Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Wimbledon 2023: ಹಾಲಿ ಚಾಂಪಿಯನ್ ಜೊಕೊವಿಕ್‌ಗೆ ಆರಂಭಿಕ ಪಂದ್ಯದಲ್ಲಿ ಸುಲಭ ಸವಾಲು

ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ 2023ರ ವಿಂಬಲ್ಡನ್‌ ಆರಂಭಿಕ ಪಂದ್ಯದಲ್ಲಿ ಸುಲಭ ಸವಾಲು ಪಡೆದುಕೊಂಡಿದ್ದಾರೆ. ಅರ್ಜೆಂಟಿನಾದ 67ನೇ ಶ್ರೆಯಾಂಕದ ಆಟಗಾರ ಪೆಡ್ರೋ ಕಚಿನ್ ಅವರನ್ನು ಜೊಕೊವಿಕ್ ಎದುರಿಸಲಿದ್ದು ಈ ಮೂಲಕ ವಿಂಬಲ್ಡನ್ ಆರಂಭಿಸಲಿದ್ದಾರೆ. ಇನ್ನು ಮಹಿಳಾ ವಿಭಾಗದಲ್ಲಿ ಹಾಲಿ ಚಾಂಪಿಯನ್ ಎಲೆನಾ ರಿಬಾಕಿನಾ ಅಮೆರಿಕಾದ ಶಿಲ್ಬಿ ರೋಜರ್ಸ್ ಅವರನ್ನು ಎದುರಿಸಲಿದ್ದಾರೆ.

ಶುಕ್ರವಾರ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ ಡ್ರಾದ ಪ್ರಕಾರ ಮಹಿಳಾ ಅಗ್ರ ಶ್ರೇಯಾಂಕದ ಇಗಾ ಸ್ವಿಯಾಟೆಕ್ ಚೀನಾದ 33 ನೇ ಶ್ರೇಯಾಂಕದ ಝು ಲಿನ್ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಇದು ಪೋಲ್‌ಗೆ ಸಂಭಾವ್ಯ ಟ್ರಿಕಿ ಮೊದಲ ಅಡಚಣೆಯಾಗಿದೆ. ಯುಕ್ರೇನ್‌ನಲ್ಲಿ ರಷ್ಯಾ ಆಕ್ರಮಣದ ಕಾರಣ ಕಳೆದ ವರ್ಷ ವಿಂಬಲ್ಡನ್‌ನಲ್ಲಿ ರಷ್ಯಾದ ಮತ್ತು ಬೆಲರೂಸಿಯನ್ ಆಟಗಾರರ ಮೇಲೆ ನಿಷೇಧ ಹೇರಿದ ಕಾರಣ ಕಳೆದ ವರ್ಷ ಎರಡನೇ ಶ್ರೇಯಾಂಕದ ಅರೀನಾ ಸಬಲೆಂಕಾ ಆಡಿರಲಿಲ್ಲ ಈ ಬಾರಿ ಅವರು ಹಂಗೇರಿಯಾದ ಪನ್ನಾ ಉದ್ವರ್ಡಿ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದಾರೆ.

Wimbledon 2023: Novak Djokovic will face Pedro Cachin in Wimbledon opener

ಅಮೆರಿಕದ ಅನುಭವಿ ಆಟಗಾರ್ತಿ ವೀನಸ್ ವಿಲಿಯಮ್ಸ್ ಅವರು ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ವಿರುದ್ಧ ಆರಂಭಿಕ ಸುತ್ತಿನಲ್ಲಿ ಆಡಬೇಕಿದೆ. ಈ ಮಧ್ಯೆ ತವರಿನ ನೆಚ್ಚಿನ ಆಟಗಾರ 36 ನೇ ವಯಸ್ಸಿನ ಆಂಡಿ ಮರ್ರೆ ಬ್ರಿಟಿಷ್ ವೈಲ್ಡ್‌ಕಾರ್ಡ್ ಆಟಗಾರ ರಯಾನ್ ಪೆನಿಸ್ಟನ್ ಅವರನ್ನು ಎದುರಸಿಲಿದ್ದಾರೆ. ಮರ್ರೆ ಎರಡನೇ ಸುತ್ತಿನಲ್ಲಿ ಐದನೇ ಶ್ರೇಯಾಂಕದ ಸ್ಟೆಫಾನೋಸ್ ಸಿಟ್ಸಿಪಾಸ್ ಎದುರಿಸುವ ಸಾಧ್ಯತೆಯಿದೆ. ಆದರೆ ಇದಕ್ಕಾಗಿ ಮೊದಲ ಸುತ್ತಿನಲ್ಲಿ ಸಿಟ್ಸಿಪಾಸ್ ಯುಎಸ್ ಓಪನ್‌ನ ಮಾಜಿ ಚಾಂಪಿಯನ್ ಡೊಮಿನಿಕ್ ಥೀಮ್ ವಿರುದ್ಧ ಗೆಲ್ಲಬೇಕಿದೆ.

ಅಮೆರಿಕದ ಹದಿಹರೆಯದ ಆಟಗಾರ್ತಿ ಕೊಕೊ ಗೌಫ್ ಮಾಜಿ ಫ್ರೆಂಚ್ ಓಪನ್ ರನ್ನರ್ ಅಪ್ ತಮ್ಮದೇ ದೇಶದವರಾದ ಸೋಫಿಯಾ ಕೆನಿನ್ ವಿರುದ್ಧ ಕಠಿಣ ಆರಂಭಿಕ ಸುತ್ತಿನಲ್ಲಿ ಸೆಣೆಸಾಡಲಿದ್ದಾರೆ.

ವಿಂಬಲ್ಡನ್‌ನಲ್ಲಿ ಓಪನ್‌ನಲ್ಲಿ ಕಳೆದ ನಾಲ್ಕು ಆವೃತ್ತಿಗಳಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿರುವ ಜೊಕೊವಿಕ್ ರೋಜರ್ ಫೆಡರರ್ ಅವರ 8 ಚಾಂಪಿಯನ್ ಪಟ್ಟದ ದಾಖಲೆಯನ್ನು ಸರಿಗಟ್ಟುವ ಅವಕಾಶ ಹೊಂದಿದ್ದಾರೆ. ಆದರೆ ಈ ಬಾರಿ ಅಲ್ಕರೇಜ್ ಮೊದಲ ಸೀಡ್‌ ಪಡೆದುಕೊಂಡಿರುವ ಕಾರಣ ಆ ಸ್ಥಾನವನ್ನು ಕಳೆದುಕೊಂಡಿದ್ದಾರೆ.

24 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಹೊಂದಿರುವ ಜೊಕೊವಿಕ್ ಆ ದಾಖಲೆಯ ವಿಸ್ತರಿಸುವ ಅವಕಾಶ ಹೊಂದಿದ್ದಾರೆ. ಹೀಗಾಗಿ ಸೋಮವಾರ ಕ್ಯಾಚಿನ್ ಅವರನ್ನು ಎದುರಿಸಲಿದ್ದಾರೆ, ಮಹಿಳಾ ವಿಭಾಗದಲ್ಲಿ ಹಾಲಿ ಚಾಂಪಿಯನ್‌ಗಳಿಗಾಗಿ ರಿಬಾಕಿನಾ ಶಿಲ್ಬಿ ರೀಜರ್ಸ್ ವಿರುದ್ಧ ಮಂಗಳವಾರ ಸೆಂಟರ್ ಕೋರ್ಟ್‌ನಲ್ಲಿ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.

Story first published: Friday, June 30, 2023, 23:18 [IST]
Other articles published on Jun 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+