Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಇಟಲಿ ಓಪನ್'ನಿಂದ ಸರಿದ ಸೆರೆನಾ; 'ಫ್ರೆಂಚ್ ಓಪನ್'ಗೂ ಅನುಮಾನ

Serena Williams French Open Campaign in Doubt

ವಾಷಿಂಗ್ಟನ್, ಮೇ 9: ಮುಂದಿನವಾರ ನಡೆಯಲಿದ್ದ ಇಟಾಲಿಯನ್ ಓಪನ್ ನಿಂದ ಹಿಂದೆ ಸರಿದಿರುವ ಮಾಜಿ ವಿಶ್ವ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ಈ ತಿಂಗಳಾಂತ್ಯದಲ್ಲಿ ನಡೆಯುವ ಫ್ರೆಂಚ್ ಓಪನ್ ನಲ್ಲೂ ಪಾಲ್ಗೊಳ್ಳುವುದು ಅನುಮಾನ ಎಂದು ತಿಳಿದುಬಂದಿದೆ.

ಇಟಾಲಿಯನ್ ಓಪನ್ ನಿಂದ ಸೆರೆನಾ ಹಿಂದೆ ಸರಿದಿರುವ ಸಂಗತಿಯನ್ನು ತಿಳಿಸಿರುವ ಆಯೋಜಕರು ಫ್ರೆಂಚ್ ಸ್ಪರ್ಧೆಯಲ್ಲೂ ಸೆರೆನಾ ಪಾಲ್ಗೊಳ್ಳುವುದು ಅನುಮಾನ ಎಂದಿದ್ದಾರೆ.

ಈ ಹಿಂದೆ ನಾಲ್ಕುಬಾರಿ ಇಟಾಲಿಯನ್ ಪ್ರಶಸ್ತಿ ಜಯಿಸಿರುವ 36ರ ಹರೆಯದ ಸೆರೆನಾ, ಹೆಣ್ಣು ಮಗುವಿಗೆ ಜನ್ಮ ನೀಡಿ ದೀರ್ಘ ಸಮಯದ ಬಿಡುವಿನ ಬಳಿಕ ಕಳೆದ ಮಾರ್ಚ್ ನಲ್ಲಿ ಮರಳಿ ಕಣಕ್ಕಿಳಿದಿದ್ದರು. ಆದರೆ ಆ ಹೊತ್ತು ಸೆರೆನಾ ತನ್ನ ಆಟದ ಪ್ರಖರತೆಯನ್ನು ಕಳೆದುಕೊಂಡಿದ್ದರು.

ಮಾರ್ಚ್ ಆರಂಭದಲ್ಲಿ ನಡೆದಿದ್ದ ಇಂಡಿಯಾನ ವೇಲ್ಸ್ ಸಂದರ್ಭ ಸ್ಪರ್ಧೆಗೆ ಮರಳಿದ್ದ ಸೆರೆನಾ ಮಾರ್ಚ್ ಅಂತ್ಯದಲ್ಲಿ ಮಿಯಾಮಿ ಓಪನ್ ನಲ್ಲಿ ಜಪಾನ್ ನ ನವೋಮಿ ಒಸಾಕ ಅವರಿಂದ ಮೊದಲ ಸುತ್ತಿನಲ್ಲೇ ಪರಾಭವಗೊಂಡಿದ್ದರು. ಬಳಿಕ ಅವರು ಯಾವುದೇ ಪಂದ್ಯವನ್ನು ಆಡಿರಲಿಲ್ಲ.

'ನಾಲ್ಕು ಬಾರಿ ಪ್ರಶಸ್ತಿ ಗೆದ್ದಿರುವ ಸೆರೆನಾ ಇಟಾಲಿಯನ್ ಓಪನ್ ನಿಂದ ಹಿಂದೆ ಸರಿದಿರುವ ಸಂಗತಿ ತಿಳಿಸಲು ನಮಗೆ ಬೇಸರವಾಗುತ್ತಿದೆ. 2019ರ ಇಟಾಲಿಯನ್ ಓಪನ್ ನಲ್ಲೂ ಸೆರೆನಾ ಪಾಲ್ಗೊಳ್ಳುವುದನ್ನು ನಾವು ಕಾಣಲು ಸಾಧ್ಯವಿಲ್ಲ' ಎಂದು ಇಟಾಲಿಯನ್ ಓಪನ್ ಆಯೋಜಕರು ತಿಳಿಸಿದ್ದಾರೆ.

ಒಟ್ಟು 23 ಗ್ರ್ಯಾಂಡ್ಸ್ಲ್ಯಾಮ್ ಪ್ರಶಸ್ತಿ ಜಯಿಸಿರುವ ಬಲಾಡ್ಯೆ, ಮಗುವಿಗೆ ಜನ್ಮ ನೀಡಿದ ಬಳಿಕ ಟೆನಿಸ್ ಆಟದಲ್ಲಿ ಹಿನ್ನಡೆ ಕಾಣುತ್ತಿದ್ದಾರೆ. ಇಟಾಲಿಯನ್ ಓಪನ್ ಮೇ 14-ರಿಂದ 20ರ ವರೆಗೆ ನಡೆಯಲಿದ್ದು, ಮೇ 27ರಂದು ಫ್ರೆಂಚ್ ಓಪನ್ ಆರಂಭಗೊಳ್ಳಲಿದೆ.

Story first published: Wednesday, May 9, 2018, 18:04 [IST]
Other articles published on May 9, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+