For Quick Alerts
ALLOW NOTIFICATIONS  
For Daily Alerts

Sania Mirza Retired: ಸೋಲಿನೊಂದಿಗೆ ಟೆನ್ನಿಸ್ ವೃತ್ತಿಜೀವನ ಕೊನೆಗೊಳಿಸಿದ ಸಾನಿಯಾ ಮಿರ್ಜಾ

Sania Mirza Ended Her Tennis Career With Defeat In Dubai WTA Championship

ಡಬ್ಲ್ಯುಟಿಎ ದುಬೈ ಡ್ಯೂಟಿ ಫ್ರೀ ಚಾಂಪಿಯನ್‌ಶಿಪ್‌ನಲ್ಲಿ ಸೋಲಿನೊಂದಿಗೆ ವೃತ್ತಿಪರ ಟೆನ್ನಿಸ್ ಲೋಕಕ್ಕೆ ಸಾನಿಯಾ ಮಿರ್ಜಾ ವಿದಾಯ ಹೇಳಿದರು.

ಮಂಗಳವಾರ, ಫೆಬ್ರವರಿ 21ರಂದು ದುಬೈನಲ್ಲಿ ತನ್ನ ಕೊನೆಯ ಟೆನ್ನಿಸ್ ಪಂದ್ಯವನ್ನು ಆಡಿದ್ದರಿಂದ ಭಾರತೀಯ ಟೆನ್ನಿಸ್‌ನ ಅದ್ಭುತ ಅಧ್ಯಾಯವೊಂದು ಕೊನೆಗೊಂಡಿತು.

Sania Mirza Ended Her Tennis Career With Defeat In Dubai WTA Championship

ಭಾರತದಿಂದ ಹೊರಹೊಮ್ಮಿದ ಶ್ರೇಷ್ಠ ಟೆನ್ನಿಸ್ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಸಾನಿಯಾ ಮಿರ್ಜಾ, ಮಂಗಳವಾರ ದುಬೈನಲ್ಲಿ ಅಮೆರಿಕದ ಜೊತೆಗಾರ ಮ್ಯಾಡಿಸನ್ ಕೀಸ್ ಅವರೊಂದಿಗೆ ನೇರ ಸೆಟ್‌ಗಳಲ್ಲಿ ಸೋತರು. ಮೊದಲ ಸುತ್ತಿನ ಸೋಲಿನೊಂದಿಗೆ ತಮ್ಮ ಅದ್ಭುತ ವೃತ್ತಿಜೀವನಕ್ಕೆ ಕೊನೆ ಹಾಡಿದರು.

ಸಾನಿಯಾ ಮಿರ್ಜಾ ಮತ್ತು ಮ್ಯಾಡಿಸನ್ ಕೀಸ್ ಜೋಡಿಯು 4-6 0-6 ನೇರ ಸೆಟ್‌ಗಳಲ್ಲಿ ರಷ್ಯಾದ ಬಲಿಷ್ಠ ಜೋಡಿ ವೆರ್ನೋಕಿಯಾ ಕುಡೆರ್ಮೆಟೋವಾ ಮತ್ತು ಲಿಯುಡ್ಮಿಲಾ ಸ್ಯಾಮ್ಸೊನೊವಾ ವಿರುದ್ಧ ಒಂದು ಗಂಟೆಯಲ್ಲಿ ಸೋತರು. 25ರ ಹರೆಯದ ವೆರ್ನೋಕಿಯಾ ಸಿಂಗಲ್ಸ್‌ನಲ್ಲಿ 11ನೇ ಹಾಗೂ ಡಬಲ್ಸ್‌ನಲ್ಲಿ 5ನೇ ಶ್ರೇಯಾಂಕ ಹೊಂದಿದ್ದು, ಲ್ಯುಡ್ಮಿಲಾ ಡಬಲ್ಸ್‌ನಲ್ಲಿ ವಿಶ್ವದ 13ನೇ ಶ್ರೇಯಾಂಕಿತ ಆಟಗಾರ್ತಿಯಾಗಿದ್ದಾರೆ.

Sania Mirza Ended Her Tennis Career With Defeat In Dubai WTA Championship

2003ರಲ್ಲಿ ವೃತ್ತಿಪರರಾಗಿ ಹೊರಹೊಮ್ಮಿದ 36 ವರ್ಷದ ಸಾನಿಯಾ ಮಿರ್ಜಾ, ಸ್ವಿಟ್ಜರ್ಲ್ಯಾಂಡ್ ದಂತಕಥೆ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಮೂರು ಮಹಿಳಾ ಡಬಲ್ಸ್ ಸೇರಿದಂತೆ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ಸ್ಪರ್ಧಾತ್ಮಕ ಟೆನ್ನಿಸ್‌ನಿಂದ ಹೊರನಡೆದರು.

ಭಾರತದ ಮಹೇಶ್ ಭೂಪತಿ (2009 ಆಸ್ಟ್ರೇಲಿಯನ್ ಓಪನ್ ಮತ್ತು 2012 ಫ್ರೆಂಚ್ ಓಪನ್) ಅವರ ಮೂರು ಮಿಶ್ರ ಡಬಲ್ಸ್‌ಗಳಲ್ಲಿ ಎರಡನ್ನು ಸಾನಿಯಾ ಮಿರ್ಜಾ ಗೆದ್ದಿದ್ದರು. ಅಲ್ಲದೇ ಅವರು ಬ್ರೂನೋ ಸೋರೆಸ್ ಅವರೊಂದಿಗೆ ಯುಎಸ್ ಓಪನ್ ಟ್ರೋಫಿಯನ್ನು ಗೆದ್ದಿದ್ದಾರೆ.

Story first published: Wednesday, February 22, 2023, 7:10 [IST]
Other articles published on Feb 22, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+