ಯುಎಸ್ ಓಪನ್‌ನಿಂದ ಅಮೆರಿಕಾ ಬಲಿಷ್ಠೆ ಸೆರೆನಾ ವಿಲಿಯಮ್ಸ್ ಹೊರಕ್ಕೆ

ವಾಷಿಂಗ್ಟನ್: ಮುಂದಿನ ವಾರ ಯುಎಸ್‌ನಲ್ಲಿ ನಡೆಯಲಿರುವ ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಅಮೆರಿಕಾದ ಬಲಿಷ್ಠೆ ಸೆರೆನಾ ವಿಲಿಯಮ್ಸ್ ಹೇಳಿದ್ದಾರೆ. ಟೋರ್ನ್ ಹ್ಯಾಮ್‌ಸ್ಟ್ರಿಂಗ್‌ ಸಂಪೂರ್ಣವಾಗಿ ಗುಣವಾಗಿಲ್ಲವಾದ್ದರಿಂದ ವರ್ಷದ ಕೊನೇಯ ಗ್ರ್ಯಾಂಡ್‌ಸ್ಲ್ಯಾಮ್‌ ಟೂರ್ನಿಯಲ್ಲಿ ತನಗೆ ಪಾಲ್ಗೊಳ್ಳಲಾಗುತ್ತಿಲ್ಲ ಎಂದು ವಿಲಿಯಮ್ಸ್ ತಿಳಿಸಿದ್ದಾರೆ.

ಕುತೂಹಲಕಾರಿ ಸಂಗತಿಗಳ ಬಿಚ್ಚಿಟ್ಟ ನೀರಜ್ ಚೋಪ್ರಾ ಕೋಚ್ ಕಾಶೀನಾಥ್ ನಾಯ್ಕ್!ಕುತೂಹಲಕಾರಿ ಸಂಗತಿಗಳ ಬಿಚ್ಚಿಟ್ಟ ನೀರಜ್ ಚೋಪ್ರಾ ಕೋಚ್ ಕಾಶೀನಾಥ್ ನಾಯ್ಕ್!

ಫ್ಲಷಿಂಗ್ ಮೆಡೋವ್ಸ್ ಎಂದು ಕರೆಯಲಾಗುವ ಯುಎಸ್ ಓಪನ್ ಟೂರ್ನಿಯಲ್ಲಿ ಒಟ್ಟು ಆರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಸೆರೆನಾ ವಿಲಿಯಮ್ಸ್ ಈ ಸೀಸನ್‌ ಇಡೀ ಬಹುತೇಕ ಗಾಯದಿಂದ ಬಳಲುತ್ತಿದ್ದಾರೆ. ಕಳೆದ ವಿಂಬಲ್ಡನ್‌ನಲ್ಲೂ ಕಾಲಿನ ಗಾಯದಿಂದಾಗಿ ಮೊದಲ ಸುತ್ತಿನಲ್ಲೇ ಹೊರ ನಡೆದು ನಿರಾಶೆ ಅನುಭವಿಸಿದ್ದರು.

39ರ ಹರೆಯದ ಸೆರೆನಾ 24ನೇ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವುದಕ್ಕಾಗಿ ಸುದೀರ್ಘ ಕಾಲದಿಂದ ಕಾಯುತ್ತಿದ್ದಾರೆ. ಆದರೆ ಗಾಯದ ಸಮಸ್ಯೆಯಿಂದ ಟೋಕಿಯೋ ಒಲಿಂಪಿಕ್ಸ್‌ನಿಂದ ಸೆರೆನಾ ಹೊರಗುಳಿದಿದ್ದರು. ಸಿನ್ಸಿನಾಟಿ ಮಾಸ್ಟರ್ಸ್ ನಿಂದಲೂ ದೂರ ಉಳಿದಿದ್ದರು. ಆದರೆ ಯುಎಸ್ ಓಪನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಆಸೆ ಇರಿಸಿಕೊಂಡಿದ್ದರು.

ಐಪಿಎಲ್ 2021: ಆರ್‌ಸಿಬಿ ತಂಡಕ್ಕೆ ಕೇನ್ ರಿಚರ್ಡ್ಸನ್ ಸ್ಥಾನಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆಐಪಿಎಲ್ 2021: ಆರ್‌ಸಿಬಿ ತಂಡಕ್ಕೆ ಕೇನ್ ರಿಚರ್ಡ್ಸನ್ ಸ್ಥಾನಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

"ನನ್ನ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಎಚ್ಚರಿಕೆ ಸಲಹೆ ಕೇಳಿಸಿಕೊಂಡ ಬಳಿಕ, ನನ್ನ ದೇಹ ಸಂಪೂರ್ಣವಾಗಿ ಗುಣಮುಖವಾಗುವುದಕ್ಕಾಗಿ ನಾನು ಮುಂಬರಲಿರುವ ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ," ಎಂದು ಸಾಮಾಜಿಕ ಜಾಲತಾಣದಲ್ಲಿ ಸೆರೆನಾ ಬರೆದುಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, August 26, 2021, 8:15 [IST]
Other articles published on Aug 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X