Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪರಸ್ಪರ ಗೌರವಿಸುವ ಫೆಡರರ್, ನಡಾಲ್‌ಗೆ ಸಾನಿಯಾ ಮಿರ್ಜಾ ಶ್ಲಾಘನೆ

Sania Mirza lauds Federer and Nadal for the mutual respect the legends have for each other

ನವದೆಹಲಿ: ಒಂದೇ ಕ್ಷೇತ್ರದ ಇಬ್ಬರು ದೊಡ್ಡ ಸಾಧಕರು ಉತ್ತಮ ಬಾಂಧವ್ಯ ಉಳಿಸಿಕೊಳ್ಳೋದು ಅಪರೂಪ. ಟೆನಿಸ್ ದಂತಕತೆಗಳಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಇಬ್ಬರೂ ಆತ್ಮೀಯವಾಗಿದ್ದಾರೆ. ಇಬ್ಬರ ನಡುವಿನ ಒಳ್ಳೆತನದ ಬಗ್ಗೆ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಶ್ಲಾಘನೆಯ ಮಾತುಗಳನ್ನಾಡಿದ್ದಾರೆ.

ಕ್ರೀಡೆಗೆ ಸಂಬಂಧಿಸಿದ ಸಾಕ್ಷ್ಯಚಿತ್ರವೊಂದಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಸಾನಿಯಾ, ರಾಫೆಲ್ ನಡಾಲ್ ಮತ್ತು ರೋಜರ್ ಫೆರರ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಬ್ಬರೂ ಪರಸ್ಪರ ಗೌರವಿಸಿಕೊಳ್ಳುವ ರೀತಿ ಅದ್ಭುತ ಎಂದು ಮಿರ್ಜಾ ಹೇಳಿಕೊಂಡಿದ್ದಾರೆ.

'ಕ್ಯಾಮರಾದ ಮುಂದಿರಲಿ ಅಥವಾ ಹಿಂದಿರಲಿ ನಡಾಲ್ ಮತ್ತು ಫೆಡರರ್ ಪರಸ್ಪರ ಒಬ್ಬರ ಬಗ್ಗೆ ಮತ್ತೊಬ್ಬರು ಮಾತನಾಡಿಕೊಳ್ಳೋದು ಅದ್ಭುತ. ನಾನಿದನ್ನು ಇಂಟರ್ ನ್ಯಾಷನಲ್ ಪ್ರೀಮಿಯರ್ ಟೆನಿಸ್‌ನಲ್ಲಿ ನೋಡಿದ್ದೇನೆ,' ಎಂದು ಸಾನಿಯಾ ಹೇಳಿದ್ದಾರೆ.

ಫೆಡರರ್ ಮತ್ತು ನಡಾಲ್ ಇಬ್ಬರೂ ಕೂಡ ಒಬ್ಬರನ್ನು ಮತ್ತೊಬ್ಬರು ಮೇಲೆತ್ತಿ ಮಾತನಾಡಿಕೊಳ್ಳುತ್ತಾರೆ. ಇಬ್ಬರೂ ಕೂಡ ಬದ್ಧ ಎದುರಾಳಿಗಳು ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಕೋರ್ಟ್ ಹೊರಗಿನ ಕ್ಷಣಗಳು ಇವರಿಬ್ಬರನ್ನೂ ಇನ್ನಷ್ಟು ಗೌರವಾನ್ವಿತರಾಗುವಂತೆ ಮಾಡಿದೆ ಎಂದು ಮಿರ್ಜಾ ಹೇಳಿದ್ದಾರೆ.

Story first published: Wednesday, November 4, 2020, 23:09 [IST]
Other articles published on Nov 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+