ಲಂಡನ್, ಜುಲೈ 03: ವಿಂಬಲ್ಡನ್ ಮಹಿಳೆಯರ ಡಬಲ್ಸ್ ಚಾಂಪಿಯನ್ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಅವರು 2016ರ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಟ್ಜರ್ಲೆಂಡ್ ನ ಮಾರ್ಟಿನಾ ಹಿಂಗೀಸ್ ಅವರು 2016 ರ ವಿಂಬಲ್ಡನ್ ಡಬಲ್ಸ್ ವಿಭಾಗದಲ್ಲಿ ಶನಿವಾರ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿದ್ದಾರೆ. [ವಿಂಬಲ್ಡನ್ : ಆಟಗಾರರಿಗೆ ಮೇಡ್ ಇನ್ ಇಂಡಿಯಾ ಉತ್ಪನ್ನ ಬೇಕೇ ಬೇಕು!]

ಜರ್ಮನಿಯ ಅನಾ ಪ್ರೀಡ್ಸಾಮ್ ಮತ್ತು ಲೌರಾ ಸಿಗ್ಮಂಡ್ ಜೋಡಿಯನ್ನು ಇಂಡೋ-ಸ್ವಿಸ್ ಜೋಡಿ ಸೋಲಿಸಿದೆ. ಸುಮಾರು ಒಂದು ಗಂಟೆ 24 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಾನಿಯಾ ಹಾಗೂ ಮಾರ್ಟಿನಾ ಅವರು 6-2, 7-5 ನೇರ ಸೆಟ್ಗಳಲ್ಲಿ ಆಲ್ ಇಂಗ್ಲೆಂಡ್ ಕ್ಲಬ್ ಮೈದಾನದಲ್ಲಿ ಸೋಲಿಸಿದರು. [ನಡಾಲ್ ಅವರು ವಿಂಬಲ್ಡನ್ ಆಡುತ್ತಿಲ್ಲ]
ಟಾಪ್ ಸೀಡ್ ನಲ್ಲಿರುವ ಸಾನಿಯಾ-ಮಾರ್ಟಿನಾ ಜೋಡಿ ತಮ್ಮ ಮುಂದಿನ ಪಂದ್ಯವನ್ನು ಜಪಾನಿನ ಎರಿ ಹೊಜುಮಿ ಮತ್ತು ಮಿಯು ಕಾಟೊ ವಿರುದ್ಧ ಆಡಲಿದೆ.
ಜುಲೈ 3ರಂತೆ ಮೂರನೇ ಸುತ್ತಿನ ನಂತರ ಮಹಿಳಾ ಸಿಂಗಲ್ಸ್ ಟಾಪ್ 10ರೊಳಗಿನ ಶ್ರೇಯಾಂಕಿತರ ಫಲಿತಾಂಶ
* 8ನೇ ಶ್ರೇಯಾಂಕಿತೆ ವೀನಸ್ ವಿಲಿಯಮ್ಸ್ ಗೆ 7-5,4-6,10-8 ರಲ್ಲಿ ಕಸಟ್ಕಿನಾ ವಿರುದ್ಧ ಜಯ
* (9) ಎಂ ಕೀಸ್ ಗೆ 6-4,5-7,6-2ರಲ್ಲಿ ಕಾರ್ನೆಟ್ ವಿರುದ್ಧ ಜಯ
* (5) ಹಲೆಪ್ ಗೆ 6-4,6-3ರಲ್ಲಿ ಬರ್ಟೆನ್ಸ್ ವಿರುದ್ಧ ಜಯ
* (3) ರಾಂಡ್ವಸ್ಕಗೆ 6-3, 6-1ರಲ್ಲಿ ಸಿನಿಯಾಕೊವಾ ವಿರುದ್ಧ ಜಯ.
(ಒನ್ಇಂಡಿಯಾ ಸುದ್ದಿ)