Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಬಲ್ಡನ್ 2022: ಮಿಶ್ರ ಡಬಲ್ಸ್‌ನಲ್ಲಿ ಸೆಮಿಫೈನಲ್‌ ತಲುಪಿದ ಸಾನಿಯಾ ಮಿರ್ಜಾ

Sania mirza

ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೋಡಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಅವರು ಕ್ರೊಯೇಷಿಯಾದ ಮೇಟ್ ಪಾವಿಕ್ ಅವರೊಂದಿಗೆ ಸೆಮಿಫೈನಲ್ ಪ್ರವೇಶಿಸಿದರು.

ಸೋಮವಾರ ಮಧ್ಯರಾತ್ರಿ ನಡೆದ ಮಿಶ್ರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಸಾನಿಯಾ-ಪಾವಿಕ್‌ ಜೋಡಿ 6-4, 3-6, 7-5ರಲ್ಲಿ ನಾಲ್ಕನೇ ಶ್ರೇಯಾಂಕದ ಗ್ಯಾಬ್ರಿಯೆಲಾ ದಬ್ರೊವ್‌ಸ್ಕಿ (ಕೆನಡಾ)-ಜಾನ್‌ ಪೀರ್ಸ್‌ (ಆಸ್ಟ್ರೇಲಿಯಾ) ಜೋಡಿ ವಿರುದ್ಧ ಗೆದ್ದರು.

ಒಂದು ಗಂಟೆ 41 ನಿಮಿಷಗಳ ಕಾಲ ನಡೆದ ಈ ಹೋರಾಟದಲ್ಲಿ ಸಾನಿಯಾ ಜೋಡಿ ಎಂಟು ಏಸ್ ಗಳನ್ನು ಬಾರಿಸಿತು. ಎರಡನೇ ಸುತ್ತಿನಲ್ಲಿ ಡೊಡಿಗ್ (ಕ್ರೊಯೇಷಿಯಾ)-ಲತೀಶಾ ಚಾನ್ (ಚೈನೀಸ್ ತೈಪೆ) ಜೋಡಿಯಿಂದ ಸಾನಿಯಾ-ಪಾವಿಕ್ ವಾಕ್ ಓವರ್ ಪಡೆದರು.

ಇದು ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಮಿರ್ಜಾ ಅವರ ಅತ್ಯುತ್ತಮ ಮಿಶ್ರ ಡಬಲ್ಸ್ ಪ್ರದರ್ಶನವಾಗಿದೆ. ಈ ಹಿಂದೆ 2011, 2013 ಮತ್ತು 2015ರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು.

ಇನ್ನು ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್ (ಸರ್ಬಿಯಾ) ಸತತ ನಾಲ್ಕನೇ ಬಾರಿಗೆ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವತ್ತ ಮತ್ತೊಂದು ಹೆಜ್ಜೆ ಇಟ್ಟರು. ಪುರುಷರ ಸಿಂಗಲ್ಸ್ ವಿಭಾಗದ ಹಾಲಿ ಚಾಂಪಿಯನ್ ಜೊಕೊವಿಕ್ 13ನೇ ಬಾರಿಗೆ ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದರು. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಜೊಕೊವಿಕ್ 6-2, 4-6, 6-1, 6-2 ಸೆಟ್‌ಗಳಿಂದ ಟಿಮ್ ವ್ಯಾನ್ ರಿಥೋವನ್ (ನೆದರ್‌ಲ್ಯಾಂಡ್ಸ್) ಅವರನ್ನು ಸೋಲಿಸಿದರು.

2 ಗಂಟೆ 38 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಆರು ಬಾರಿಯ ವಿಂಬಲ್ಡನ್ ಚಾಂಪಿಯನ್ ಜೊಕೊವಿಕ್ ಏಳು ಏಸ್ ಗಳನ್ನು ಬಾರಿಸಿ ಎದುರಾಳಿಯ ಸರ್ವ್ ಅನ್ನು ಆರು ಬಾರಿ ಮುರಿದರು. ಇತರ ಪ್ರಿ-ಕ್ವಾರ್ಟರ್‌ಫೈನಲ್‌ಗಳಲ್ಲಿ, ಆಸ್ಟ್ರೇಲಿಯಾದ ವಿವಾದಾತ್ಮಕ ಆಟಗಾರ ನಿಕ್ ಕಿರ್ಗಿಯೋಸ್ 4-6, 6-4, 7-6 (7/2), 3-6, 6-2 ರಲ್ಲಿ ನಕಾಶಿಮಾ (ಯುಎಸ್‌ಎ) ಅವರನ್ನು ಸೋಲಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಮಾಜಿ ಚಾಂಪಿಯನ್ ಸಿಮೋನಾ ಹಾಲೆಪ್ (ರೊಮೇನಿಯಾ), ಮೂರನೇ ಶ್ರೇಯಾಂಕದ ಆನೆಸ್ ಜಾಬರ್ (ಟುನೀಶಿಯಾ), ರೈಬಕಿನಾ (ಕಜಕಿಸ್ತಾನ್), ಅನಿ ಸಿಮೊವಾ (ಅಮೆರಿಕ) ಮತ್ತು ಟೊಮ್ಲಜನೊವಿಚ್ (ಆಸ್ಟ್ರೇಲಿಯಾ) ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

Story first published: Tuesday, July 5, 2022, 16:16 [IST]
Other articles published on Jul 5, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+