ಬರಲಿದೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಆತ್ಮಕಥೆ
ಇಂದೋರ್, ನ.8: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆತ್ಮಕಥೆ ಮಾರುಕಟ್ಟೆಯಲ್ಲಿ ಸುದ್ದು ಮಾಡುತ್ತಿರುವ ಬೆನ್ನಲ್ಲೇ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ ಆತ್ಮ ಕಥನ ಬರೆಯಲು ಸಿದ್ಧರಾಗಿದ್ದಾರೆ.
ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಸಾನಿಯಾ, ಈಗಾಗಲೇ ಆತ್ಮ ಕಥೆ ಬರೆಯಲು ಆರಂಭಿಸಿದ್ದೇನೆ. 26 ಅಧ್ಯಾಯಗಳನ್ನು ಪೂರೈಸಿದ್ದೇನೆ. ಪಂದ್ಯಾವಳಿಗಳಿಲ್ಲದ ಸಮಯದಲ್ಲಿ ಆತ್ಮ ಕಥೆ ಮುಂದುವರಿಸುತ್ತಿದ್ದೇನೆ. ಹೊಸ ಹೊಸ ವಿವರಗಳನ್ನು ಸೇರಿಸಬೇಕಾಗಿದೆ ಎಂದು ತಿಳಿಸಿದರು.[ಸಚಿನ್ ತೆಂಡೂಲ್ಕರ್ ಆತ್ಮಕಥೆ ಅಭಿಮಾನಿಗಳಿಗೆ ಅರ್ಪಣೆ]

ಎಲ್ಲ ಬರವಣಿಗೆ ಮುಕ್ತಾಯವಾದ ಮೇಲೆ ಪ್ರಕಟಣೆ ಮತ್ತು ಬಿಡುಗಡೆ ಮಾಹಿತಿ ನೀಡುತ್ತೇನೆ. ನನ್ನ ಬಗ್ಗೆ ಇಲ್ಲಿಯವರೆಗೆ ಬಂದಿರುವ ಅನೇಕ ಸುದ್ದಿಗಳು ಸಂಪೂರ್ಣ ಸತ್ಯವೂ ಅಲ್ಲ, ಸುಳ್ಳು ಅಲ್ಲ. ಹಾಗಾಗಿ ನನ್ನ ಜೀವನದ ಘಟನಾವಳಿಗಳನ್ನು ನಿಮ್ಮ ಮುಂದೆ ಇಡಲಿದ್ದೇನೆ ಎಂದು ಆಟಗಾರ್ತಿ ಹೇಳಿದ್ದಾರೆ.[ಕ್ರಿಕೆಟ್ ದೇವರ ಆತ್ಮಕಥೆ ಬಿಡುಗಡೆಗೆ ಯಾರೆಲ್ಲ ಬಂದಿದ್ದರು?]
ಯಾವ ಸಿನಿಮಾದಲ್ಲೂ ನಟಿಸುವ ಆಸೆಯಿಲ್ಲ. ಕಳೆದ 5 ವರ್ಷದಲ್ಲಿ 3 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವುದರಿಂದ ಸಿಂಗಲ್ಸ್ ನಿಂದ ದೂರ ಸರಿದಿದ್ದೇನೆ. ಟೆನಿಸ್ ಅಕಾಡೆಮಿಯೊಂದನ್ನು ಸ್ಥಾಪಿಸುವ ಯೋಚನೆಯಿದೆ ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications