Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚ್ ಓಪನ್: ಸೆರೆನಾ ವಿರುದ್ಧ ಸೇಡು ತೀರಿಸಿಕೊಳ್ಳುವರೇ ಶರಪೋವಾ?

ಸೆರೆನಾ ವಿರುದ್ಧ ಸೇಡು ತೀರಿಸಿಕೊಳ್ಳುವರೇ ಶರಪೋವಾ? | Oneindia Kannada
Serena roars on to set up Sharapova blockbuster

ಪ್ಯಾರೀಸ್, ಜೂ. 3: ಫಾರ್ಮ್ ಕಳೆದುಕೊಂಡು ಅವಮಾನವನ್ನೆದುರಿಸಿದ್ದ ಟೆನಿಸ್ ಬಲಾಡ್ಯೆ ಸೆರೆನಾ ವಿಲಿಯಮ್ಸ್ ಮತ್ತೆ ಗೆಲುವಿನ ಹಾದಿಗೆ ಮರಳಿದ್ದಾರೆ. ಶನಿವಾರ ನಡೆದ ರೋಲ್ಯಾಂಡ್ ಗ್ಯಾರೋಸ್ (ಫ್ರೆಂಚ್ ಓಪನ್) 3ನೇ ಸುತ್ತಿನ ಸ್ಪರ್ಧೆಯಲ್ಲಿ ಸೆರೆನಾ, ಜೂಲಿಯಾ ಜಾರ್ಜಸ್ ವಿರುದ್ಧ ಜಯ ಸಾಧಿಸಿದ್ದಾರೆ.

ಗೆಲುವಿನ ಹುಮ್ಮಸ್ಸಿನೊಂದಿಗೆ ಟೆನಿಸ್ ಅಂಕಣಕ್ಕಿಳಿದಿದ್ದ ಅಮೆರಿಕಾ ಆಟಗಾರ್ತಿ ಸೆರೆನಾ, 11ನೇ ಶ್ರೇಯಾಂಕಿತ ಜರ್ಮನ್ ಆಟಗಾರ್ತಿ ಜೂಲಿಯಾ ವಿರುದ್ಧ 6-3, 6-4ರ ನೇರ ಸೆಟ್ ಗೆಲುವು ದಾಖಲಿಸಿದರು. ಇಬ್ಬರ ಮಧ್ಯೆ 75 ನಿಮಿಷಗಳ ಕಾದಾಟ ನಡೆಯಿತು.

3 ಸುತ್ತಿನಲ್ಲಿ ಅಪೂರ್ವ ಆಟ ಪ್ರದರ್ಶಿಸಿರುವ ಮಾಜಿ ವಿಶ್ವ ನಂ. 1 ಆಟಗಾರ್ತಿ ಸೆರೆನಾ 4ನೇ ಸುತ್ತಿನ ಸ್ಪರ್ಧೆಯಲ್ಲಿ ರಷ್ಯಾ ಸ್ಟಾರ್ ಆಟಗಾರ್ತಿ ಮರಿಯಾ ಶರಪೋವಾ ಅವರನ್ನು ಎದುರುಗೊಳ್ಳಲಿದ್ದಾರೆ. 3ನೇ ಸುತ್ತಿನ ಹಣಾಹಣಿಯಲ್ಲಿ ಶರಪೋವಾ ಅವರು ಜೆಕ್ ಆಟಗಾರ್ತಿ ಕ್ರಿಸ್ಟೀನಾ ಪ್ಲಿಸ್ಕೋವಾ ಅವರನ್ನು ಮಣಿಸಿ ಮುನ್ನಡೆ ಸಾಧಿಸಿದ್ದಾರೆ.

ಅತ್ತ ಶರಪೋವಾ ಕೂಡ ಸೆರೆನಾ ವಿರುದ್ಧ ಸೇಡು ತೀರಿಸಿಕೊಳ್ಳುವ ಯೋಜನೆಯಲ್ಲಿದ್ದಾರೆ. ಸೆರೆನಾ-ಶರಪೋವಾ ಮುಖಾಮುಖಿಯಲ್ಲಿ ಈವರೆಗೆ ಸುಮಾರು 18 ಪಂದ್ಯಗಳನ್ನು ಶರಪೋವಾ ಸೋತಿದ್ದು, 'ಸೆರೆನಾ ವಿರುದ್ಧದ ಸೋಲನ್ನು ನೆನಪಿಸುವ 18 ಸಂಖ್ಯೆಯನ್ನು ನಾನು ಮಾರೆತಿಲ್ಲ. ಸಂಖ್ಯೆಗಳು ಸುಳ್ಳು ಹೇಳುವುದಿಲ್ಲ ಕೂಡ' ಎಂದಿದ್ದಾರೆ.

Story first published: Sunday, June 3, 2018, 15:11 [IST]
Other articles published on Jun 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+