ಫ್ರೆಂಚ್ ಓಪನ್: ಮೊದಲ ಸುತ್ತಿನಲ್ಲಿ ಸೆರೆನಾಗೆ ಕ್ರಿಸ್ಟೀನಾ ಸವಾಲು

ಪ್ಯಾರೀಸ್, ಮೇ 29: ಫ್ರೆಂಚ್ ಓಪನ್ ನಲ್ಲಿ ಮೂರು ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಇಂದು ಮತ್ತೆ ಸ್ಪರ್ಧೆಗಿಳಿಯಲಿದ್ದು, ಮೊದಲ ಸುತ್ತಿನಲ್ಲಿ ಜೆಕ್ ಆಟಗಾರ್ತಿ ಕ್ರಿಸ್ಟೀನಾ ಪ್ಲಿಸ್ಕೋವಾ ಅವರ ಸವಾಲು ಸ್ವೀಕರಿಸಲಿದ್ದಾರೆ.
ಸಂಜೆ 4 ಗಂಟೆಗೆ ಫಿಲಿಪ್ ಚಾಟ್ರಿಯರ್ ಕೋರ್ಟ್ ನಲ್ಲಿ ಪ್ಲಿಸ್ಕೋವಾ-ವಿಲಿಯಮ್ಸ್ ಕಾದಾಡಲಿದ್ದಾರೆ. ಇಷ್ಟರವರೆಗೆ ಫಾರ್ಮ್ ಕಳೆದುಕೊಂಡು ನಿರಾಸೆ ಅನುಭವಿಸಿದ್ದ ಮಾಜಿ ವಿಶ್ವ ನಂ. 1 ಆಟಗಾರ್ತಿ ಇಂದು ಜಯ ಗಳಿಸುವ ಎಲ್ಲಾ ಸಾಧ್ಯತೆಗಳಿವೆ.
ಫ್ರೆಂಚ್ ಓಪನ್ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಸೆರೆನಾ ಈ ಹಿಂದೆ ಮ್ಯಾಡ್ರಿಡ್ ಓಪನ್ ಮತ್ತು ರೋಮ್ ಓಪನ್ ನಿಂದ ಹಿಂದೆ ಸರಿದಿದ್ದರು. ಫ್ರೆಂಚ್ ಓಪನ್ ಗೆ ಇನ್ನಷ್ಟು ತಯಾರಿ ನಡೆಸುವುದಕ್ಕೋಸ್ಕರ ಈ ಪಂದ್ಯಗಳಿಂದ ಹಿಂದೆ ಸರಿಯುತ್ತಿರುವುದಾಗಿ ಸೆರೆನಾ ಅವರ ಕೋಚ್ ಪ್ಯಾಟ್ರಿಕ್ ಮೌರಟೊಗ್ಲೋ ಅವರು ತಿಳಿಸಿದ್ದರು.
36ರ ಹರೆಯದ ಅಮೆರಿಕಾ ಬಲಾಡ್ಯೆ 2017ರಲ್ಲಿ ಗರ್ಭಿಣಿಯಾಗಿದ್ದರೂ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದು ಎಲ್ಲರನ್ನು ಬೆರಗಾಗಿಸಿದ್ದರು. ಆನಂತರ ಮಗು ಹೆತ್ತು ಕೊಂಚ ಟೆನಿಸ್ ನಿಂದ ದೂರ ಉಳಿದಿದ್ದ ಸೆರೆನಾ ಫಾರ್ಮ್ ಕಳೆದುಕೊಂಡಿದ್ದರು.
ಈವರೆಗೆ ಒಟ್ಟ್23 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಜಯಿಸಿರುವ ಸೆರೆನಾ ಮಗು ಹೆತ್ತ ಬಳಿಕ ತನ್ನ ಆಟದ ಪ್ರಖರತೆಯನ್ನೇ ಕಳೆದುಕೊಂಡಿದ್ದು, ಇಂದು ಬಿರುಸಿನ ಆಟ ಪ್ರದರ್ಶಿಸುವ ಮೂಲಕ ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸುವ ಎಲ್ಲಾ ಸಾಧ್ಯತೆಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications