Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಬಲ್ಡನ್ ಸೋತ ಸೆರೆನಾ ಅವರಿಂದ ಅಮ್ಮಂದಿರಿಗೊಂದು ಸಂದೇಶ!

Serena Williams sends a message to mothers after Wimbledon loss

ಲಂಡನ್, ಜುಲೈ 15: ವಿಂಬಲ್ಡನ್ ವನಿತಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಏಂಜೆಲಿಕ್ ಕೆರ್ಬರ್ ವಿರುದ್ಧ ಸೋತ ಸೆರೆನಾ ವಿಲಿಯಮ್ಸ್ ತಾಯಂದಿರಿಗೊಂದು ಸಂದೇಶ ರವಾನಿಸಿದ್ದಾರೆ. ನಾನೀ ಪಂದ್ಯವನ್ನು ಎಲ್ಲಾ ತಾಯಂದಿರಿಗೋಸ್ಕರ ಆಡಿದೆ ಎಂದು ಸೆರೆನಾ ಹೇಳಿದ್ದಾರೆ.

ಶನಿವಾರ ನಡೆದ ವಿಂಬಲ್ಡನ್ ವನಿತಾ ಸಿಂಗಲ್ಸ್ ನಲ್ಲಿ ಸೆರೆನಾ, ಜರ್ಮನ್ ಆಟಗಾರ್ತಿ ಕೆರ್ಬರ್ ವಿರುದ್ಧ 6-3, 6-3ರ ಅಂತರದಿಂದ ಸೋತು ನಿರಾಸೆ ಅನುಭವಿಸಿದ್ದರು. ಎಂಟು ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ಸೆರೆನಾ ಈ ಬಾರಿಯ ವಿಂಬಲ್ಡನ್ ಗೆಲ್ಲುವ ಮೂಲಕ 24ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗೆ ಮುತ್ತಿಕ್ಕಲು ಆಸೆಪಟ್ಟಿದ್ದರು. ಆದರೆ ಅವರ ಆ ಆಸೆ ನಿನ್ನೆಯ ಪಂದ್ಯದೊಂದಿಗೆ ಮಣ್ಣು ಪಾಲಾಗಿತ್ತು.

ಪಂದ್ಯದ ನಂತರ ಸಂದರ್ಶನವೊಂದರ ವೇಳೆ ಮಾತನಾಡಿದ ಸೆರೆನಾ, ತಾಯಂದಿರ ಪರವಾಗಿ ನಾನೀ ಪಂದ್ಯವನ್ನು ಆಡಿದೆ. ಆಟಕ್ಕೆ ಮರಳಲು ಬಯಸಿದ್ದೇ ಆದರೆ ಮಗುವಾದ ಬಳಿಕವೂ ತಾಯಿಯೊಬ್ಬಳು ಫಿಟ್ನೆಸ್ ಗೆ ಬರಬಲ್ಲಳು. ಅದಕ್ಕೆ ಕೊಂಚ ಸಮಯ ಬೇಕಾದೀತಷ್ಟೇ. ನಾನೀಗ ಪುನರಾರಂಭದಲ್ಲಿದ್ದೇನೆ ಎಂದು ತಿಳಿಸಿದರು.

'ಸಹಜವಾಗೇ ಈ ಸೋಲು ನಿರಾಸೆ ಮೂಡಿಸುತ್ತದೆ. ಆದರೆ ನಾನು ನಿರಾಸೆಗೊಂಡಿಲ್ಲ. ಯಾಕೆಂದರೆ ನಾನಿನ್ನೂ ಮುನ್ನಡೆಯೋದಿದೆ. ಮಗುವಾದ ಬಳಿಕ ನಾನು ಈಗಷ್ಟೇ ಆಟಕ್ಕೆ ಮರಳುತ್ತಿದ್ದೇನೆ; ಇದು ನಿಮಗೂ ಗೊತ್ತಿದೆ' ಎಂದು ಸೆರೆನಾ ತಿಳಿಸಿದರು. ನೀವೀಗ ಸೂಪರ್ ಮಾಮ್ ಅಲ್ಲವೆ? ಎಂಬ ಸುದ್ದಿಗಾರರ ಪ್ರಶ್ನೆಗೆ, 'ಹಾಗೇನಿಲ್ಲ, ನಾನು ಬರಿ ನಾನಷ್ಟೇ' ಎಂದು ಸೆರೆನಾ ನಗುತ್ತಾ ನುಡಿದರು.

ಜುಲೈ 15ರ ಇಂದು (ಸಂಜೆ 6ಕ್ಕೆ) ಸೆಂಟರ್ ಕೋರ್ಟ್ ನಲ್ಲಿ ವಿಂಬಲ್ಡನ್ ಪುರುಷರ ಸಿಂಗಲ್ಸ್ ಪಂದ್ಯ ನಡೆಯುತ್ತಿದ್ದು, ಸೌತಾಫ್ರಿಕಾದ ಕೆವಿನ್ ಆ್ಯಂಡರ್ಸನ್ ಮತ್ತು ಸರ್ಬಿಯಾದ ಜೊಕೊವಿಕ್ ಮುಖಾಮುಖಿಯಾಗಿದ್ದಾರೆ.

Story first published: Sunday, July 15, 2018, 19:00 [IST]
Other articles published on Jul 15, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+