ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2022: ಭಾರತ ವರ್ಸಸ್ ಪಾಕಿಸ್ತಾನ ತಂಡದ ಸಂಭಾವ್ಯ ಪ್ಲೇಯಿಂಗ್ 11

India vs pakistan

ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯ ಮತ್ತೆ ಬಂದಿದೆ. ಆಗಸ್ಟ್‌ 28 ರಂದು (ಭಾನುವಾರ) ದುಬೈನಲ್ಲಿ ಭಾರತ-ಪಾಕಿಸ್ತಾನ ಏಷ್ಯಾಕಪ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಟಿಕೆಟ್ ಮಾರಾಟವಾದ ಕೆಲವೇ ಗಂಟೆಗಳಲ್ಲಿ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿರುವುದರಿಂದ ಅಭಿಮಾನಿಗಳು ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿರುವುದು ಸ್ಪಷ್ಟವಾಗಿದೆ.

ನಾಲ್ಕು ವರ್ಷಗಳ ಬಳಿಕ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯಲ್ಲಿ ಉಭಯ ತಂಡಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. 2018ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಚಾಂಪಿಯನ್ ಆಗಿದ್ದ ಭಾರತ, ಇದೀಗ ರೋಹಿತ್ ಅಡಿಯಲ್ಲೇ ಮುನ್ನಡೆಯುತ್ತಿದೆ.

ಭಾನುವಾರ ರಾತ್ರಿ ಭಾರತೀಯ ಕಾಲಮಾನ 7.30ಕ್ಕೆ ಪಂದ್ಯ ಪ್ರಾರಂಭವಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್‌ಸ್ಟಾರ್‌ನಲ್ಲಿ ಪಂದ್ಯವನ್ನು ನೇರಪ್ರಸಾರ ವೀಕ್ಷಿಸಬಹುದು. 2021 ರ ಟಿ 20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾದಾಗ ಪಾಕಿಸ್ತಾನವು ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತು. ಹೀಗಾಗಿ ಭಾರತ ತಿರುಗೇಟು ನೀಡುವ ನಿರೀಕ್ಷೆ ಹೊಂದಿದೆ.

ಉಭಯ ತಂಡಗಳಲ್ಲಿದ್ದಾರೆ ಸ್ಟಾರ್ ಆಟಗಾರರು

ಉಭಯ ತಂಡಗಳಲ್ಲಿದ್ದಾರೆ ಸ್ಟಾರ್ ಆಟಗಾರರು

ದುಬೈ, ಎರಡೂ ತಂಡಗಳಿಗೆ ಅನುಭವಿ ಪಿಚ್ ಆಗಿದೆ. ಪಂದ್ಯವು ಟಿ20 ಮಾದರಿಯಲ್ಲಿರುವುದರಿಂದ ಅದೃಷ್ಟವು ನಿರ್ಣಾಯಕ ಪಾತ್ರ ವಹಿಸುತ್ತದೆ. ಎರಡೂ ತಂಡಗಳು ಸಾಕಷ್ಟು ಸ್ಟಾರ್‌ಗಳನ್ನು ಹೊಂದಿವೆ. ಭಾರತೀಯ ಶ್ರೇಣಿಯಲ್ಲಿ ಹಿರಿಯರ ಸಂಖ್ಯೆಯೇ ಹೆಚ್ಚು. ಆದರೆ ಪಾಕಿಸ್ತಾನ ಅದ್ಭುತಗಳನ್ನು ಸೃಷ್ಟಿಸುವ ತಂಡವಾಗಿದೆ. ಬಾಬರ್ ಆಜಮ್, ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್ ಮತ್ತು ಆಸಿಫ್ ಅಲಿ ಅವರು ಪಾಕಿಸ್ತಾನಕ್ಕೆ ಶಕ್ತಿ ತುಂಬಿದರೆ ಭಾರತಕ್ಕೆ ಕಠಿಣ ಸವಾಲೊಡ್ಡಬಹುದು.

ಟಿ20 ಮಾದರಿಯಲ್ಲಿ ಹೆಡ್ ಟು ಹೆಡ್ ಮಾದರಿಯಲ್ಲಿ ಭಾರತಕ್ಕೆ ಸ್ಪಷ್ಟ ಮೇಲುಗೈ ಹೊಂದಿದೆ. ಭಾರತ ಇದುವರೆಗೆ 9 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿದೆ. ಪಾಕಿಸ್ತಾನ ಎರಡು ಬಾರಿ ಗೆದ್ದಿದೆ. ಎರಡೂ ತಂಡಗಳಿಗೆ ಗಾಯಗಳು ಕಾಡುತ್ತಿದ್ದು, ಭಾರತ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಇಲ್ಲದೆ ಇದ್ದರೆ, ಪಾಕಿಸ್ತಾನವು ಶಾಹೀನ್ ಶಾ ಆಫ್ರಿದಿ ಇಲ್ಲದೆ ಕಣಕ್ಕಿಳಿಯಲಿದೆ. ಮತ್ತೊಮ್ಮೆ ವೇಗದ ಬೌಲರ್ ಮೊಹಮ್ಮದ್ ವಾಸಿಂ ಗಾಯಗೊಂಡಿದ್ದು, ಅಭ್ಯಾಸ ಶಿಬಿರದಿಂದ ಹೊರಗುಳಿದಿದ್ದಾರೆ.

ಸ್ಟಾರ್ ಬ್ಯಾಟಿಂಗ್ ಲೈನಪ್ ಹೊಂದಿರುವ ಟೀಂ ಇಂಡಿಯಾ

ಸ್ಟಾರ್ ಬ್ಯಾಟಿಂಗ್ ಲೈನಪ್ ಹೊಂದಿರುವ ಟೀಂ ಇಂಡಿಯಾ

ಬ್ಯಾಟಿಂಗ್ ಭಾರತದ ಶಕ್ತಿ. ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅದ್ಭುತ ದಾಖಲೆಯನ್ನು ಹೊಂದಿರುವ ಬ್ಯಾಟಿಂಗ್ ಲೈನ್-ಅಪ್‌ಗಳಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಮತ್ತು ರವೀಂದ್ರ ಜಡೇಜಾ ಫಿನಿಶರ್ ಆಗಿರುವುದರಿಂದ ಭಾರತ ಹೆಚ್ಚು ಆತ್ಮವಿಶ್ವಾಸದಲ್ಲಿದೆ.

ಬೌಲಿಂಗ್ ವಿಭಾಗದಲ್ಲಿ ಭಾರತ ಕೊಂಚ ಆತಂಕದಲ್ಲಿದೆ. ಭುವನೇಶ್ವರ್ ಕುಮಾರ್ ಮಾತ್ರ ಹಿರಿಯ ವೇಗಿ. ಅವೇಶ್ ಖಾನ್ ಮತ್ತು ಅರ್ಷದೀಪ್ ಸಿಂಗ್ ಯುವ ವೇಗಿಗಳು. ಹೀಗಾಗಿ ಭಾರತ ಹಾರ್ದಿಕ್ ಬೌಲಿಂಗ್ ಮೇಲೆ ನಂಬಿಕೆ ಇಟ್ಟಿದೆ. ಹಾರ್ದಿಕ್ ಅವರೊಂದಿಗೆ, ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಅವರಂತಹ ವೇಗಿಗಳನ್ನು ಭಾರತ ಆಡುವ 11 ಕ್ಕೆ ಪರಿಗಣಿಸುವ ಸಾಧ್ಯತೆಯಿದೆ. ಜಡೇಜಾ ಸ್ಪಿನ್ ಆಲ್ ರೌಂಡರ್ ಆಗಿದ್ದು, ಯುಜವೇಂದ್ರ ಚಾಹಲ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಲಿದ್ದಾರೆ.

ಆರ್.ಅಶ್ವಿನ್, ದಿನೇಶ್ ಕಾರ್ತಿಕ್ ಮತ್ತು ದೀಪಕ್ ಹೂಡಾರನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಯ್ಕೆ ಮಾಡಬೇಕಾಗಿರುವುದು ಭಾರತಕ್ಕೆ ಗೊಂದಲ ಮೂಡಿಸಿದೆ. ರಾಹುಲ್ ದ್ರಾವಿಡ್ ಅನುಪಸ್ಥಿತಿಯು ಭಾರತಕ್ಕೆ ಪ್ರಮುಖ ಸಮಸ್ಯೆಯಾಗಿದೆ. ಮುಖ್ಯ ಕೋಚ್ ದ್ರಾವಿಡ್ ಅನುಪಸ್ಥಿತಿಯಲ್ಲಿ ವಿವಿಎಸ್ ಲಕ್ಷ್ಮಣ್ ಭಾರತಕ್ಕೆ ಕೋಚ್ ಆಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಫಾರ್ಮ್ ಕೂಡ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

Asia Cup 2022: ಪಂದ್ಯಗಳ ನೇರಪ್ರಸಾರ ಯಾವೆಲ್ಲಾ ಚಾನೆಲ್‌ಗಳಲ್ಲಿ ಲಭ್ಯ? ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?

ಕೆಲವು ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿರುವ ಪಾಕಿಸ್ತಾನ

ಕೆಲವು ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿರುವ ಪಾಕಿಸ್ತಾನ

ಮತ್ತೊಂದೆಡೆ ಪಾಕಿಸ್ತಾನದ ಸಮಸ್ಯೆ ಎಂದರೆ ಅವರು ಕೆಲವು ಆಟಗಾರರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಪಾಕಿಸ್ತಾನವು ನಾಯಕ ಬಾಬರ್ ಅಜಮ್, ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಮತ್ತು ಎಡಗೈ ಸ್ಪಿನ್ನರ್ ಫಖರ್ ಜಮಾನ್ ಮೇಲೆ ಅವಲಂಬಿತವಾಗಿದೆ. ಬಾಬರ್ ಬೇಗನೆ ಔಟಾದರೆ ಪಾಕಿಸ್ತಾನ ಒತ್ತಡಕ್ಕೆ ಸಿಲುಕುವುದು ಖಚಿತ. ಶಾಹೀನ್ ಅನುಪಸ್ಥಿತಿಯೂ ಪಾಕಿಸ್ತಾನಕ್ಕೆ ಆತಂಕ ತಂದಿದೆ.

ಸ್ಪಿನ್ ಬಲೆ ಸೃಷ್ಟಿಸುವ ಮೂಲಕ ಪಾಕಿಸ್ತಾನದ ಬ್ಯಾಟಿಂಗ್ ಲೈನ್ ಅನ್ನು ಬಲೆಗೆ ಬೀಳಿಸುವ ಆಶಯವನ್ನು ಭಾರತ ಹೊಂದಿದೆ. ಟಾಸ್ ಪಂದ್ಯವನ್ನು ನಿರ್ಧರಿಸಲಿದೆ. ಎರಡೂ ತಂಡಗಳು ಎರಡನೇ ಬ್ಯಾಟಿಂಗ್‌ಗೆ ಹೆಚ್ಚು ಆಸಕ್ತಿ ವಹಿಸಲಿವೆ. ಬಾಬರ್ ನ ತಂತ್ರಗಳನ್ನು ರೋಹಿತ್ ಹೇಗೆ ಪ್ರತಿತಂತ್ರ ರೂಪಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Asia Cup 2022: ದೀಪಕ್ ಚಹಾರ್ ಗಾಯಗೊಂಡಿಲ್ಲ, ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಟೀಂ ಇಂಡಿಯಾ
ಕೆ.ಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಯುಜವೇಂದ್ರ ಚಾಹಲ್, ಅರ್ಷದೀಪ್ ಸಿಂಗ್

ಪಾಕಿಸ್ತಾನ
ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಆಸಿಫ್ ಅಲಿ, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಉಸ್ಮಾನ್ ಖಾದಿರ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಮ್ ಜೂನಿಯರ್, ಶಹನವಾಜ್ ಧಹಾನಿ

Story first published: Friday, August 26, 2022, 13:31 [IST]
Other articles published on Aug 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X