52ನೇ ಪ್ರಯತ್ನದಲ್ಲಿ ಚೊಚ್ಚಲ ಗ್ರ್ಯಾನ್‌ಸ್ಲ್ಯಾಮ್ ಫೈನಲ್‌ಗೇರಿದ ಅನಸ್ತೇಸಿಯಾ

ಪ್ಯಾರಿಸ್: ರಷ್ಯಾದ ಆಟಗಾರ್ತಿ ಅನಸ್ತೇಸಿಯಾ ಪಾವಲ್ಯುಚೆಂಕೋವಾ ಟೆನಿಸ್ ವೃತ್ತಿ ಬದುಕಿನ ಬಲು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. 52ನೇ ಪ್ರಯತ್ನದಲ್ಲಿ ಅನಸ್ತೇಸಿಯಾ ಚೊಚ್ಚಲ ಬಾರಿ ಗ್ರ್ಯಾನ್‌ಸ್ಲ್ಯಾಮ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಫ್ರೆಂಚ್ ಓಪನ್ ಟೂರ್ನಿಯಲ್ಲಿ ಫೈನಲ್‌ಗೇರುವ ಮೂಲಕ ಅನಸ್ತೇಸಿಯಾ ಈ ಸಾಧನೆ ಮಾಡಿದ್ದಾರೆ.
ಗುರುವಾರ (ಜೂನ್ 10) ನಡೆದ ಫೆಂಚ್ ಓಪನ್ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಅನಸ್ತೇಸಿಯಾ ಪಾವಲ್ಯುಚೆಂಕೋವಾ ಅವರು ಸ್ಲೊವೇನಿಯಾದ ತಮಾರಾ ಜಿಡಾನ್ಸೆಕ್ ವಿರುದ್ಧ 7-5, 6-3ರ ಗೆಲುವು ದಾಖಲಿಸಿದರು. ವಿಶ್ವ ನಂ.85ನೇ ಶ್ರೇಯಾಂಕಿತೆ ತಮಾರಾ ಎದುರು ಅನಸ್ತೇಸಿಯಾ ಸುಲಭ ಗೆಲುವು ದಾಖಲಿಸಿದರು.
29ರ ಹರೆಯದ ಅನಸ್ತೇಸಿಯಾ ಪ್ರಶಸ್ತಿ ಸುತ್ತಿನಲ್ಲಿ ಗ್ರೀಕ್‌ನ 17ನೇ ಶ್ರೇಯಾಂಕಿತೆ ಮಾರಿಯಾ ಸಕ್ಕಾರಿ ಅಥವಾ ಝೆಕ್ ರಿಪಬ್ಲಿಕ್‌ನ ಶ್ರೇಯಾಂಕಿತರಲ್ಲದ ಬಾರ್ಬೊರಾ ಕ್ರೆಜ್ಕಿಕೋವಾ ಸವಾಲು ಸ್ವೀಕರಿಸಲಿದ್ದಾರೆ. ಶನಿವಾರ ಫೈನಲ್ ಪಂದ್ಯ ನಡೆಯಲಿದೆ.
ಗ್ರ್ಯಾನ್‌ಸ್ಲ್ಯಾಮ್‌ಗೆ ಪಾದಾರ್ಪಣೆ ಮಾಡಿ ಬರೋಬ್ಬರಿ 14 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅನಸ್ತೇಸಿಯಾ ಪ್ರಮುಖ ಟೂರ್ನಿಯೊಂದರಲ್ಲಿ ಫೈನಲ್‌ಗೆ ಪ್ರವೇಶಿಸುತ್ತಿದ್ದಾರೆ. 50ಕ್ಕೂ ಹೆಚ್ಚು ಪ್ರಮುಖ ಟೂರ್ನಿಗಳನ್ನಾಡಿ ಫೈನಲ್‌ಗೆ ಪ್ರವೇಶಿಸುತ್ತಿರುವ ಅಪರೂಪದ ದಾಖಲೆಗೂ ಅನಸ್ತೇಸಿಯಾ ಕಾರಣರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications