ಸಾನಿಯಾ-ಶೋಯಬ್ ಮೊದಲ ಮಗುವಿಗೆ ಏನೆಂದು ಹೆಸರು

ನವದೆಹಲಿ, ಏಪ್ರಿಲ್ 23: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಭಾರತದ ಹೆಮ್ಮೆಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ದಂಪತಿಗೆ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ.
ಸಾನಿಯಾ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ ಎಂದು ಸಾನಿಯಾ ತಂದೆ, ಕೋಚ್ ಇಮ್ರಾನ್ ಮಿರ್ಜಾ ಹೇಳಿದ್ದಾರೆ.
'ಹೌದು. ಸಾನಿಯಾ ಗರ್ಭಿಣಿಯಾಗಿದ್ದಾರೆ. ಅವರಿಗೆ ಅಕ್ಟೋಬರ್‌ನಲ್ಲಿ ಹೆರಿಗೆಯಾಗುವ ಸಾಧ್ಯತೆ ಇದೆ' ಎಂದಿದ್ದಾರೆ.
ಇದಕ್ಕೆ ಪೂರಕವಾಗಿ ಶೋಯಬ್ ಅವರು ಕೂಡಾ ಚಿತ್ರವೊಂದನ್ನು ಟ್ವೀಟ್ ಮಾಡಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದಿ
ಏನೆಂದು ಹೆಸರು: ಭಾರತ ಹಾಗೂ ಪಾಕ್ ಬಾಂಧವ್ಯ, ಟೆನಿಸ್- ಕ್ರಿಕೆಟ್ ತಾರಾ ಜೋಡಿಯ ಮಗುವಿನ ಹೆಸರು ಏನಿರಬಹುದು ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲೂ ಮನೆ ಮಾಡಿದೆ.
'ಭವಿಷ್ಯದಲ್ಲಿ ಜನಿಸುವ ನಮ್ಮ ಮಗುವಿಗೆ ಮಿರ್ಜಾ ಮಲಿಕ್ ಎಂದು ನಾಮಕರಣ ಮಾಡಲಿದ್ದೇವೆ. ನನ್ನ ಮತ್ತು ಶೋಯಬ್ ಕುಟುಂಬದ ಹೆಸರುಗಳನ್ನು ಜೋಡಿಸಿ ಮಗುವಿಗೆ ನಾಮಕರಣ ಮಾಡುವ ಬಗ್ಗೆ ಚರ್ಚಿಸಿ ನಿರ್ಧರಿಸಿದ್ದೇವೆ. ಗಂಡು ಮಗು, ಹೆಣ್ಣುಮಗು ಯಾವುದೇ ಆಗಲಿ ಅದೇ ಹೆಸರು ಇಡುತ್ತೇವೆ' ಎಂದು 31 ವರ್ಷ ವಯಸ್ಸಿನ ಸಾನಿಯಾ ಇತ್ತೀಚೆಗೆ ಗೋವಾದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications