Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಬಲ್ಡನ್ : ಮರಿಯಾ ಮಣಿಸಿ ಫೈನಲಿಗೆ ಜಿಗಿದ ಸೆರೆನಾ

ಲಂಡನ್, ಜುಲೈ 10: ಮರಿಯಾ ಶೆರಪೋವಾ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯನ್ಸ್ ಅವರು ಶೆರಪೋವಾ ಅವರನ್ನು ನೇರ ಸೆಟ್ ಗಳಿಂದ ಮಣಿಸಿ ವಿಂಬಲ್ಡನ್ ಟೆನಿಸ್ ಫೈನಲಿಗೆ ಜಿಗಿದಿದ್ದಾರೆ. ಮರಿಯಾ ವಿರುದ್ಧ ಸೆರೆನಾಗೆ ಇದು ಸತತ 17ನೇ ದಾಖಲೆಯ ಜಯವಾಗಿದೆ.

ರಷ್ಯಾದ ಮರಿಯಾ ಶೆರಪೋವಾ ಹೆಚ್ಚು ಪ್ರತಿರೋಧ ತೋರದೆ ಸೆರನಾ ಮುಂದೆ ಒಂದು ಗಂಟೆ ಅವಧಿಯ ಆಟದಲ್ಲೇ ಸೋತಿದ್ದಾರೆ. ಸೆರೆನಾ 6-2,6-4 ನೇರ ಸೆಟ್ ಗಳಿಂದ ಮರಿಯಾ ವಿರುದ್ಧ ಗೆಲುವು ಸಾಧಿಸಿದ್ದಾರೆ. 2004ರ ನವೆಂಬರ್ ನಿಂದ ಇಲ್ಲಿ ತನಕ ಮರಿಯಾ ವಿರುದ್ಧ ಸೆರೆನಾ ಸೋತಿಲ್ಲ.

Serena

ಶನಿವಾರ ಮಧ್ಯಾಹ್ನ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಗಾರ್ಬಿನ್ ಮುಗುರುಜಾ ಅವರನ್ನು ಸೆರೆನಾ ಎದುರಿಸಲಿದ್ದಾರೆ. ಮಾರ್ಟಿನಾ ನವತ್ರಿಲೋವಾ ಹಾಗೂ ಕ್ರಿಸ್ ಎವರ್ಟ್ ಅವರ 18 ಪ್ರಶಸ್ತಿಗಳ ದಾಖಲೆಯನ್ನು ಸಮಬಲ ಮಾಡುವ ತವಕದಲ್ಲಿರುವ ಸೆರೆನಾರನ್ನು ತಡೆಗಟ್ಟಲು ಸದ್ಯಕ್ಕಂತೂ ಸಾಧ್ಯವಿಲ್ಲ.

1997ರಲ್ಲಿ ಅರಾಂತಾ ಸಾಂಚೆಜ್ ವಿಕಾರಿಯೋ ನಂತರ ಸೆಮಿಫೈನಲ್ ದಾಟಿ ಫೈನಲ್ ಹಂತ ತಲುಪಿರುವ 21 ವರ್ಷದ ಮುಗುರುಜಾ ಅವರು ಸೆರೆನಾಗೆ ಸವಾಲು ಒಡ್ಡುತ್ತಿದ್ದಾರೆ.

Maria


ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ಯುವ ತಾರೆ ಗಾರ್ಬೈನ್ ಮುಗುರುಝಾ ಪೊಲೆಂಡ್‌ನ ಅಗ್ರ ಶ್ರೇಯಾಂಕಿತ ಆಟಗಾರ್ತಿ ಆಗ್ನೆಸ್ಕಾ ರಾಡ್ವಾಂಸ್ಕಾರನ್ನು 6-2, 3-6, 6-3 ಅಂತರದಿಂದ ಬಗ್ಗು ಬಡಿದು ಫೈನಲ್ ತಲುಪಿದ್ದಾರೆ.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+