ವಿಶ್ವ ಚಾಂಪಿಯನ್ ಶಿಪ್, ಬೆಳ್ಳಿಗೆ ತೃಪ್ತಿಪಟ್ಟ ಸೈನಾ ನೆಹ್ವಾಲ್
ಜಕಾರ್ತಾ (ಇಂಡೋನೇಷಿಯಾ), ಆಗಸ್ಟ್ 16: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದ ಸೈನಾ ನೆಹ್ವಾಲ್ ಅವರು ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಸೋಲು ಕಂಡಿದ್ದಾರೆ. ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟ ನೆಹ್ವಾಲ್ ಅವರು ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಸೈನಾ ಅವರು ಭಾನುವಾರ ನಡೆದ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಹಾಗೂ ಹಾಲಿ ಚಾಂಪಿಯನ್ ಸ್ಪೇನ್‌ನ ಕರೊಲಿನಾ ಮರಿನ್‌ರನ್ನು ಸಮರ್ಥವಾಗಿ ಎದುರಿಸಿದರು. ಆದರೆ, ಸ್ಪೇನಿನ ಆಟಗಾರ್ತಿ ಕರೊಲಿನಾ ಅವರು 21-16, 21-19 ನೇರ ಸೆಟ್ ಗಳಿಂದ ಸೈನಾ ಅವರ ಆಸೆಗೆ ಭಂಗ ತಂದರು. ['ಸೈನಾ' ವೃತ್ತಿ ಜೀವನ ಸಾಧನೆ ಕಿರುನೋಟ]
ಸೈನಾ ಅವರು ಜನವರಿಯಲ್ಲಿ ನಡೆದ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಫೈನಲ್‌ನಲ್ಲಿ ಮರಿನ್‌ರನ್ನು ಮೂರು ಸೆಟ್‌ಗಳಿಂದ ಮಣಿಸಿದ್ದರು. 2014ರ ಆಸ್ಟ್ರೇಲಿಯನ್ ಓಪನ್ ಹಾಗೂ 2013ರ ಇಂಡೋನೇಷ್ಯಾ ಓಪನ್‌ನಲ್ಲಿ ಸೈನಾ ಅವರು ಮರಿನ್‌ರನ್ನು ಸೋಲಿಸಿದ್ದರು.

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಸೈನಾ ಅವರು ಸ್ಥಳೀಯ ತಾರೆ ಲಿಂಡಾವೆನಿ ಫನೇತ್ರಿ ಅವರನ್ನು 21-17, 21-17 ಅಂತರದಿಂದ ಮಣಿಸಿ ಮೊದಲ ಬಾರಿ ವಿಶ್ವ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದರು. ಸೈನಾ ವಿಶ್ವ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ತಲುಪಿರುವ ಭಾರತದ ಮೊದಲ ಬ್ಯಾಡ್ಮಿಂಟನ್ ತಾರೆ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು.
ಮತ್ತೊಂದು ಸೆಮಿ ಫೈನಲ್‌ನಲ್ಲಿ ಮರಿನ್ ಅವರು ಕೊರಿಯಾದ ಸಂಗ್ ಜಿ-ಹ್ಯೂನ್‌ರನ್ನು 21-17, 15-21, 21-16 ಸೆಟ್‌ಗಳಿಂದ ಸೋಲಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತೀಯರ ಟಾಪ್ ಸಾಧನೆ:
* 2015: ಸೈನಾ ನೆಹ್ವಾಲ್ (ಮಹಿಳೆಯರ ಸಿಂಗಲ್ಸ್) -ಬೆಳ್ಳಿ
* 2013 ಹಾಗೂ 2014 : ಪಿವಿ ಸಿಂಧು (ಮಹಿಳೆಯರ ಸಿಂಗಲ್ಸ್)- ಕಂಚು
* 2011 : ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ (ಮಹಿಳೆಯರ ಡಬಲ್ಸ್)-ಕಂಚು
* 1983: ಪ್ರಕಾಶ್ ಪಡುಕೋಣೆ (ಪುರುಷರ ಸಿಂಗಲ್ಸ್) -ಕಂಚು
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications