ಮರಳಿ ನಂ. 1 ಸ್ಥಾನಕ್ಕೇರಿದ ರೋಜರ್ ಫೆಡರರ್: ನಡಾಲ್ ನಂ. 2

ಪ್ಯಾರಿಸ್, ಮೇ 14: ಅಚ್ಚರಿ ರೀತಿಯಲ್ಲಿ ಮ್ಯಾಡ್ರಿಡ್ ಓಪನ್ ಮಾಸ್ಟರ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಹೊರಬಿದ್ದ ವಿಶ್ವ ನಂ. 1 ಆಟಗಾರ ಸ್ಪೇನ್ ನ ರಾಫೆಲ್ ನಡಾಲ್ ಸ್ಥಾನವನ್ನು ಸ್ವಿಸ್ ಆಟಗಾರ ರೋಜರ್ ಫೆಡರರ್ ಆವರಿಸಿಕೊಂಡಿದ್ದಾರೆ.
ಅಸೋಸಿಯೇಶನ್ ಆಫ್ ಟೆನಿಸ್ ಪ್ರೊಫೆಶನಲ್ಸ್ ಸೋಮವಾರ ಪ್ರಕಟಿಸಿರುವ ಹೊಸ ರ್ಯಾಂಕಿಂಗ್ ಲಿಸ್ಟ್ ನಲ್ಲಿ ಸ್ವಿಸ್ ಬಲಾಡ್ಯ ರೋಜರ್ ಫೆಡರರ್ ನಂ. 1 ಸ್ಥಾನ ಪಡೆದುಕೊಂಡಿದ್ದಾರೆ.
ಮಾರ್ಚ್ ನಿಂದ ಯಾವುದೇ ಕೂಟದಲ್ಲಿಪಾಲ್ಗೊಳ್ಳದ ಹೊರತಾಗಿಯೂ ರೋಜರ್ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಮಾಜಿ ನಂ. 1 ಆಟಗಾರ ನೊವಾಕ್ ಜೊಕೊವಿಕ್ 6ನೇ ಸ್ಥಾನದಿಂದ 18ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮ್ಯಾಡ್ರಿಡ್ ಓಪನ್ ನ ಎರಡನೇ ಸುತ್ತಿನಲ್ಲಿ ಸೋತಿದ್ದರಿಂದ ಜೊಕೊವಿಕ್ ತೀರಾ ಕೆಳ ಸ್ಥಾನಕ್ಕೆ ಕುಸಿಯುವಂತಾಗಿದೆ.
ಮ್ಯಾಡ್ರಿಡ್ ಪ್ರಶಸ್ತಿ ವಿಜೇತ ಅಲೆಕ್ಸಾಂಡರ್ ಝವೆರೆವ್ ಮೂರನೇ ಸ್ಥಾನದಲ್ಲಿದ್ದು, ಮ್ಯಾಡ್ರಿಡ್ ಓಪನ್ ನಿಂದ ನಡಾಲ್ ಅವರನ್ನು ಹೊರಗಟ್ಟಿದ್ದ ಡೊಮಿನಿಕ್ ಥೀಮ್ 8ನೇ ಸ್ಥಾನದಲ್ಲಿದ್ದಾರೆ.
ಉಳಿದಂತೆ 5ನೇ ಸ್ಥಾನದೊಳಗೆ ಗ್ರಿಗರ್ ಡಿಮಿಟ್ರೋವ್ (4ನೇ), ಮರಿನ್ ಸಿಲಿಕ್ (5ನೇ) ಇದ್ದಾರೆ.
ಮ್ಯಾಡ್ರಿಡ್ ಓಪನ್ ಸಾಧನೆ ಮೂಲಕ ಹೆಚ್ಚಿನ ಸ್ಥಾನ ಜಿಗಿದ ಕೀರ್ತಿ ರಷ್ಯಾದ ಯುವ ಆಟಗಾರ ಡೆನಿಸ್ ಶಪೊವೊಲೋವ್ ಅವರಿಗೆ ಸಲ್ಲುತ್ತದೆ. ಮ್ಯಾಡ್ರಿಡ್ ಮಾಸ್ಟರ್ಸ್ ಓಪನ್ ಸೆಮಿಫೈನಲ್ ಸ್ಪರ್ಧಿ ಶಪೊವೊಲೋವ್ 14 ಸ್ಥಾನಗಳನ್ನು ಜಿಗಿದಿದ್ದು, ಈಗ 29ನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications