Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಬಲ್ಡನ್ 2022: ಸೆಮಿಫೈನಲ್ ಪ್ರವೇಶಿಸಿದ ರಾಫೆಲ್ ನಡಾಲ್

Wimbledon 2022: Rafael Nadal enters to semifinal by beating Taylor Fritz

ಕಳೆದ ಜೂನ್ 5ರಂದು ಪ್ಯಾರಿಸ್‌ನಲ್ಲಿ ನಡೆದಿದ್ದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ರಾಫೆಲ್ ನಡಾಲ್ ಸದ್ಯ ನಡೆಯುತ್ತಿರುವ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಅಗ್ರಶ್ರೇಯಾಂಕಿತ ಟೆನಿಸ್ ಆಟಗಾರ ಎನಿಸಿಕೊಂಡಿರುವ ರಾಫೆಲ್ ನಡಾಲ್ ಈ ಬಾರಿಯ ಟೂರ್ನಿಯಲ್ಲಿ ಮೂರನೇ ಗ್ರ್ಯಾಂಡ್ ಸ್ಲ್ಯಾಮ್ ಮೇಲೆ ಕಣ್ಣಿಟ್ಟಿದ್ದು, ಕಳೆದ ಸೋಮವಾರ ನೆದರ್ಲೆಂಡ್ಸ್ ತಂಡದ ಆಟಗಾರ ಬೊಟಿಕ್ ಜಾಂಡ್ ಶುಪ್ ಅವರನ್ನು ಮಣಿಸಿ ಅಂತಿಮ ಎಂಟರ ಘಟ್ಟವನ್ನು ಪ್ರವೇಶಿಸಿದ್ದರು. ಇನ್ನು ಈ ಎಂಟರ ಘಟ್ಟದಲ್ಲಿ 14ನೇ ಶ್ರೇಯಾಂಕಿತ ಎನಿಸಿಕೊಂಡಿರುವ ಅಮೆರಿಕದ ಟೇಲರ್ ಫ್ರಿಟ್ಜ್ ಅವರನ್ನು ನಿನ್ನೆ ( ಜುಲೈ 6 ) ಎದುರಿಸಿದ ರಾಫೆಲ್ ನಡಾಲ್ ಗಾಯದ ಸಮಸ್ಯೆಯ ನಡುವೆಯೂ 24 ವರ್ಷದ ಟೇಲರ್ ಫ್ರಿಟ್ಜ್ ಅವರನ್ನು 10-4 ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡರು.

4 ಗಂಟೆ 20 ನಿಮಿಷಗಳವರೆಗೆ ನಡೆದ ಈ ಹಣಾಹಣಿಯಲ್ಲಿ ರಾಫೆಲ್ ನಡಾಲ್ ಟೇಲರ್ ಫ್ರಿಟ್ಜ್ ವಿರುದ್ಧ 3-6, 7-5, 3-6, 7-5, 7-6 ( 10-4 ) ಸೆಟ್‌ಗಳ ಅಂತರದಲ್ಲಿ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಗೆದ್ದಿದ್ದು, ಸೆಮಿಫೈನಲ್ ಸುತ್ತಿನಲ್ಲಿ ಆಸ್ಟ್ರೇಲಿಯದ ಆಟಗಾರ ಮೇವರಿಕ್ ನಿಕ್ ಕಿರ್ಗಿಯೋಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಪಂದ್ಯದ ಮೊದಲ ಸೆಟ್‌ನಲ್ಲಿ ಸೋತು ಎರಡನೇ ಸೆಟ್‌ನಲ್ಲಿ ಗೆದ್ದಿದ್ದ ರಾಫೆಲ್ ನಡಾಲ್ ಮಹತ್ವದ ಮೂರನೇ ಸೆಟ್‌ನಲ್ಲಿ ಮುಗ್ಗರಿಸಿ ಸೋಲಿನ ಸುಳಿಗೆ ಸಿಲುಕಿದ್ದರು. ಆದರೆ, ನಾಲ್ಕನೇ ಸೆಟ್‌ನಲ್ಲಿ ಪುಟಿದೆದ್ದ ಕಿಂಗ್ ಆಫ್ ಕ್ಲೇ ಈ ಡಿಸೈಡರ್ ಸುತ್ತಿನಲ್ಲಿ ಎದುರಾಳಿಗೆ ಹಿನ್ನಡೆಯನ್ನುಂಟುಮಾಡಿ ಫೈನಲ್ ಸೆಟ್‌ನಲ್ಲೂ ಮುನ್ನಡೆ ಸಾಧಿಸಿ ಗೆಲುವು ಸಾಧಿಸಿದರು. ಹೀಗೆ ಗಾಯದ ಸಮಸ್ಯೆಯ ನಡುವೆಯೂ ಅದ್ಭುತ ಪ್ರದರ್ಶನ ನೀಡಿದ ರಾಫೆಲ್ ನಡಾಲ್ ಅವರಿಗೆ ಪ್ರಶಂಸೆಯ ಸುರಿಮಳೆಯೇ ಸುರಿಯುತ್ತಿದೆ.

ರಿಟೈರ್ ಇಷ್ಟವಿಲ್ಲ ಎಂದ ನಡಾಲ್

ಇನ್ನು ಈ ಪಂದ್ಯದ ಮಧ್ಯದಲ್ಲಿ ರಿಟೈರ್ ಆಗುವ ಹಂತದಲ್ಲಿದ್ದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ರಾಫೆಲ್ ನಡಾಲ್ ಪಂದ್ಯ ಮುಗಿದ ನಂತರ ಮಾತನಾಡಿದ್ದು ನನ್ನ ಪ್ರಕಾರ ಪಂದ್ಯದ ಮಧ್ಯದಲ್ಲಿ ಹಿಂದೆ ಸರಿಯುವುದು ತೀರಾ ಕಷ್ಟದ ಕೆಲಸ, ನಾನು ಟೆನ್ನಿಸ್ ವೃತ್ತಿಜೀವನದಲ್ಲಿ ಈಗಾಗಲೇ ಕೆಲವು ಬಾರಿ ಪಂದ್ಯಗಳ ನಡುವೆ ರಿಟೈರ್ ಆಗಿದ್ದೇನೆ ಹಾಗೂ ಅದು ನಾನು ಹೆಚ್ಚಾಗಿ ದ್ವೇಷಿಸುವ ವಿಷಯ ಕೂಡ ಹೌದು, ಆದ್ದರಿಂದ ಪಂದ್ಯದಿಂದ ಹಿಂದೆ ಸರಿಯದೇ ಮುಂದುವರಿಸಿದೆ ಎಂದು ಹೇಳಿಕೆ ನೀಡಿದ್ದಾರೆ.

Story first published: Thursday, July 7, 2022, 11:07 [IST]
Other articles published on Jul 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+