ಭರ್ಜರಿ ಕಾಳಗದಲ್ಲಿ ಡೆಲ್ ಪೊಟ್ರೊ ಮಣಿಸಿದ ನಡಾಲ್ ಸೆಮಿಫೈನಲ್ ಗೆ

ಲಂಡನ್, ಜುಲೈ 12: ಬುಧವಾರ ನಡೆದ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ. 2ನೇ ಆಟಗಾರ ರಾಫೆಲ್ ನಡಾಲ್ ಅವರು ಜುವಾನ್ ಮಾರ್ಟಿನ್ ಡೆಲ್ ಪೊಟ್ರೋ ಅವರನ್ನು ಸೋಲಿಸಿ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ. ಐದು ಸೆಟ್ ಗಳ ಭರ್ಜರಿ ಕಾಳದಲ್ಲಿ ನಡಾಲ್ ಗೆಲುವು ಸಾಧಿಸಿದರು.
ಸ್ಪೇನ್ ಬಲಾಡ್ಯ ನಡಾಲ್ ಅವರು ಅರ್ಜೆಂಟೀನಾ ಆಟಗಾರ ಪೊಟ್ರೋ ವಿರುದ್ಧ 7-5, 6-7(7), 6-4, 6-4ರ ಗೆಲುವು ದಾಖಲಿಸಿದರು. ಸೆಂಟರ್ ಕೋರ್ಟ್ ನಲ್ಲಿ ನಡೆದಿದ್ದ ಈ ಪಂದ್ಯಾಟದಲ್ಲಿ ಇಬ್ಬರ ನಡುವೆ ಸುಮಾರು 5 ಗಂಟೆಗಳ ಕಾದಾಟ ನಡೆಯಿತು.
2011ರಲ್ಲಿ ಕೊನೆಯ ಸಾರಿ ವಿಂಬಲ್ಡನ್ ಸೆಮಿಫೈನಲ್ ಪ್ರವೇಶಿಸಿದ್ದ ನಡಾಲ್ ಅನಂತರ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಪಂದ್ಯದಲ್ಲಿ ಎದುರಾಳಿ ಪೊಟ್ರೋ ಪ್ರಬಲ ಪೈಪೋಟಿ ಒಡ್ಡಿದರಾದರೂ ನಡಾಲ್ ಗೆಲ್ಲುವ ಮೂಲಕ ವಿಶ್ವ ನಂ. 2ನೇ ಆಟಗಾರನ ಪ್ರತಿಷ್ಠೆಯನ್ನು ಉಳಿಸಿಕೊಂಡರು.
ಸೆಮಿಫೈನಲ್ ಪಂದ್ಯದಲ್ಲಿ ನಡಾಲ್ ಅವರು 12 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ವಿಜೇತ ಸರ್ಬಿಯಾ ಆಟಗಾರ ನೊವಾಕ್ ಜೋಕೋವಿಕ್ ಸವಾಲು ಸ್ವೀಕರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications