For Quick Alerts
ALLOW NOTIFICATIONS  
For Daily Alerts

'ಟೆನ್ನಿಸ್‌ಗೆ ಗುಡ್‌ ಬೈ ಹೇಳುತ್ತಿದ್ದೇನೆ': ಮರಿಯಾ ಶರಪೋವಾ ನಿವೃತ್ತಿ ಘೋಷಣೆ

Tennis Star Maria Sharapova Announces Retirement

ಪ್ಯಾರಿಸ್: ಟೆನಿಸ್‌ನ ಮಾಜಿ ನಂಬರ್1 ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾ ಅಂತಾರಾಷ್ಟ್ರೀಯ ಟೆನ್ನಿಸ್‌ಗೆ ವಿದಾಯ ಹೇಳಿದ್ದಾರೆ. ಟೆನ್ನಿಸ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ಶರಪೋವಾ ತಾನು ಟೆನ್ನಿಸ್‌ಗೆ ಗುಡ್‌ ಬೈ ಹೇಳುತ್ತಿರುವುದಾಗಿ ಘೋಷಿಸಿದ್ದಾರೆ.

32 ವರ್ಷದ ಮರಿಯಾ ಶರಪೋವಾ ಐದು ಗ್ರ್ಯಾಂಡ್‌ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ಸಾಧನೆಯನ್ನು ಮಾಡಿದ್ದಾರೆ. 28 ವರ್ಷಗಳ ಟೆನ್ನಿಸ್ ಬದುಕಿನಲ್ಲಿ 5 ಗ್ರ್ಯಾಂಡ್ ಸ್ಲ್ಯಾಮ್‌ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಈಗ ಮತ್ತೊಂದು ಎತ್ತರವನ್ನು ಏರಲು ಬಯಸುತ್ತಿದ್ದೇನೆ. ವಿಭಿನ್ನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಮದು ಹೇಳಿ ಭವಿಷ್ಯದ ಬಗ್ಗೆ ಕುತೂಹಲಕಾರಿಯಾಗಿ ಹೇಳಿಕೆಯನ್ನು ನೀಡಿದ್ದಾರೆ ಮರಿಯಾ ಶರಪೋವಾ.

2004ರಲ್ಲಿ ವಿಂಬಲ್ಡನ್ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಸಾಧನೆ ಮಾಡಿದ ಶರಪೋವಾ ಅವರು ವಿಶ್ವದ ನಂ.1 ಆಟಗಾರ್ತಿಯಾಗಿ ಮೆರೆದರು. ಟೆನಿಸ್ ಕ್ರೀಡೆಗೆ ಗ್ಲಾಮರ್ ಟಚ್ ತಂದವರು. ಟೆನ್ನಿಸ್ ಮಾತ್ರವಲ್ಲ ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚಿದ್ದಾರೆ.

ಕ್ರಿಕೆಟ್ ಜಗತ್ತು ಕಂಡ ಮಹಾನ್ ಆಟಗಾರ ಸಚಿನ್ ತೆಂಡೂಲ್ಕರ್ ಯಾರೆಂದು ನನಗೆ ಗೊತ್ತಿಲ್ಲ ಎಂದ ರಷ್ಯಾದ ಜನಪ್ರಿಯ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. ಮರಿಯಾ ವಿರುದ್ಧ ಸಚಿನ್ ಅಭಿಮಾನಿಗಳು ಕಿಡಿಕಾರಿದ್ದರು.

ನಿಷೇಧಿತ ಔಷಧಿ ಸೇವಿಸಿ ಡ್ರಗ್ ಟೆಸ್ಟ್ ನಲ್ಲಿ ಫೇಲಾದ ಕಾರಣ ಜನಪ್ರಿಯ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಅವರಿಗೆ ಎರಡು ವರ್ಷಗಳ ಕಾಲ ಅಮಾನತು ಶಿಕ್ಷೆ ಅನುಭವಿಸಿದ್ದರು. ಬಳಿಕ ನ್ಯಾಯಾಲಯದ ಮೂಲಕ ಈ ಶಿಕ್ಷೆಯ ಪ್ರಮಾಣವನ್ನು 15 ತಿಂಗಳಿಗೆ ತಗ್ಗಿಸಿಕೊಂಡು ಮತ್ತೆ ಟೆನ್ನಿಸ್ ಅಂಗಳಕ್ಕೆ ಇಳಿದಿದ್ದರು.

ಸದ್ಯ ಮರಿಯಾ ಶರಪೋವಾ ಡಬ್ಲ್ಯುಟಿಎ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ಶರಪೋವಾ 373ನೇ ಸ್ಥಾನದಲ್ಲಿದ್ದಾರೆ. ಗಾಯದ ಸಮಸ್ಯೆಯಿಂದ ಇತ್ತೀಚೆಗೆ ಟೆನ್ನಿಸ್‌ನಿಂದ ಶರಪೋವಾ ದೂರವಾಗಿದ್ದರು. ಈ ವರ್ಷ ಆಸ್ಟ್ರೇಲಿಯಾ ಓಪನ್‌ನಲ್ಲಿ ಭಾಗವಹಿಸಿದ್ದರೂ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರನಡೆದಿದ್ದರು.

Story first published: Wednesday, February 26, 2020, 21:53 [IST]
Other articles published on Feb 26, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+