ಯುಎಸ್ ಓಪನ್‌ಗೆ ಹೊಸ ಅಸ್ತ್ರದೊಂದಿಗೆ ಸೆರೆನಾ ವಿಲಿಯಮ್ಸ್ ಸಿದ್ದತೆ!

ಕೊರೊನಾ ವೈರಸ್ ಹಾವಳಿಯ ನಡುವೆಯೂ ಆಗಸ್ಟ್ 31ರಿಂದ ಪ್ರೇಕ್ಷಕರಿಲ್ಲದೆ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಯೋಜನೆಗೆ ಅಮೆರಿಕ ಸಿದ್ಧವಾಗುತ್ತಿದೆ. ಈಗಾಗಲೆ ವಿಶ್ವದ ಕೆಲ ಪ್ರಮುಖ ಟೆನಿಸ್ ತಾರೆಯರು ಈ ಟೂರ್ನಿಯಲ್ಲಿ ಆಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಅಮೆರಿಕಾ%
ಯಸ್, ದಾಖಲೆಯ 24ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿರುವ ಆತಿಥೇಯ ಅಮೆರಿಕದ ತಾರೆ ಸೆರೇನಾ ವಿಲಿಯಮ್ಸ್ ಅದಕ್ಕಾಗಿ ಭರ್ಜರಿ ಸಿದ್ದತೆಯಲ್ಲಿದ್ದಾರೆ. ಸೆರೆನಾ ತಮ್ಮ ಮನೆಯ ಟೆನ್ನಿಸ್ ಕೋರ್ಟ್‌ಗೆ ಮಹತ್ವದ ಬದಲಾವಣೆ ಮಾಡಿಕೊಂಡಿದ್ದಾರೆ. ಯುಎಸ್ ಓಪನ್‌ಗೆ ಬಳಸುವ ಮೇಲ್ಮೈಯನ್ನೇ ಇಲ್ಲಿ ತಮ್ಮ ಮನೆಯ ಅಂಗಳಕ್ಕೆ ಬಳಸಿಕೊಳ್ಳುತ್ತಿದ್ದಾರೆ ಸೆರೆನಾ ವಿಲಿಯಮ್ಸ್
ಟೆನ್ನಿಸ್ ಕೋರ್ಟ್ ಸಿದ್ದಗೊಳ್ಳುತ್ತಿರುವ ಬಗ್ಗೆ ಸ್ವತಃ ಸೆರೆನಾ ವಿಲಿಯಮ್ಸ್ ಹೇಳಿಕೊಂಡಿದ್ದಾರೆ. 'ನ್ಯೂಯಾರ್ಕ್‌ಗೆ ಮರಳಿ 2020ರ ಯುಎಸ್ ಓಪನ್ ಆಡಲು ಕಾತರದಿಂದ ಕಾಯುತ್ತಿದ್ದೇನೆ' ಎಂದು 6 ಬಾರಿಯ ಯುಎಸ್ ಓಪನ್ ಚಾಂಪಿಯನ್ ಹೇಳಿದ್ದಾರೆ.
ಇಲ್ಲಿ ಮತ್ತೊಂದು ಪ್ರಮುಖ ವಿಚಾರವೇನೆಂದರೆ ಯುಎಸ್ ಓಪನ್ ಟೆನ್ನಿಸ್ ಕೋರ್ಟ್‌ನ ಮೇಲ್ಮೈ ಸಿದ್ದಪಡಿಸುತ್ತಿರುವ ಕಂಪನಿಯೇ ಸೆರೆನಾ ಮನೆಯ ಟೆನ್ನಿಸ್ ಕೋರ್ಟ್‌ನ ಮೇಲ್ಮೈಯನ್ನು ಸಿದ್ದಗೊಳಿಸುತ್ತಿದೆ. ಈ ಹಿಂದೆ ಯುಎಸ್ ಓಪನ್ ಟೆನ್ನಿಸ್ ಕೋರ್ಟನ್ನು ಡೆಕೋ ಡರ್ ಸಿದ್ದಗೊಳಿಸುತ್ತಿತ್ತು. ಆದರೆ ಈ ಬಾರಿ ಅದರ ಗುತ್ತಿಗೆಯನ್ನು ಲೇಕೋಲ್ಡ್ ಕಂಒನಿಗೆ ಬದಲಾಯಿಸಲಾಗಿದೆ. ಲೇಕೋಲ್ಡ್ ಕಂಪನಿಯೇ ಸೆರೆನಾ ವಿಲಿಯಮ್ಸ್ ಮನೆಯ ಟೆನ್ನಿಸ್ ಕೋರ್ಟ್ ಮೇಲ್ಮೈಯನ್ನು ಸಿದ್ದಗೊಳಿಸುತ್ತಿದೆ.
ಕಳೆದೆರಡು ವರ್ಷಗಳಲ್ಲಿ ಯುಎಸ್ ಓಪನ್ ಗೆಲ್ಲಲು ಸಾಧ್ಯವಾಗದ ಸೆರೆನಾ ಈ ಬಾರಿ ಎಡವದಂತೆ ಸಿದ್ದಗೊಳ್ಳುತ್ತಿದ್ದಾರೆ. ಇದಕ್ಕೆ ತನ್ನ ಮನೆಯಂಗಳದಲ್ಲಿ ಸಿದ್ದಗೊಳ್ಳುತ್ತಿರುವ ಹೊಸ ಮೇಲ್ಮೈಯ ಕೋರ್ಟ್ ಸಹಕಾರಿಯಾಗುವುದು ಬಹುತೇಕ ನಿಶ್ಚಿತ ಎಂದೇ ಹೇಳಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications