ಡೇವಿಸ್ ಕಪ್ ಫೈನಲ್ಸ್ ಟೆನಿಸ್ ಟೂರ್ನಿ 2021ರ ವರೆಗೆ ಮುಂದೂಡಿಕೆ

ನವದೆಹಲಿ, ಜೂನ್ 26: 2020ರಲ್ಲಿ ಡೇವಿಸ್ ಕಪ್ ಫೈನಲ್ಸ್ ಟೆನಿಸ್ ಟೂರ್ನಿ ನಡೆಯುತ್ತಿಲ್ಲ. ಡೇವಿಸ್ ಕಪ್ ಫೈನಲ್ಸ್ 2021ರ ವರೆಗೆ ಮುಂದೂಡಲ್ಪಟ್ಟಿದೆ ಎಂದು ಡೇವಿಸ್ ಕಪ್ ಫೈನಲ್ಸ್ ವೆಬ್‌ಸೈಟ್ ಕೊಸ್ಮೋಸ್ ಟೆನಿಸ್ ಮತ್ತು ಇಂಟರ್ ನ್ಯಾಷನಲ್ ಟೆನಿಸ್ ಫೆಡರೇಶನ್ ಖಾತರಿಪಡಿಸಿದೆ.
ಕೊರೊನಾವೈರಸ್ ಭೀತಿ ಶುರುವಾದ ಕಳೆದ ಮಾರ್ಚ್ ತಿಂಗಳಿನಿಂದಲೂ ಯಾವುದೇ ಟೆನಿಸ್ ಟೂರ್ನಿಗಳು ನಡೆಯುತ್ತಿಲ್ಲ. ಶುರುವಾದರೂ ಎಲ್ಲಾ ಟೆನಿಸ್ ಟೂರ್ನಿಗಳು ಆಗಸ್ಟ್ ಬಳಿಕವಷ್ಟೇ ನಡೆಯಲಿದೆ. ಆದರೆ ಕೊರೊನಾ ಆತಂಕ ಹೆಚ್ಚುತ್ತಿರುವುದರಿಂದ ಆಗಸ್ಟ್ ಬಳಿಕವೂ ಟೂರ್ನಿ ನಡೆಸುವ ಬಗ್ಗೆ ಈಗಲೂ ಭಿನ್ನಾಭಿಪ್ರಾಯಗಳು ಕೇಳಿ ಬರುತ್ತಿವೆ.
2020ರ ಡೇವಿಸ್ ಕಪ್ ಫೈನಲ್ಸ್ ಟೂರ್ನಿ ನವೆಂಬರ್ 23-29ರ ವರೆಗೆ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ ಕಾಜಾ ಮ್ಯಾಜಿಕಾದಲ್ಲಿ ನಡೆಯುವುದರಲ್ಲಿತ್ತು. ಆದರೆ 18 ತಂಡಗಳ ಈ ಪ್ರತಿಷ್ಠಿತ ಟೂರ್ನಿ 2021ರ ಬಳಿಕ ನಡೆಸಲು ನಿರ್ಧರಿಸಲಾಗಿದೆ.
'2020ರಲ್ಲಿ ಡೇವಿಸ್ ಕಪ್ ಫೈನಲ್ಸ್ ನಡೆಯುವುದಿಲ್ಲ ಎಂಬುದು ನಮ್ಮೆಲ್ಲರಿಗೂ ದೊಡ್ಡ ನಿರಾಶೆಯಾಗಿದೆ,' ಎಂದು ಕೊಸ್ಮೋಸ್ ಟೆನಿಸ್ ಅಧ್ಯಕ್ಷ ಗೆರಾರ್ಡ್ ಪಿಕ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications