ಸುದೀರ್ಘ ಕಾಳಗದಲ್ಲಿ ಥೀಮ್ ಸೋಲಿಸಿದ ನಡಾಲ್ ಸೆಮಿಫೈನಲ್ ಗೆ


ನ್ಯೂಯಾರ್ಕ್, ಸೆಪ್ಟೆಂಬರ್ 5: ಯೂಎಸ್ ಓಪನ್ ಟೆನಿಸ್ ಪಂದ್ಯಾಟದ ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವ ನಂ. 1 ಆಟಗಾರ ರಾಫೆಲ್ ನಡಾಲ್ ಜಯ ಸಾಧಿಸುವ ಮೂಲಕ ಸೆಮಿ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ನಡಾಲ್-ಥೀಮ್ ಮಧ್ಯೆ ಭರ್ಜರಿ ಕಾಳಗ ನಡೆಯಿತು.
ಬುಧವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ಬಲಾಡ್ಯ ನಡಾಲ್ ಅವರು ಆಸ್ಟ್ರಿಯನ್ ಆಟಗಾರ ಡೊಮಿನಿಕ್ ಥೀಮ್ ವಿರುದ್ಧ 0-6, 6-4, 7-5, 6-7 (4-7), 7-6 (7-5)ರ ಭಾರೀ ಸೆಣಸಾಟದ ಬಳಿಕ ಪಂದ್ಯವನ್ನು ಗೆದ್ದುಕೊಂಡರು. ಇದು ಯೂಎಸ್ ಓಪನ್ ಈ ವರ್ಷದ ಸುದೀರ್ಘ ಪಂದ್ಯವೆಂಬ ದಾಖಲೆಗೂ ಕಾರಣವಾಯಿತು.
ಆರಂಭಿಕ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದರೂ ಮತ್ತೆ ತಿರುಗಿಬಿದ್ದ ನಡಾಲ್ ಅಗ್ರ ಶ್ರೇಯಾಂಕಿತ ಆಟಗಾರನಿಗೆ ತಕ್ಕ ಆಟ ಪ್ರದರ್ಶಿಸಿದರು. ವಿಶ್ವ ನಂ. 9ನೇ ಆಟಗಾರ ಥೀಮ್ ಕೂಡ ತೀವ್ರ ಪೈಪೋಟಿ ನೀಡಿದ್ದು ಪಂದ್ಯವನ್ನು ಇನ್ನಷ್ಟು ರೋಚಕ ಗೊಳಿಸಿತು.
ಇಬ್ಬರ ಮಧ್ಯೆ ಬರೋಬ್ಬರಿ 4 ಗಂಟೆ 49 ನಿಮಿಷಗಳ ಕಾಲ ಕಾದಾಟ ನಡೆದಿದ್ದು, ಇದು ರೋಚಕ ಪಂದ್ಯವೆನ್ನುವುದಕ್ಕೆ ಸಾಕ್ಷಿಯಾಯಿತು. ಸೆಮಿ ಫೈನಲ್ ಪಂದ್ಯ ಸೆಪ್ಟೆಂಬರ್ 8ರಂದು ನಡೆಯಲಿದ್ದು, ನಡಾಲ್ ಅವರು ಡೆಲ್ ಪೊಟ್ರೋ ಅವರ ಸವಾಲು ಸ್ವೀಕರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications