Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೆಡರರ್‌ಗೆ ಆಘಾತ: ಜೋಕೊವಿಕ್‌ ಯುಎಸ್ ಓಪನ್ ಗರಿ

ನ್ಯೂಯಾರ್ಕ್, ಸೆಪ್ಟೆಂಬರ್. 14: ಟೆನಿಸ್ ಪ್ರೇಮಿಗಳಿಗೆ ಭಾನುವಾರ ಮಧ್ಯರಾತ್ರಿ ಹಬ್ಬ. ವಿಶ್ವದ ಅಗ್ರಶ್ರೇಯಾಂಕದ ಆಟಗಾರರ ನಡುವಿನ ಹೋರಾಟಕ್ಕೆ ವೇದಿಕೆಯಾಗಿದ್ದು ಯು ಎಸ್ ಓಪನ್ ಫೈನಲ್ ಪಂದ್ಯ.

ನಿರೀಕ್ಷೆಯಂತೆ ಸೆರ್ಬಿಯಾದ ನೊವಾಕ್ ಜೋಕೋವಿಕ್ ಯುಎಸ್ ಓಪನ್ ಪುರುಷರ ಸಿಂಗಲ್ಸ್ ನಲ್ಲಿ ಸ್ವಿಜರ್​ಲೆಂಡ್​ನ ರೋಜರ್ ಫೆಡರರ್ ಅವರನ್ನು 6-4, 5-7, 6-4, 6-4ರಿಂದ ಸೋಲಿಸಿ ವಿಜಯಮಾಲೆ ಧರಿಸಿದ್ದಾರೆ.[ಕ್ರಿಕೆಟರ್ ವಿರಾಟ್ ಕೊಹ್ಲಿ ತಂಡದಲ್ಲಿ ಫೆಡರರ್ ಆಟ!]

US Open: Novak Djokovic downs Roger Federer to win his 10th major

ಈ ಮೂಲಕ ಜೋಕೋವಿಕ್ 2015ರಲ್ಲಿ 3ನೇ ಗ್ರ್ಯಾಂಡ್‌ ಸ್ಲಾಮ್ ಗೆದ್ದ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಇದು ಅವರ ವೃತ್ತಿ ಜೀವನದ 10ನೇ ಗ್ರಾಂಡ್​ಸ್ಲಾಂ ಪ್ರಶಸ್ತಿಯಾಗಿದೆ. [ವಿಂಬಲ್ಡನ್ ಕಿರೀಟ ಉಳಿಸಿಕೊಂಡ ಜೋಕೊವಿಕ್]

ಪಂದ್ಯಕ್ಕೆ ಮಳೆ ಅಡ್ಡಿ
ಪಂದ್ಯ ಆರ್ಮಭಕ್ಕೆ ಮಳೆ ಟ್ಟಿ ಉಂಟು ಮಾಡಿತ್ತು. ವಿಶ್ವದ ನಂ.1 ಆಟಗಾರ, ವಿಶ್ವದ ನಂ.2 ಆಟಗಾರ ನಡುವಿನ ಹೋರಾಟವನ್ನು ಜಗತ್ತಿನಾದ್ಯಂತ ಟೆನಿಸ್ ಪ್ರೇಮಿಗಳು ಕಣ್ಣು ತುಂಬಿಕೊಂಡರು.

34 ವರ್ಷದ ರೋಜರ್ ಫೆಡರರ್ ಪ್ರಶಸ್ತಿ ಗೆದ್ದುಕೊಂಡಿದ್ದರೇ ಗ್ರ್ಯಾಂಡ್ ಸ್ಲಾಂ ಗೆದ್ದ ಹಿರಿಯ ಎಂಬ ಶ್ರೇಯವನ್ನು ತಮ್ಮದಾಗಿರಿಸಿಕೊಳ್ಳುತ್ತಿದ್ದರು. ಸ್ವಿಸ್ ಆಟಗಾರ ಕಳೆದ ಕೆಲ ತಿಂಗಳಿನಿಂದ ತಮ್ಮ ಮೊದಲ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ.[ಅಭಿಮಾನಿಗಳನ್ನು 'ಬಸ್' ಹತ್ತಿಸಿದ ಕ್ರಿಕೆಟ್ ದೇವರು]

ಫೆಡರರ್ ಆಟವನ್ನು ಮೆಚ್ಚಲೇಬೇಕು. ಅವರು ನಮಗೆಲ್ಲ ಮಾರ್ಗದರ್ಶದಾಯಕ ಆಟಗಾರರು. ಅವರ ಟೆನಿಸ್ ಪ್ರೀತಿಯನ್ನು ಮೆಚ್ಚಿಕೊಳ್ಳಲೇಬೇಕು ಎಂದು ಪ್ರಶಸ್ಸತಿ ಜಯಿಸಿದ ನಂತರ ಜೋಕೋವಿಕ್ ಹೇಳಿದರು. ಫೈನಲ್ ನಲ್ಲಿ ಫೆಡರರ್ ವಿಜಯ ಸಾಧಿಸಿದ್ದರೆ ಅವರು 17 ಗ್ರ್ಯಾಂಡ್ ಸ್ಲಾಂ ಗೆದ್ದ ದಾಖಲೆಗೆ ಭಾಜನರಾಗುತ್ತಿದ್ದರು.

ವಿಂಬಲ್ಡನ್ ಪೈನಲ್ ಪಂದ್ಯದಲ್ಲೂ ಜೊಕೊವಿಗ್ ವಿರುದ್ಧ ಫೆಡರರ್ ಸೋಲು ಅನುಭವಿಸಿದ್ದರು. ಪುರುಷರ ವಿಭಾಗದ ಪ್ರಮುಖ ಆಟಗಾರರು ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದು ಈ ಬಾರಿಯ ಯುಸ್ ಓಪನ್ ವಿಶೆಷ.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+