ವಿಂಬಲ್ಡನ್: ನಿಯಮ ಉಲ್ಲಂಘಿಸಿದ ಸೆರೆನಾಗೆ ಭಾರಿ ದಂಡ!

ಲಂಡನ್, ಜುಲೈ 09: ಮಾಜಿ ಚಾಂಪಿಯನ್ ಹಾಗೂ 23 ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳ ಒಡತಿ ಸೆರೆನಾ ವಿಲಿಯಮ್ಸ್ ಅಭ್ಯಾಸ ವೇಳೆ ಅಂಗಣವನ್ನು ಹಾನಿಗೊಳಿಸಿದ ಕಾರಣ ಆಲ್ ಇಂಗ್ಲೆಂಡ್ ಕ್ಲಬ್ 10 ಸಾವಿರ ಡಾಲರ್ (ಅಂದಾಜು 6.86 ಲಕ್ಷ ರೂ.) ದಂಡ ವಿಧಿಸಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಈ ಬಾರಿಯ ವಿಂಬಲ್ಡನ್ ಟೂರ್ನಿ ಆರಂಭಕ್ಕೂ ಮುನ್ನ ಅಭ್ಯಾಸ ಅವಧಿಯಲ್ಲಿ ಈ ಘಟನೆ ನಡೆದಿದೆ ಎಂದು ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ. ಏಳು ಬಾರಿಯ ವಿಂಬಲ್ಡನ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಪ್ರಸಕ್ತ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ಸ್‌ಗೆ ಕಾಲಿಟ್ಟಿದ್ದಾರೆ.
ಸೋಮವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿದ 37 ವರ್ಷದ ಅನುಭವಿ ಆಟಗಾರ್ತಿ ಸೆರೆನಾ, ಸ್ಪೇನ್‌ನ ಆಟಗಾರ್ತಿ ಹಾಗೂ 30ನೇ ಶ್ರೇಯಾಂಕಿತೆ ಕಾರ್ಲಾ ಸ್ವಾರೆಸ್ ನವಾರೊ ಅವರನ್ನು 6-2, 6-2 ಸೆಟ್‌ಗಳಿಂದ ಬಗ್ಗುಬಡಿದು 8ರ ಘಟ್ಟಕ್ಕೆ ಮುನ್ನಡೆದಿದ್ದಾರೆ. ಸೆರೆನಾ ಸೆಮಿಫೈನಲ್ ಅರ್ಹತೆಗಾಗೊಇ ಅಮೆರಿಕದ ಆಟಗಾರ್ತಿ ಅಲಿಸನ್ ರಿಸ್ಕೆ ಎದರು ಸೆಣಸಲಿದ್ದಾರೆ.
ಇದೇ ವೇಳೆ ಮೂರನೇ ಸುತ್ತಿನಲ್ಲಿ ಸೋಲನುಭವಿಸಿದ ಇಟಲಿಯ ಆಟಗಾರ ಫಾಬಿಯೊ ಫಾಗ್ನಿಸಿ, ನಿರಾಸೆಯಲ್ಲಿ ವಿಂಬಲ್ಡನ್ ಟೂರ್ನಿಗೆ ಬಾಂಬ್ ಬೀಳಬಾರೆ ಎಂದು ಹೇಳುವ ಮೂಲಕ 3 ಸಾವಿರ ಡಾಲರ್ ದಂಡ ತೆತ್ತಿದ್ದಾರೆ. ಮತ್ತೊಂದೆಡೆ ಮೊದಲ ಮತ್ತು ಎರಡನೇ ಸುತ್ತಿನ ಪಂದ್ಯಗಳಲ್ಲಿ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡ ಆಸ್ಟ್ರೇಲಿಯಾದ ಆಟಗಾರ ನಿಕ್ ಕಿರಿಯೋಸ್ ಕ್ರಮವಾಗಿ 3 ಮತ್ತು 5 ಸಾವಿರ ಡಾಲರ್ ದಂಡಕ್ಕೆ ಗುರಿಯಾಗಿದ್ದಾರೆ. ಕಿರಿಯೋಸ್ ಮೂರನೇ ಸುತ್ತಿನ ಪಂದ್ಯದಲ್ಲಿ 3ನೇ ಶ್ರೇಯಾಂಕಿತ ಆಟಗಾರ ರಾಫೆಲ್ ನಡಾಲ್ ವಿರುದ್ಧ ಸೋಲನುಭವಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications