Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಹೋದರಿ ವೀನಸ್ ಎದುರಿನ ಸ್ಪರ್ಧೆಯಿಂದ ಹಿಂದೆ ಸರಿದ ಸೆರೆನಾ ವಿಲಿಯಮ್ಸ್

Serena Williams withdraws from Italian Open with knee problem

ರೋಮ್, ಮೇ 15: ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯಿಂದ ಅಮೆರಿಕಾ ಬಲಾಡ್ಯೆ ಸೆರೆನಾ ವಿಲಿಯಮ್ಸ್ ಹಿಂದೆ ಸರಿದಿದ್ದಾರೆ. ಎಡ ಮೊಣಕಾಲಿನ ಗಾಯಕ್ಕೀಡಾಗಿರುವುದರಿಂದ ಟೂರ್ನಿಯಲ್ಲಿ ಆಡುತ್ತಿಲ್ಲ ಎಂದು ವಿಲಿಯಮ್ಸ್ ಮಂಗಳವಾರ (ಮೇ 14) ಸ್ಪಷ್ಟಪಡಿಸಿದ್ದಾರೆ.

'ಮೊಣಕಾಲು ಗಾಯದಿಂದ ಬಳಲುತ್ತಿರುವುದರಿಂದ ಸೆರೆನಾ ವಿಲಿಯಮ್ಸ್ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ' ಎಂದು ಆಯೋಜಕರು ತಿಳಿಸಿದ್ದಾರೆ. 23 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಸೆರೆನಾ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದರು.

ಮೇ 13ರ ಸೋಮವಾರ ನಡೆದ ಮಹಿಳಾ ವಿಭಾಗದ ಸಿಂಗಲ್ಸ್ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಸೆರೆನಾ ಅವರು ಸ್ವೀಡನ್‌ನ ರೆಬೆಕಾ ಪೀಟರ್‌ಸನ್ ಅವರನ್ನು 6-4, 6-2ರ ನೇರ ಸೆಟ್‌ನಿಂದ ಮಣಿಸಿ ಮುನ್ನಡೆ ಗಿಟ್ಟಿಸಿಕೊಂಡಿದ್ದರು. ದ್ವಿತೀಯ ಸುತ್ತಿನಲ್ಲಿ ವಿಲಿಯಮ್ಸ್, ತನ್ನ ಸಹೋದರಿ ವೀನಸ್ ವಿಲಿಯಮ್ಸ್ ಸವಾಲು ಸ್ವೀಕರಿಸುವುದರಲ್ಲಿದ್ದರು.

Story first published: Wednesday, May 15, 2019, 15:48 [IST]
Other articles published on May 15, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+