ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಪದಕದ ಆಸೆ ಕೈ ಬಿಟ್ಟ HS ಪ್ರಣಯ್

ಎಚ್ ಎಸ್ ಪ್ರಣಯ್ ಅವರ ಕನಸಿನ ಓಟ ಮುಗಿದಿದೆ. ಟೋಕಿಯೋದಲ್ಲಿ ನಡೆಯುತ್ತಿರುವ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸ್ಟಾರ್ ಬ್ಯಾಡಿಂಟನ್ ಪ್ಲೇಯರ್ ಎಚ್ ಎಸ್ ಪ್ರಣಯ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದಾರೆ. ಚೀನಾದ ಪ್ರತಿಸ್ಪರ್ಧಿ ಝಾವೊ ಜುನ್‌ಪೆಂಗ್ ವಿರುದ್ಧ ಕೊನೆಯ ಎಂಟರಲ್ಲಿ ಪತನಗೊಂಡರು.
ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಎಚ್‌ಎಸ್ ಪ್ರಣಯ್ 17-21, 21-16, 21-17 ಅಂಕಗಳಿಂದ ಭಾರತದವರೇ ಆದ ಲಕ್ಷ್ಯ ಸೇನ್ ಅವರನ್ನು ಸೋಲಿಸಿ ಕ್ವಾರ್ಟರ್ ಪ್ರವೇಶಿಸಿದರು. ಆದ್ರೆ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುವ ಮೂಲಕ ಪದಕದ ಆಸೆ ಕೈ ಬಿಟ್ಟಿದ್ದಾರೆ. ಭಾರತದ ಉಳಿದೆಲ್ಲ ದೊಡ್ಡ ಆಟಗಾರರು ನಿರಾಸೆ ಮೂಡಿಸಿರುವ ಸಮಯದಲ್ಲಿ ಈಗ ಪ್ರಣಯ್ ಕೂಡ ಸಿಂಗಲ್ಸ್ ವಿಭಾಗದಲ್ಲಿ ಪದಕ ವಂಚಿತರಾಗಿದ್ದಾರೆ.

ಚೀನಾ ಎದುರಾಳಿ ವಿರುದ್ಧ ನಡೆಯಲಿಲ್ಲ ಪ್ರಣಯ್ ಆಟ
ಟೋಕಿಯೊದಲ್ಲಿ ಶುಕ್ರವಾರ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಜುನ್ ಪೆಂಗ್ ಝಾವೊ ವಿರುದ್ಧ ಎಚ್‌ಎಸ್ ಪ್ರಣಯ್ ಪರಾಭವಗೊಂಡರು. ಉತ್ತಮ ಆರಂಭದ ಹೊರತಾಗಿಯೂ, ಯುವ ಪ್ರತಿಭೆ ಚೀನಾದ ಪ್ರತಿಸ್ಪರ್ಧಿ ವಿರುದ್ಧ ಗೆಲ್ಲಲು ವಿಫಲರಾದರು. ಮೊದಲ ಗೇಮ್‌ನಲ್ಲಿ ಝಾವೊ ಅವರ ವಿರುದ್ಧ ಪ್ರಣಯ್‌ಗೆ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಮುಂದಿನ ಎರಡು ಗೇಮ್‌ನಲ್ಲಿ ಸೋತ ನಂತರ, ಅವರು ಜಪಾನ್‌ನಿಂದ ಭಾರತಕ್ಕೆ ವಾಪಸ್ಸಾಗಲು ತಮ್ಮ ಟಿಕೆಟ್ ಅನ್ನು ಖಚಿತಪಡಿಸಿದರು. 21-19, 6-21, 18-21 ಗೇಮ್‌ಗಳ ಅಂತರದಲ್ಲಿ ಸೋಲನ್ನ ಅನುಭವಿಸಿದರು.
ವಿರಾಟ್ ಫಾರ್ಮ್ ಕಳೆದುಕೊಂಡಿಲ್ಲ: ಫ್ಯಾನ್ಸ್, ಕೊಹ್ಲಿಯಿಂದ ಕೇವಲ ಸೆಂಚುರಿಯನ್ನಷ್ಟೇ ಬಯಸುತ್ತಿದ್ದಾರೆ!

ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಅಬ್ಬರಿಸಿದ್ದ ಪ್ರಣಯ್
30 ವರ್ಷದ ಪ್ರಣಯ್ ಒಂಬತ್ತನೇ ಶ್ರೇಯಾಂಕದ ಲಕ್ಷ್ಯ ಸೇನ್ ಅವರನ್ನು 17-21, 21-16 ಮತ್ತು 21-17 ರಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿದರು. ಅವರು ನೇರ ಗೇಮ್‌ಗಳಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಕೆಂಟೊ ಮೊಮೊಟಾ ಅವರನ್ನು ಸೋಲಿಸಿದ ಮರುದಿನ ಸೇನ್ ಅವರನ್ನು ಸೋಲಿಸಿದರು. 21-17, 21-16 ರಲ್ಲಿ ಮೊಮೊಟಾ ಅವರನ್ನು ಸೋಲಿಸಿದರು. ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಆಸ್ಟ್ರಿಯಾದ ಲುಕಾ ರಾಬರ್ ಅವರನ್ನು 21-11, 21-11 ರಿಂದ ಸೋಲಿಸಿದರು.
ಏಷ್ಯಾ ಕಪ್ 2022: ಭಾರತ ವರ್ಸಸ್ ಪಾಕಿಸ್ತಾನ ತಂಡದ ಸಂಭಾವ್ಯ ಪ್ಲೇಯಿಂಗ್ 11

ಪದಕ ಖಚಿತಪಡಿಸಿದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಜೋಡಿ ಇತಿಹಾಸ ನಿರ್ಮಿಸಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ನಂತರ ಇದೀಗ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಪದಕ ಖಚಿತವಾಗಿದೆ. ವಿಶ್ವ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್‌ನಲ್ಲಿ ಭಾರತ ಹಿಂದೆಂದೂ ಪದಕ ಗೆದ್ದಿರಲಿಲ್ಲ.
ಜಪಾನ್‌ನ ಯುಗೊ ಕೊಬಯಾಶಿ-ಟಕುರೊ ಹಾಕಿ ಜೋಡಿಯನ್ನು 24-22, 15-21, 21-14 ಅಂತರದಿಂದ ಸೋಲಿಸಿದ ಭಾರತದ ಜೋಡಿ ಕೊನೆಯ ನಾಲ್ಕಕ್ಕೆ ತಲುಪಿತು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಡೆನ್ಮಾರ್ಕ್ ಅನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದರು. ಇದೀಗ ಅದ್ರಲ್ಲೂ ಗೆಲ್ಲುವ ಮೂಲಕ ಪದಕ ಖಚಿತಪಡಿಸಿದ್ದಾರೆ.

ಸ್ಟಾರ್ ಆಟಗಾರರೇ ಪದಕದ ಆಸೆ ಕೈ ಬಿಟ್ಟರು
ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿ ಡಬಲ್ಸ್‌ನಲ್ಲಿ ಪದಕವನ್ನು ಖಚಿತಪಡಿಸಿಕೊಂಡಿತು, ಆದರೆ ಈ ಬಾರಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವೈಫಲ್ಯದ ಅಂಕಿಅಂಶಗಳು ಹೆಚ್ಚಾಗಿವೆ. ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್, ಎಚ್.ಎಸ್.ಪ್ರಣೋಯ್, ಲಕ್ಷ್ಯ ಸೇನ್ ಅವರಂತಹ ತಾರೆಯರು ಒಬ್ಬರ ಹಿಂದೆ ಒಬ್ಬರಂತೆ ಪದಕ ಕೈಬಿಟ್ಟಿರುವುದು ಭಾರತೀಯ ಕ್ರೀಡಾಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಪಂದ್ಯದಲ್ಲಿ ಗಾಯಗೊಂಡಿದ್ದ ಪಿವಿ ಸಿಂಧು ಈ ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications