನಿಸ್‌ಗೆ ಗುಡ್ ಬೈ ಹೇಳಿದ 'ಸ್ಪೇನ್ ಗೂಳಿ'
ತಲೆ ಬ್ಯಾಂಡ್, ಎರಡೂ ಕೈಗಳಲ್ಲಿ ಸ್ಟ್ರೈಲಿಷ್ ಬ್ಯಾಂಡ್, ಸಖತ್ ಲುಕ್, ಅಟ್ಯಾಕಿಂಗ್ ಗೇಮ್, ಎದುರಾಳಿಗಳ ನಡೆಯನ್ನು ಕ್ಷಣಾದರ್ಧದಲ್ಲಿ ಅರ್ಥಮಾಡಿಕೊಳ್ಳುವ ಕ್ಷಮತೆ, ಯಾರುಗೂ ಅರ್ಥವಾಗದ ಮೈನರಿಸಂ, ಟೆನಿಸ್ ಕೋರ್ಟ್‌ನ ಈ ತುದಿಯಿಂದ ಆ ತುದಿಯ ವರೆಗೂ ತಿರುಗಾಡಿ ರಿಟರ್ನ್ ಮಾಡುವ ಧಾಟಿ, ವಿಶ್ವದ ಸ್ಟಾರ್ ಆಟಗಾರರ ಸವಾಲಿಗೆ ಪ್ರತಿ ಸವಾಲು ಎಸೆಯುವ ಎದೆಗಾರಿಕೆ, ಯುವಕರನ್ನು ಪ್ರೋತ್ಸಾಹಿಸುವ ಮನೋಭಾವ, ಕಾಲಕ್ಕೆ ತಕ್ಕಂತೆ ಆಟವನ್ನು ಬದಲಿಸಿಕೊಂಡ ರೀತಿ, ಈ ಟೆನಿಸ್ ಪ್ಲೇಯರ್‌ನನ್ನು ದಿಗ್ಗಜರ ಸಾಲಿಗೆ ಸೇರಿಸುತ್ತದೆ. ಗುರುವಾರ ಈ ಸ್ಟಾರ್ ತಮ್ಮ ಕ್ಲಾಸಿಕ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಈ ಪ್ಲೇಯರ್ ವಿದಾಯ ಹೇಳಿರಬಹುದು, ಆದರೆ ಗ್ರ್ಯಾನ್ ಸ್ಲ್ಯಾಮ್‌ಗಳು ನಡೆದಾಗಲೆಲ್ಲಾ, ಇವರ ನೆನಪು ಆಗದೇ ಇರದು. ಗೋಲ್ಡನ್ ಸ್ಲ್ಯಾಮ್ ಬಿರುದು ಕೊಂಚದರಲ್ಲಿ ಇವರ ಕೈ ತಪ್ಪಿದೆ. ಆದರೆ ಇವರು ದೇಶ ಹಾಗೂ ಕ್ರೀಡೆಗೆ ಕೊಟ್ಟ ಕೊಡುಗೆ ಅಪಾರ. ಟೆನಿಸ್ ಲೋಕದ ಮಹಾನ್ ಆಟಗಾರ ಸ್ಪೇನ್ ರಾಫೆಲ್ ನಡಾಲ್ ವಿದಾಯ ಹೇಳಿದ್ದಾರೆ. ಆವೇ ಮಣ್ಣಿನ ರಾಜ (ಕ್ಲೈ ಕೋರ್ಟ್ ಕಿಂಗ್) ಎಂದೇ ಪ್ರಸಿದ್ಧರಾಗಿದ್ದ ನಡಾಲ್, ರಾಕೆಟ್ ಕೆಳಗಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಗುರುವಾರ ನಡಾಲ್ ಹಂಚಿಕೊಂಡಿರುವ ವಿಡಿಯೋದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. 'ಈ ಜೀವನದಲ್ಲಿ, ಪ್ರತಿಯೊಂದಕ್ಕೂ ಒಂದು ಆರಂಭ ಮತ್ತು ಅಂತ್ಯವಿದೆ. ನಾನು ಊಹಿಸಿದ್ದಕ್ಕಿಂತ ಹೆಚ್ಚು ಮತ್ತು ದೀರ್ಘವಾದ ವೃತ್ತಿಜೀವನವನ್ನು ಕೊನೆಗೊಳಿಸಲು ಇದು ಸರಿಯಾದ ಸಮಯ ಎಂದು ಹೇಳಿದ್ದಾರೆ.
ಕಳೆದ ವರ್ಷ 2023ರ ಜನವರಿ ತಿಂಗಳಿಂದ ಸೊಂಟ ಮತ್ತು ಹೊಟ್ಟೆಯ ಗಾಯಗಳಿಂದ ನಡಾಲ್ ಬಳಲುತ್ತಿದ್ದರು. ಇದರ ನಡುವೆಯೂ ಈ ವರ್ಷ ನಡಾಲ್ 15 ಪಂದ್ಯಗಳನ್ನು ಆಡಿದ್ದರು. ಗಾಯಗಳಿಂದಾಗಿ ಟೆನಿಸ್‌ನಿಂದ ಬಹುಕಾಲ ದೂರ ಉಳಿದ ಕಾರಂ ನಡಾಲ್ ಶ್ರೇಯಾಂಕವು 275ನೇ ಸ್ಥಾನಕ್ಕೆ ಕುಸಿದಿತ್ತು. ಈ ಸಂದರ್ಭದಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್ ಆಡುವ ಸಲುವಾಗಿ ನಡಾಲ್ ಈ ವರ್ಷ ವಿಂಬಲ್ಡನ್ ನಿಂದ ದೂರ ಸರಿದಿದ್ದರು.
ಆದರೆ, ಒಲಿಂಪಿಕ್ಸ್‌ಗೂ ಮೊದಲು ನಡೆದ ಬೋರ್ಗೆಸ್ ಸ್ವೀಡಿಷ್ ಓಪನ್‌ನಲ್ಲಿ 51ನೇ ಶ್ರೇಯಾಂಕದ ಆಟಗಾರ ನುನೊ ಬೋರ್ಗೆಸ್ ವಿರುದ್ಧ ನಡಾಲ್ ಸೋಲನ್ನು ಎದುರಿಸಬೇಕಾಯಿತು. ನಡಾಲ್ ಅವರನ್ನು 6-3, 6-2 ಸೆಟ್‌ಗಳಿಂದ ಸೋಲಿಸಿದ ಬೋರ್ಗೆಸ್ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ಇದಾದ ನಂತರ ಫ್ರೆಂಚ್ ಓಪನ್ 2024ರ ಪರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ 4ನೇ ಶ್ರೇಯಾಂಕದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ರಾಫೆಲ್ ನಡಾಲ್ ಸೋಲು ಕಂಡಿದ್ದರು. ಈ ಮೂಲಕ ಫ್ರೆಂಚ್ ಓಪನ್‌ನಲ್ಲಿ ಮೊದಲ ಬಾರಿಗೆ ನಡಾಲ್ ನಾಲ್ಕನೇ ಸುತ್ತಿಗೂ ಮುನ್ನವೇ ಹೊರಬಿದ್ದು, ಅಚ್ಚರಿ ಮೂಡಿಸಿದ್ದರು. ಈ ಸೋಲಿನ ಬಳಿಕ 14 ಬಾರಿ ಫ್ರೆಂಚ್ ಓಪನ್ ಗೆದ್ದಿರುವ ಚಾಂಪಿಯನ್ ನಡಾಲ್ ಅವರಿಗೆ ಇದು ಕೊನೆಯ ಪಂದ್ಯ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಈ ಮಾತು ನಿಜವಾಗಿದೆ.
ಮುಂದಿನ ತಿಂಗಳು ನವೆಂಬರ್‌ನಲ್ಲಿ ಮಲಗಾದಲ್ಲಿ ನಡೆಯಲಿರುವ ಡೇವಿಸ್ ಕಪ್ ಫೈನಲ್‌ನಲ್ಲಿ 22 ಬಾರಿಯ ಗ್ರ್ಯಾಂಡ್‌ಸ್ಲಾಮ್ ಚಾಂಪಿಯನ್ ನಡಾಲ್ ಸ್ಪೇನ್‌ಗಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications