ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಂಬಲ್ಡನ್ ಕಿರೀಟ ಉಳಿಸಿಕೊಂಡ ಜೋಕೊವಿಕ್

By Mahesh

ಲಂಡನ್, ಜು.13: ವಿಂಬಲ್ಡನ್ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ವಿಶ್ವದ ನಂ.1 ಸರ್ಬಿಯಾದ ನೊವಾಕ್ ಜೋಕೊವಿಕ್ ಅವರು ಮೂರನೇ ಬಾರಿ ವಿಂಬಲ್ಡನ್ ಕಿರೀಟ ಧರಿಸಿದ್ದಾರೆ. ದಾಖಲೆಗಳ ಬೆನ್ನು ಹತ್ತಿದ್ದ ರೋಜರ್ ಫೆಡರರ್ ಗೆ ತೀವ್ರ ಆಘಾತ ನೀಡಿದ್ದಾರೆ.

28ರ ಹರೆಯದ ಹಾಲಿ ವಿಂಬಲ್ಡನ್ ಚಾಂಪಿಯನ್ ಜೋಕೊವಿಕ್ ಅವರು ಸ್ವಿಟ್ಜರ್ಲೆಂಡ್ ನ ತಾರೆ ರೋಜರ್ ಫೆಡರರ್ ವಿರುದ್ಧ 7-6, 6-7, 6-4, 6-3 ಸೆಟ್‌ಗಳಿಂದ ಸತತ ಎರಡನೇ ಬಾರಿ ಜಯ ಗಳಿಸಿದರು. [ಸೆರೆನಾ ಅತ್ಯಂತ ಹಿರಿಯ ವಿಂಬಲ್ಡನ್ ಕ್ವೀನ್]

Djokovic shatters Federer's dream again to win Wimbledon title

2011ರಲ್ಲಿ ಮೊದಲ ಬಾರಿ ವಿಂಬಲ್ಡನ್ ಪ್ರಶಸ್ತಿ ಬಾಚಿಕೊಂಡಿದ್ದ ಜೊಕೊವಿಕ್ ಬಳಿಕ 2014 ಮತ್ತು 2015ರಲ್ಲಿ ಸತತ ಎರಡನೇ ಬಾರಿ ಟ್ರೋಫಿಯನ್ನು ವಶಪಡಿಸಿಕೊಂಡರು. ಎಂಟನೇ ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸುವ ಅವಕಾಶವನ್ನು ಕೈ ಚೆಲ್ಲಿದ ಫೆಡರರ್ ತಮ್ಮ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು. [ಸಾನಿಯಾ ಗುಣಗಾನ: ಮೋದಿ, ಶಾರುಖ್ ಟ್ವೀಟ್]

ಫೆಡರರ್ ಮತ್ತು ಜೊಕೊವಿಕ್ ಪರಸ್ಪರ 40ನೇ ಬಾರಿ ಮುಖಾಮುಖಿಯಾಗಿದ್ದ ಪಂದ್ಯ ಇದಾಗಿತ್ತು. ಗ್ರಾನ್‌ಸ್ಲಾಮ್‌ ಲೆಕ್ಕಾದಲ್ಲಿ 12ನೇ ಬಾರಿ ಮುಖಾಮುಖಿಯಾಗಿದ್ದರು. ಜೊಕೊವಿಕ್‌ಗೆ ಇದು 17ನೇ ಹಾಗೂ ಫೆಡರರ್‌ಗೆ 26ನೇ ಪ್ರಮುಖ ಅಂತಿಮ ಹಣಾಹಣಿಯಾಗಿತ್ತು.

ರಾಯಲ್ ಬಾಕ್ಸ್ ಸಮೀಪದಲ್ಲಿ ಹಾಲಿವುಡ್ ತಾರೆಗಳು ಕಂಡು ಬಂದರು. ಟೆನಿಸ್ ತಾರೆ ಬೋರ್ಗ್, ರಾಡ್ ಲಿವಿರ್, ಬೆನೆಡ್ಟಿಕ್ ಕಮರ್ಬ್ಯಾಚ್, ಹ್ಯೂ ಗ್ರಾಂಟ್, ಬ್ರಾಡ್ಲಿ ಕೂಪರ್. ಮುಂತಾದ ಗಣ್ಯಾತಿಗಣ್ಯರು ಈ ಪಂದ್ಯವನ್ನು ವೀಕ್ಷಿಸಿ ಆನಂದಿಸಿದರು.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X