Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುವರಾಜ್ ಸಿಂಗ್ ಮೆಚ್ಚದ ಸಾನಿಯಾ-ಶೋಯೆಬ್ ನೃತ್ಯ

ಬೆಂಗಳೂರು, ಜು. 21: ಸಾನಿಯಾ ಮಿರ್ಜಾ ಮತ್ತು ಶೊಯೆಬ್ ಮಲ್ಲಿಕ್ ದಂಪತಿ ತಮ್ಮ ವಿಜಯಗಳನ್ನು ವಿಭಿನ್ನ ರೀತಿಯಲ್ಲಿ ಹಂಚಿಕೊಂಡಿದ್ದಾರೆ. ನೃತ್ಯ ಮಾಡಿ ತಮ್ಮ ಸಂತೋಷದ ಕ್ಷಣಗಳನ್ನು ಆಸ್ವಾದಿಸಿದ್ದಾರೆ.

ಡಬ್ ಸ್ಮಾಶ್ ವಿಡಿಯೋ ಒಂದಕ್ಕೆ ಹೆಜ್ಜೆ ಹಾಕಿರುವ ಜೋಡಿ ಸಂಭ್ರಮಾಚರಣೆ ಮಾಡಿಕೊಂಡಿದೆ. ಇದನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಪಾಕಿಸ್ತಾನದ ಕ್ರಿಕೆಟ್ ಆಟಗಾರರಾದ ಮಹಮದ್ ಇರ್ಫಾನ್, ಇಷಾನ್ ಆದಿಲ್, ಬಾಬರ್ ಅಜಂ, ಮುಕ್ತಾರ್ ಅಹಮದ್ ಸಹ ಕಾಣಿಸಿಕೊಂಡಿದ್ದಾರೆ.[ಡಬ್ ಸ್ಮಾಶ್ ಗೆ ಟಾಂಗ್ ಕೊಡಲು ಬಂದ ಡುಬಾಕ್ ಸ್ಮಾಶ್]

sania


'ಅಭೀ ತೋ ಪಾರ್ಟಿ ಶುರು ಹುಯೀ ಹೈ' ಎನ್ನುತ್ತ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಅಭಿಮಾನಿಗಳನ್ನು ರಂಜಿಸಿದ್ದು ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದಾರೆ. ಆದರೆ ವಿಡಿಯೋ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಇಂಪ್ರೆಸ್ ಮಾಡುವುದರಲ್ಲಿ ವಿಫಲವಾಗಿದೆ. ಸಾನಿಯಾ ಮತ್ತು ಶೋಯೆಬ್ ಅವರರವರ ಕ್ಷೇತ್ರದಲ್ಲಿ ಉತ್ತಮ ಸಾಧಕರು, ಆದರೆ ಅಷ್ಟೇ ಕೆಟ್ಟ ನೃತ್ಯಗಾರರು! ಎಂದು ಯುವರಾಜ್ ಟ್ವೀಟ್ ಮಾಡಿದ್ದಾರೆ.[ಯೇ ಕೊಹ್ಲಿ ಕೆ ಸ್ಟೈಲ್‌ ಹೈ' ಡಬ್ ಸ್ಮಾಶ್ ಸೂಪರ್ ಹಿಟ್]

ವಿಂಬಲ್ಡನ್ ಡಬಲ್ಸ್ ನಲ್ಲಿ ಮಾರ್ಟಿನಾ ಹಿಂಗೀಸ್ ಜತೆಗೂಡಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಸಾನಿಯಾ ಸಾಧನೆಯ ಉತ್ತುಂಗಕ್ಕೆ ಏರಿದ್ದರು. ಇತ್ತ ಪಾಕಿಸ್ತಾನ ತಂಡವೂ ಶ್ರೀಲಂಕವಾನ್ನು ಬಗ್ಗುಬಡಿದಿದ್ದು ಮಲ್ಲಿಕ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+