For Quick Alerts
ALLOW NOTIFICATIONS  
For Daily Alerts

ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಫೆಡರರ್: ಈ ವರ್ಷ ಟೆನ್ನಿಸ್ ಅಂಗಳದಿಂದ ದೂರ

Roger Federer To Be Out Of Action After Knee Surgery

ಕೊರೊನಾ ವೈರಸ್‌ನಿಂದ ಕ್ರೀಡಾಕೂಟಗಳು ನಿಧಾನಕ್ಕೆ ಪುನರಾರಂಭ ಪಡೆಯುತ್ತಿದೆ. ಈ ಬೆಳವಣಿಗೆಯ ಮಧ್ಯೆ ಟೆನ್ನಿಸ್‌ನ ದಿಗ್ಗಜ ರೋಜರ್ ಫಡರರ್ ಈ ವರ್ಷ ನಡೆಯುವ ಯಾವುದೇ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲೂ ಪಾಲ್ಗೊಳ್ಳುತ್ತಿಲ್ಲ ಎಂದು ಘೋಷಿಸಿದ್ದಾರೆ. ಮೊಣಕಾಲು ಸರ್ಜರಿಯ ಹಿನ್ನೆಲೆಯಲ್ಲಿ ಫೆಡರರ್ ವಿಶ್ರಾಂತಿಯನ್ನು ತೆಗೆದುಕೊಳ್ಳಲಿದ್ದಾರೆ.

ರೋಜರ್ ಫೆಡರರ್ ತಮ್ಮ ಮೊಣಕಾಲಿನ ಮತ್ತೊಂದು ಆರ್ಥ್ರೋಸ್ಕೋಫಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಈ ವರ್ಷದ ಉಳಿದ ಎಲ್ಲಾ ಗ್ರ್ಯಾಂಡ್ ಸ್ಲ್ಯಾಮ್‌ಗಳಿಂದ ದೂರವಾಗುತ್ತಿರುವುದನ್ನು ಘೋಷಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ಫೆಡರರ್ ಮಾಹಿತಿ ನೀಡಿದ್ದಾರೆ

ಮುಂದಿನ ವರ್ಷಾರಂಭದಲ್ಲಿ ರೋಜರ್ ಫೆಡರರ್ ಮತ್ತೆ ಟೆನ್ನಿಸ್ ಅಂಗಳದಲ್ಲಿ ಕಾಣಸಿಕೊಳ್ಳುವ ಭರವಸೆಯನ್ನು ಫಡರರ್ ನೀಡಿದ್ದಾರೆ. ಈ ಬಗ್ಗೆ ಸ್ವತಃ ಪೋಸ್ಟ್‌ವೊಂದನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ. ತಮ್ಮ ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳಲಿದ್ದೇನೆ ಬರೆದುಕೊಂಡಿದ್ದಾರೆ.

ಈ ವರ್ಷದಲ್ಲಿ ನಡೆದ ಏಕೈಕ ಗ್ರ್ಯಾಂಡ್‌ ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೆಡರರ್ ಪಾಲ್ಗೊಂಡಿದ್ದರು. ಆದರೆ ತಮ್ಮ ಪ್ರತಿಸ್ಪರ್ಧಿ ರಾಫೆಲ್ ನಡಾಲ್ ವಿರುದ್ಧ ಸೆಮಿಫೈನಲ್ ಕಾದಾಟದಲ್ಲಿ ಶರಣಾಗಿ ಹೊರಬಿದ್ದಿದ್ದರು. ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ವಿಂಬಲ್ಡನ್ ರದ್ದುಗೊಂಡಿದೆ.

ಟೆನ್ನಿಸ್ ಇತಿಹಾಸದಲ್ಲಿ ಅತಿ ಯಶಸ್ವೀ ಆಟಗಾರ ಎಂಗ ಹೆಗ್ಗಳಿಕೆಗೆ ಫೆಡರರ್ ಪಾತ್ರರಾಗಿದ್ದಾರೆ. ಫೆಡರರ್ 20 ಗ್ರ್ಯಾಂಡ್‌ ಸ್ಲ್ಯಾಮ್‌ಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ದಾಖಲೆಯ ಸಮೀಪದಲ್ಲಿ ಇವರ ಪ್ರತಿಸ್ಪರ್ಧಿಗಳೇ ಇರುವುದು ವಿಶೇಷ. ರಾಫೆಲ್ ನಡಾಲ್ 19 ಗ್ರ್ಯಾಂಡ್ ಸ್ಲ್ಯಾಮ್ ಮತ್ತು ನೋವಾಕ್ ಜಾಕೋವಿಕ್ 17 ಗ್ರ್ಯಾಂಡ್ ಸ್ಲ್ಯಾಮ್ ಮುಡಿಗೇರಿಸಿಕೊಂಡಿದ್ದಾರೆ.

Story first published: Wednesday, June 10, 2020, 16:22 [IST]
Other articles published on Jun 10, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+