
ಪ್ಯಾರೀಸ್, ಮೇ 15: ಟೆನಿಸ್ ಬಲಾಡ್ಯೆ ಸೆರೆನಾ ವಿಲಿಯಮ್ಸ್ ಫ್ರೆಂಚ್ ಓಪನ್ ನಿಂದ ಹೊಂದೆ ಸರಿಯುತ್ತಾರೆ ಎಂದು ಹೇಳಲಾಗಿತ್ತು. ಆದರೆ ಸೆರೆನಾ ಅವರ ಕೋಚ್ ಪ್ಯಾಟ್ರಿಕ್ ಮೌರಟೊಗ್ಲೋ ಅವರು ಸೆರೆನಾ ಫ್ರೆಂಚ್ ಓಪನ್ ಜಯಿಸಲು ಶಕ್ತರಿದ್ದಾರೆ ಎಂದಿದ್ದಾರೆ. ತನ್ನ ಸಿ(ಬ)ದ್ಧತೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿಯೇ ಅವರು ಕೆಲವು ಟೂರ್ನಮೆಂಟ್ ಗಳನ್ನು ತ್ಯಜಿಸಿದ್ದಾರೆ ಎಂದು ತಿಳಿಸಿದ್ದಾರೆ.
2017ರಲ್ಲಿ ಸೆರನಾ ಗರ್ಭಿಣಿಯಾಗಿದ್ದರೂ ಆಸ್ಟ್ರೇಲಿಯಾ ಓಪನ್ ಜಯಿಸುವ ಮೂಲಕ 23ನೇ ಗ್ರ್ಯಾನ್ ಸ್ಲಾಮ್ ಜಯಿಸಿದ್ದರು. ಆದರೆ ಅನಂತರ ಮಗು ಹೆತ್ತು ಮಾರ್ಚ್ ನಲ್ಲಿ ಮತ್ತೆ ಕಣಕ್ಕಿಳಿದ ಸೆರೆನಾ ಇಂಡಿಯಾನ ವೇಲ್ಸ್ ಮತ್ತು ಮಿಯಾಮಿ ಓಪನ್ ನಿಂದ ಸೋತು ನಿರ್ಗಮಿಸಿದ್ದರು. ಜೊತೆ ಈ ತಿಂಗಳು ಮ್ಯಾಡ್ರಿಡ್ ಮತ್ತು ರೋಮ್ ಟೂರ್ನಮೆಂಟ್ ನಿಂದಲೂ ಹಿಂದೆ ಸರಿದಿದ್ದರು.
ಸೆರೆನಾ ಫ್ರೆಂಚ್ ಓಪನ್ ನಲ್ಲಿ ಪಾಲ್ಗೊಳ್ಳವ ಬಗ್ಗೆ ತಿಳಿಸಿರುವ ಅವರ ಕೋಚ್ ಮೌರಟೊಗ್ಲೋ, 'ಸೆರೆನಾ ಫ್ರಂಚ್ ಓಪನ್ ನಲ್ಲಿ ಪಾಲ್ಗೊಳ್ಳುತ್ತಾರೆ. ಅಷ್ಟೇ ಅಲ್ಲ ಟೂರ್ನಮೆಂಟ್ ನಲ್ಲಿ ಗೆಲ್ಲುತ್ತಾರೆ ಕೂಡ' ಎಂದಿದ್ದಾರೆ.
6 ವರ್ಷಗಳಿಂದಲೂ ಸೆರೆನಾಗೆ ಕೋಚ್ ಆಗಿರುವ ಪ್ಯಾಟ್ರಿಕ್ ಸೆರೆನಾ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತ, 'ನನ್ನ ಹೇಳಿಕೆ ಬಗ್ಗೆ ನನಗೆ ಇನ್ನೂ ಹೆಚ್ಚಿನ ಖಾತರಿಯಿದೆ' ಎಂದಿದ್ದಾರೆ.
'ಫ್ರೆಂಚ್ ಗೆಲುವಿನ ಕಾರಣಕ್ಕಾಗಿಯೇ ನಾವು ಮ್ಯಾಡ್ರಿಡ್ ಮತ್ತು ರೋಮ್ ಓಪನ್ ತ್ಯಜಿಸಿದೆವು. ಯಾಕೆಂದರೆ ಸೆರೆನಾ ಸಂಪೂರ್ಣ ತಯಾರುಗೊಳ್ಳಲು ಅವರಿಗೆ 5 ವಾರಗಳ ಕಾಲಾವಧಿ ಬೇಕಿತ್ತು' ಎಂದು ಸೆರೆನಾ ಮ್ಯಾಡ್ರಿಡ್ ಮತ್ತು ರೋಮ್ ಟೂರ್ನಮೆಂಟ್ ನಿಂದ ಹಿಂದೆ ಸರಿದ ಗುಟ್ಟು ಬಿಟ್ಟುಕೊಟ್ಟರು.