ಆವೆ ಮಣ್ಣಿನ ಹೀರೋ ನಡಾಲ್ ನನ್ನು ಹೊರಗಟ್ಟಿದ ಜರ್ಮನ್
ಲಂಡನ್, ಜು.03: ಎರಡು ಬಾರಿ ಚಾಂಪಿಯನ್ ಆವೆ ಮಣ್ಣಿನ ಅಂಕಣದ ಹೀರೋ ಸ್ಪೇನಿನ ರಾಫೆಲ್ ನಡಾಲ್ ಮತ್ತೊಮ್ಮೆ ಹುಲ್ಲುಹಾಸಿನ ವಿಂಬಲ್ಡನ್ ನಲ್ಲಿ ಮುಗ್ಗರಿಸಿದ್ದಾರೆ. ಮೊದಲ ಬಾರಿಗೆ ಆಡುವ ಅರ್ಹತೆ ಪಡೆದುಕೊಂಡ ಜರ್ಮಿನಿಯ ಆಟಗಾರ ಡಸ್ಟಿನ್ ಅವರ ವಿರುದ್ಧ ನಡಾಲ್ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ವಿಂಬಲ್ಡನ್ ಟೆನಿಸ್ ಟೂರ್ನಿಯ ಅಪ್ಡೇಟ್ಸ್ ಇಲ್ಲಿದೆ...
10ನೇ ಸೀಡ್ ನ ಸ್ಪೇನಿಯ ರಾಫೆಲ್ ನಡಾಲ್ ಅವರನ್ನು 102ನೇ ಶ್ರೇಯಾಂಕದ ಡಸ್ಟಿನ್ ಬ್ರೌನ್ ಅವರು 7-5, 3-6,6-4,6-4 ಅಂತರದಲ್ಲಿ ಸೋಲಿಸಿ ವಿಜಯೋತ್ಸವ ಆಚರಿಸಿದ್ದಾರೆ. [ವಿಂಬಲ್ಡನ್ ಕದನ: ಜೊಕೊವಿಕ್, ಸೆರೆನಾ ಟಾಪ್ ಸೀಡ್]
ಜಮೈಕಾ ಮೂಲದ ಬ್ರೌನ್ 2010ರಲ್ಲಿ ಜರ್ಮನಿಗೆ ವಲಸೆ ಬಂದು ಟೆನಿಸ್ ನಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ವಿಂಬಲ್ಡನ್ ನಲ್ಲಿ ಅರ್ಹತೆ ಪಡೆದುಕೊಂಡಿದ್ದರು. ನಡಾಲ್ ಅವರು ಬ್ರೌನ್ ಬಾರಿಸಿದ 13 ಏಸ್ ಗಳ ಹೊಡೆತಕ್ಕೆ ತತ್ತರಿಸಿಬಿಟ್ಟರು.
ಕಳೆದ ನಾಲ್ಕು ವರ್ಷಗಳಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ನಡಾಲ್ ಅವರು 100ಕ್ಕಿಂತ ಹೆಚ್ಚಿನ ಶ್ರೇಯಾಂಕಿತ ಆಟಗಾರರಿಂದ ಸೋಲು ಕಂಡು ವಿಂಬಲ್ಡನ್ ನಿಂದ ಹೊರಬಿದ್ದ ಉದಾಹರಣೆಗಳಿವೆ. (ಒನ್ ಇಂಡಿಯಾ ಸುದ್ದಿ)

ಆಟಗಾರರು ಹಾಗೂ ಪ್ರೇಕ್ಷಕರಿಗೂ ಬಿಸಿ ಅನುಭವ
ವಿಂಬಲ್ಡನ್ ಟೂರ್ನಿಯಲ್ಲಿ ದಿನದ ಉಷ್ಣಾಂಶ ದಾಖಲೆ 35.7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿರುವುದು ಆಟಗಾರರು ಹಾಗೂ ಪ್ರೇಕ್ಷಕರಿಗೆ ಈ ಬಾರಿ ಕಿರಿಕಿರಿ ಉಂಟು ಮಾಡುತ್ತಿದೆ.

ರೋಜರ್ ಫೆಡರರ್
ವಿಶ್ವದ ನಂ.3 ಆಟಗಾರ ಬ್ರಿಟನ್ನಿನ ಆಂಡಿ ಮರ್ರೆ ಹಾಗೂ ಸ್ವಿಸ್ ಆಟಗಾರ ರೋಜರ್ ಫೆಡರರ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತು ತಲುಪಿದ್ದಾರೆ.
ಏಳು ಬಾರಿಯ ಚಾಂಪಿಯನ್ ರೋಜರ್ ಫೆಡರರ್ ಅವರು ಅಮೆರಿಕದ ಸ್ಯಾಮ್ ಕ್ವೆರ್ರಿ ವಿರುದ್ಧ ಸುಲಭ ಗೆಲುವು ಸಾಧಿಸಿದರು. ಸ್ಯಾಮ್ ಕ್ವೆರ್ರಿ ವಿರುದ್ಧ 6-4, 6-2, 6-2 ಸೆಟ್‌ಗಳಿಂದ ಗೆಲುವು ದಾಖಲಿಸಿದರು

2013ರ ವಿಂಬಲ್ಡನ್ ಚಾಂಪಿಯನ್ ಮರ್ರೆ
2013ರ ವಿಂಬಲ್ಡನ್ ಚಾಂಪಿಯನ್ ಮರ್ರೆ ಅವರು ಡಚ್‌ನ ರಾಬಿನ್ ಹಾಸೆ ಅವರನ್ನು 6-1, 6-1, 6-4 ಸೆಟ್‌ಗಳಿಂದ ಮಣಿಸಿದರು.

ಮಹಿಳೆಯರ ಸಿಂಗಲ್ಸ್, ಡಬಲ್ಸ್ ಅಪ್ಡೇಟ್ಸ್
ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ವಿಂಬಲ್ಡನ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಎರಡನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಈ ಜೋಡಿ ಝರಿನಾ ಡಿಯಾಸ್ ಹಾಗೂ ಝಿಂಗ್‌ಸೈ ಅವರನ್ನು ಕೇವಲ 68 ನಿಮಿಷಗಳಲ್ಲಿ 6-2, 6-2 ನೇರ ಸೆಟ್‌ಗಳಿಂದ ಸೋಲಿಸಿದರು.

ನಡಾಲ್ ಗೆ ಅರ್ಹತೆ ಪಡೆದ ಆಟಗಾರಿಂದ ಸೋಲು
10ನೇ ಸೀಡ್ ನ ಸ್ಪೇನಿಯ ರಾಫೆಲ್ ನಡಾಲ್ ಅವರನ್ನು 102ನೇ ಶ್ರೇಯಾಂಕದ ಡಸ್ಟಿನ್ ಬ್ರೌನ್ ಅವರು 7-5, 3-6,6-4,6-4 ಅಂತರದಲ್ಲಿ ಸೋಲಿಸಿ ವಿಜಯೋತ್ಸವ ಆಚರಿಸಿದ್ದಾರೆ.
ಚಿತ್ರದಲ್ಲಿ: ಫ್ರಾನ್ಸಿನ ಮೊನ್ಫಿಲ್ಸ್ ಸರ್ವ್ ಮಾಡುತ್ತಿರುವ ಚಿತ್ರ

ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೋಕೋವಿಕ್
ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸೆರ್ಬಿಯಾದ ನೊವಾಕ್ ಜೋಕೋವಿಕ್.
*ಆಸ್ಟ್ರೀಯಾದ ಜರ್ಗೆನ್ ಮೆಲ್ಜರ್ ಹಾಗೂ ಸ್ವೀಡೀಷ್ ರಾಬರ್ಟ್ ಜೋಡಿ 6-3.6-3.2-6 ಅಂತರದಲ್ಲಿ ಭಾರತದ ಮಹೇಶ್ ಭೂಪತಿ ಹಾಗೂ ಸೆರ್ಬಿಯಾದ ತಿಪ್ಸರೆವಿಕ್ ಜೋಡಿಯನ್ನು ಸೋಲಿಸಿದೆ.
ಚಿತ್ರದಲ್ಲಿ: ಫ್ರಾನ್ಸಿನ ರಿಚರ್ಡ್
ಚಿತ್ರದಲ್ಲಿ: ಫ್ರಾನ್ಸಿನ ರಿಚರ್ಡ್.
ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ಹಂಗೇರಿಯದ ಟೈಮಿಯಾ ಬಾಬೊಸ್‌ರನ್ನು 6-4, 6-1 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ವಿಶ್ವ ಮಾಜಿ ನಂ.1 ಆಟಗಾರ್ತಿ ಕಾರೊಲಿನಾ ವೋಝ್ನಿಯಾಕಿ ಅವರು ಡೆನಿಸಾ ಅಲ್ಲೆರ್ಟೊವಾರನ್ನು 6-1, 7-6(8/6) ಸೆಟ್‌ಗಳಿಂದ ಮಣಿಸಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications