For Quick Alerts
ALLOW NOTIFICATIONS  
For Daily Alerts

ಪಂದ್ಯದ ವೇಳೆ ರೇಗಾಡಿದ ಸೆರೆನಾ, ಒಸಾಕಾ ಯುಎಸ್ ಓಪನ್ ಚಾಂಪಿಯನ್

US Open 2018: Naomi Osaka wins after Serena Williams outburst

ನ್ಯೂಯಾರ್ಕ್, ಸೆಪ್ಟೆಂಬರ್ 9: ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ನಲ್ಲಿ ಫೈನಲ್ ನಲ್ಲಿ ನವೋಮಿ ಒಸಾಕಾ ಮೊದಲ ಜಪಾನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಫೈನಲ್ ಪಂದ್ಯದ ವೇಳೆ ಸೆರೆನಾ ವಿಲಿಯಮ್ಸ್ ಮತ್ತು ಅಂಪೈರ್ ಮಧ್ಯೆ ಮಾತಿನ ಜಟಾಪಟಿ ನಡೆದಿದ್ದು ಕಂಡುಬಂತು.

ಯುಎಸ್ ಓಪನ್ 2018ರ ಫೈನಲ್ ನಾಟಕೀಯ ದೃಶ್ಯಕ್ಕೆ ಸಾಕ್ಷಿಯಾಯಿತು. ಮ್ಯಾಚ್ ಅಂಪೈರ್ ಕಾರ್ಲೋಸ್ ರಾಮೋಸ್ ಮತ್ತು ಸೆರೆನಾ ವಿಲಿಯಮ್ಸ್ ಮಧ್ಯೆ ಮಾತಿನ ಜಟಾಪಟಿ ನಡೆಯಿತು. ಹೀಗಾಗಿ ಸೆರೆನಾಗೆ ಗೇಮ್ ಪೆನಾಲ್ಟಿ ನೀಡಲಾಯಿತು. ಅಂತಿಮವಾಗಿ ಒಸಾಕ 6-2, 6-4 ರಿಂದ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ತನ್ನದಾಗಿಸಿಕೊಂಡರು.

ನಡೆದಿದ್ದೇನು?
19ನೇ ಶ್ರೇಯಾಂಕಿತೆ ಒಸಾಕ ಮತ್ತು 26ನೇ ಶ್ರೇಯಾಂಕಿತೆ ಮಾಜಿ ವಿಶ್ವ ನಂ. 1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ನಡುವಿನ ಫೈನಲ್ ಪಂದ್ಯದ ವೇಳೆ ಸೆರೆನಾ ಗ್ಯಾಲರಿಯಲ್ಲಿ ಕೂತಿದ್ದ ತನ್ನ ಕೋಚ್ ಪ್ಯಾಟ್ರಿಕ್ ಮೌರಟೊಗ್ಲೋ ಅವರೊಡನೆ ಸಂವಹನ ಸಡೆಸುತ್ತಿದ್ದರು. ಅಂದರೆ ಪಂದ್ಯವಾಡುವಾಗ ಮಾರ್ಗದರ್ಶನ ಪಡೆಯುವಂತೆ ನಡೆದುಕೊಂಡಿದ್ದರು.

ಸೆರೆನಾ ಈ ವರ್ತನೆಯನ್ನು ಅಂಪೈರ್ ಕಾರ್ಲೋಸ್ ಗಮನಿಸಿ ಸೆರೆನಾಗೆ ಪೆನಾಲ್ಟಿ ವಿಧಿಸಿದರು. ಇದರಿಂದ ಸಿಡುಕಿದ ಸೆರೆನಾ, 'ಕಳ್ಳರ ಹಾಗೆ ಯಾಕೆ ಮಾಡುತ್ತೀರಿ. ಪಂದ್ಯದ ಮಧ್ಯೆ ನಾನು ಕೋಚ್ ಅವರಿಂದ ಯಾವುದೇ ರೀತಿಯ ತಂತ್ರವನ್ನು ಕೇಳಿ ಆಡುತ್ತಿಲ್ಲ' ಎಂದು ರೇಗಾಡಿದ್ದರು.

ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಸೆರೆನಾ ಕೋಚ್ ಮೌರಟೊಗ್ಲೋ, 'ಅವಳಿಗೆ ನಾನು ಮಾರ್ಗದರ್ಶನ ನೀಡುತ್ತಿದ್ದೆ ಹೌದು. ಆದರೆ ಅದರಲ್ಲಿ ವಿಶೇಷವೇನಿರಲಿಲ್ಲ. ಒಸಾಕಾ ಕೋಚ್ ಸಚ್ಚ ಬಜಿನ್ ಕೂಡ ಹೀಗೆ ಮಾರ್ಗದರ್ಶನ ನೀಡುತ್ತಿದ್ದರು. ಎಲ್ಲಾ ಕೋಚ್ ಗಳೂ ಕೂಡ ಹೀಗೆ ಮಾಡೋದಿದೆ' ಎಂದರು.

ಆದರೆ ಪಂದ್ಯದ ವೇಳೆ ಆಟಗಾರರ ಯಾ ಕೋಚ್ ಹೀಗೆ ನಡೆದುಕೊಳ್ಳುವಂತಿಲ್ಲ ಎಂಬ ನಿಮಾವಳಿಯಿದೆ. ಹೀಗೆ ನಡೆದುಕೊಂಡರೆ ಅದು ಪಂದ್ಯದ ನಿಯಮ ಉಲ್ಲಂಘಿಸಿದಂತೆ. ಹೀಗಾಗಿ ಪಂದ್ಯದ ಅಂಪೈರ್ ಸೆರೆನಾ ಮೇಲೆ ಕೋಪ ತೋರಿಸಿಕೊಂಡಿದ್ದರಲ್ಲದೆ ಸೆರೆನಾಗೆ ಪೆನಾಲ್ಟಿ ಹಾಕಿದ್ದರು.

Story first published: Sunday, September 9, 2018, 16:47 [IST]
Other articles published on Sep 9, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+