Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಬಲ್ಡನ್ 2018: ವಿಶ್ವ ನಂ. 1 ಆಟಗಾರ್ತಿ ಸಿಮೋನಾಗೆ ಸೊ-ವೈ ಶಾಕ್!

Wimbledon 2018: Simona Halep loses to Hsieh Su-wei in third round

ಲಂಡನ್, ಜು. 7: ವಿಶ್ವ ನಂ. 1 ಆಟಗಾರ್ತಿ ರೊಮೇನಿಯಾದ ಸಿಮೋನಾ ಹಾಲೆಪ್ ಅವರು ಶನಿವಾರ ನಡೆದ ವಿಂಬಲ್ಡನ್ ವನಿತಾ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಹೈಸೀ ಸೊ-ವೈ ಎದುರು ಸೋತು ಅಘಾತವನ್ನನುಭವಿಸಿದ್ದಾರೆ. ಜೊತೆಗೆ ಹಾಲೆಪ್ ಅವರ ವಿಂಬಲ್ಡನ್ 2018ರ ಕನಸು ಅಂತ್ಯಗೊಂಡಿದೆ.

ಪಂದ್ಯದ ವೇಳೆ ವಿಶ್ವ ನಂ. 48ನೇ ಶ್ರೇಯಾಂಕಿತ ತೈವಾನ್ ಆಟಗಾರ್ತಿ ಹೈಸೀ ಸೊ-ವೈ ಅವರು ಸಾಕಷ್ಟು ತಪ್ಪುಗಳನ್ನು ಮಾಡಿದ್ದರು. ಸರ್ವ್ ವೇಳೆ ಸುಮಾರು ಏಳು ಸಾರಿ ಸೊ-ವೈ ಎಡವಿದ್ದರು. ಆದರೆ ಅದರ ಹೊತಾಗಿಯೂ ಹೈಸೀ ಅವರು ಹಾಲೆಪ್ ವಿರುದ್ಧ 3-6, 6-4, 7-5ರ ಗೆಲುವು ದಾಖಲಿಸಿದರು. ಇಬ್ಬರ ನಡುವಿನ ಕಾದಾಟ ಸುಮಾರು 2 ಗಂಟೆ 20 ನಿಮಿಷಗಳ ಕಾಲ ನಡೆಯಿತು.

ಈ ಪಂದ್ಯದ ಬಳಿಕ ವಿಂಬಲ್ಡನ್ 2018ರ ವನಿತಾ ಸಿಂಗಲ್ಸ್ ನಲ್ಲಿ ವಿಶ್ವ ನಂ. 10ರೊಳಗಿನ ಆಟಗಾರ್ತಿಯರಲ್ಲಿ ಕ್ಯರೋಲಿನಾ ಪ್ಲಿಸ್ಕೋವಾ ಅವರೊಬ್ಬರೆ ಉಳಿದಂತಾಗಿದೆ. ವಿಶ್ವ ನಂ. 7ರ ಪ್ಲಿಸ್ಕೋವಾ ಅವರು ಮತ್ತೊಂದು ಮೂರನೇ ಸುತ್ತಿನ ಪಂದ್ಯದಲ್ಲಿ ಗೆದ್ದು ನಾಲ್ಕನೇ ಸುತ್ತಿಗೆ ಮುನ್ನಡೆದಿದ್ದಾರೆ.

32ರ ಹರೆಯದ ಸೊ-ವೈ ಇದೇ ಮೊದಲ ಬಾರಿಗೆ ವಿಂಬಲ್ಡನ್ ವನಿತಾ ಸಿಂಗಲ್ಸ್ ನಲ್ಲಿ ಅಂತಿಮ 16 ಹಂತಕ್ಕೆ ಪ್ರವೇಶಿದ ಸಾಧನೆ ಮಾಡಿದ್ದಾರೆ. 2013ರ ವಿಂಬಲ್ಡನ್ ಡಬಲ್ಸ್ ಚಾಂಪಿಯನ್ ಹೈಸೀ ಮುಂದಿನ ಹಂತದಲ್ಲಿ ಡೊಮಿನಿಕ ಸಿಬುಲ್ಕೋವಾ ಅವರ ಸವಾಲು ಸ್ವೀಕರಿಸಲಿದ್ದಾರೆ. ಸ್ಕೊವಾಕ್ ಆಟಗಾರ್ತಿ ಸಿಬುಲ್ಕೋವಾ ಅವರು 15ನೇ ಶ್ರೇಯಾಂಕಿತೆ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಅವರನ್ನು ಮೂರನೇ ಸುತ್ತಿನ ಪಂದ್ಯದಲ್ಲಿ 6-2, 6-2ರಿಂದ ಸೋಲಿಸಿ ಮುನ್ನಡೆ ಸಾಧಿಸಿದ್ದಾರೆ.

Story first published: Saturday, July 7, 2018, 22:40 [IST]
Other articles published on Jul 7, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+