For Quick Alerts
ALLOW NOTIFICATIONS  
For Daily Alerts

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ 2022: 2ನೇ ಸುತ್ತಿನಲ್ಲೇ ಹೊರಬಿದ್ದ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ

Ashwini ponnappa

ಕಾಮನ್‌ವೆಲ್ತ್‌ಗೇಮ್ಸ್ ಚಿನ್ನದ ಪದಕ ವಿಜೇತೆ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಜೋಡಿ, ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಮಹಿಳೆಯರ ಡಬಲ್ಸ್‌ನ ಎರಡನೇ ಸುತ್ತಿನಲ್ಲೇ ಸೋತು ನಿರಾಸೆ ಮೂಡಿಸಿದ್ದಾರೆ.

ಟೋಕಿಯೋದಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಆಗಸ್ಟ್ 24, ಬುಧವಾರದಂದು ನೇರ ಗೇಮ್‌ಗಳಲ್ಲಿ ಹಾಲಿ ವಿಶ್ವ ಚಾಂಪಿಯನ್‌ಗಳಾದ ಚೀನಾದ ಚೆನ್ ಕ್ವಿಂಗ್ ಚೆನ್ ಮತ್ತು ಜಿಯಾ ಯಿಫಾನ್ ವಿರುದ್ಧ 15-21 ಮತ್ತು 10-21 ಪಾಯಿಂಟ್ಸ್ ಅಂತರದಲ್ಲಿ ಸೋತಿದ್ದಾರೆ.

ಬುಧವಾರ ನಡೆದ ಮಹಿಳೆಯರ ಡಬಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿ ಚೀನಾದ ಬಲಿಷ್ಠ ಜೋಡಿ ವಿರುದ್ಧ ನೇರ ಗೇಮ್‌ಗಳಲ್ಲಿ ಸೋತಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಪಂದ್ಯದ ಆರಂಭದಿಂದಲೇ ಮುಗ್ಗರಿಸಿದ ಅಶ್ವಿನ್ ಮತ್ತು ಸಿಕ್ಕಿ ರೆಡ್ಡಿ

ಪಂದ್ಯದ ಆರಂಭದಿಂದಲೇ ಮುಗ್ಗರಿಸಿದ ಅಶ್ವಿನ್ ಮತ್ತು ಸಿಕ್ಕಿ ರೆಡ್ಡಿ

ಪಂದ್ಯದ ಆರಂಭದಿಂದಲೂ ಭಾರತದ ಜೋಡಿ ಲಯದಲ್ಲಿ ಇರಲಿಲ್ಲ. ಚೀನಾದ ಸ್ಪರ್ಧಿಗಳ ವಿರುದ್ಧ ಆಕ್ರಮಣಕಾರಿ ಆಟವಾಡುವುದನ್ನು ಬಿಟ್ಟರೆ ಮಹಿಳಾ ತಂಡಕ್ಕೆ ಸರಿಯಾಗಿ ರಕ್ಷಣೆ ನೀಡಲು ಸಾಧ್ಯವಾಗಲಿಲ್ಲ. ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಮಾತ್ರವಲ್ಲದೆ, ಇತರ ಮಹಿಳಾ ಡಬಲ್ಸ್ ಪಂದ್ಯದಲ್ಲಿ ಪೂಜಾ ಸಂತೋಷ್ ಮತ್ತು ಸಂಜನಾ ದಂಡು ಕೋರ್ಟ್ 3 ರಲ್ಲಿ ಸೋಲನ್ನು ಎದುರಿಸಿದರು. ಈ ಜೋಡಿಯು ದಕ್ಷಿಣ ಕೊರಿಯಾದ ಲೀ ಸೊ-ಹೀ ಮತ್ತು ಶಿನ್ ಸೆಯುಂಗ್ ಚಾನ್ ವಿರುದ್ಧ ಸೋತರು. ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಭಾರತ ತಂಡ ನೇರ ಗೇಮ್‌ನಲ್ಲಿ ಸೋಲು ಕಂಡಿದೆ. ಅವರಿಗೆ ಆಟದ ಫಲಿತಾಂಶ 15-21, 7-21 ಆಗಿದೆ.

ಜಸ್ಪ್ರೀತ್ ಬುಮ್ರಾ ಬೌಲಿಂಗ್ ಆ್ಯಕ್ಷನ್‌ ಅನುಕರಿಸಿದ ಹಾರ್ದಿಕ್ ಪಾಂಡ್ಯ: ಬುಮ್ರಾ ಪ್ರತಿಕ್ರಿಯೆ

ಭಾರತದ ಪ್ರಮುಖ ಸ್ಟಾರ್‌ಗಳ ಪಂದ್ಯ

ಭಾರತದ ಪ್ರಮುಖ ಸ್ಟಾರ್‌ಗಳ ಪಂದ್ಯ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಿಡಂಬಿ ಶ್ರೀಕಾಂತ್, ಎಂಆರ್ ಅರ್ಜುನ್, ಧ್ರುವ ಕಪಿಲಾ, ತ್ರೇಸಾ ಜಾಲಿ, ಗಾಯತ್ರಿ ಗೋಪಿಚಂದ್, ಪ್ರಣಯ್ ಎಚ್‌ಎಸ್, ಲಕ್ಷ್ಯ ಸೇನ್ ಮುಂತಾದ ತಾರೆಯರು ಬುಧವಾರ ಅಂಕಣಕ್ಕೆ ಬರಲಿದ್ದಾರೆ. ಮಂಗಳವಾರ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಸೈನಾ ನೆಹ್ವಾಲ್ ಅವರು ಹಾಂಕಾಂಗ್ ಸ್ಪರ್ಧಿ ಚೆಯುಂಗ್ ನಾಂಗ್ ಯೀ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿದರು. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸೈನಾ 21-19 ಮತ್ತು 21-9 ರಲ್ಲಿ ಪಂದ್ಯ ಗೆದ್ದರು.

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಭಾರತೀಯರ ಪಂದ್ಯಗಳು ಹಾಗೂ ನೇರಪ್ರಸಾರದ ಮಾಹಿತಿ

ಮಿಶ್ರ ಡಬಲ್ಸ್‌ನಲ್ಲೂ ಮಿಶ್ರ ಫಲಿತಾಂಶ

ಮಿಶ್ರ ಡಬಲ್ಸ್‌ನಲ್ಲೂ ಮಿಶ್ರ ಫಲಿತಾಂಶ

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಜೋಡಿಯಾದ ವೆಂಕಟ್ ಗೌರವ್ ಪ್ರಸಾದ್ ಮತ್ತು ಜೂಹಿ ದೇವಾಂಗನ್ ಅವರು ಬ್ರಿಟನ್‌ನ ಗ್ರೆಗೊರಿ ಮೇಯರ್ಸ್ ಮತ್ತು ಜೆನ್ನಿ ಮೋರ್ ವಿರುದ್ಧ ಸೋತರು. ಮೊದಲ ಸುತ್ತಿನಲ್ಲಿ 10-21, 21-23 ಅಂತರದಲ್ಲಿ ಸೋತು ಸ್ಪರ್ಧೆಯಿಂದ ಹೊರಬಿದ್ದಿದ್ದರು.

ಅಶ್ವಿನಿ ಭಟ್ ಮತ್ತು ಶಿಖಾ ಗೌತಮ್ ಇಟಲಿಯ ಎದುರಾಳಿಗಳ ವಿರುದ್ಧ ಸುಲಭ ಜಯ ಸಾಧಿಸಿದರು. ಅವರು 21-8, 21-14 ಅಂತರದಿಂದ ಗೆದ್ದರು. ಪುರುಷರ ಡಬಲ್ಸ್‌ನಲ್ಲಿ, ಕೆಪಿ ಗಾರ್ಗ್ ಮತ್ತು ವಿವಿಜಿ ಪ್ರಾಂಗ್ಲೆ ಅವರು ಫ್ರೆಂಚ್ ಜೋಡಿ ಎಫ್ ಡೆಲ್ರುಯ್ ಮತ್ತು ಡಬ್ಲ್ಯೂ ವಿಲೇಜರ್ ವಿರುದ್ಧ 14-21, 18021 ರಲ್ಲಿ ಸೋತರು.

ಮಿಶ್ರ ಡಬಲ್ಸ್‌ನಲ್ಲಿ ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ ಥಾಯ್ ಜೋಡಿ ಸುಪಕ್ ಜೊಮ್ಕೊ ಮತ್ತು ಸುಪಿಸಾರಾ ಪಯೋಸಂಪ್ರಾನ್ ವಿರುದ್ಧ 14-21, 17-21 ರಿಂದ ಸೋತರು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಜಪಾನ್‌ನ ಟೋಕಿಯೋದಲ್ಲಿ ಆಗಸ್ಟ್ 22 ರಿಂದ ಪ್ರಾರಂಭವಾಗಿದ್ದು, ಆಗಸ್ಟ್ 28 ರವರೆಗೆ ನಡೆಯಲಿದೆ. ಭಾರತದ ಪ್ರಮುಖ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಇಂಜ್ಯುರಿಯಿಂದಾಗಿ ಟೂರ್ನಿಗೆ ಗೈರಾಗಿದ್ದಾರೆ.

Story first published: Wednesday, August 24, 2022, 16:53 [IST]
Other articles published on Aug 24, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+