For Quick Alerts
ALLOW NOTIFICATIONS  
For Daily Alerts
 

ಐಸಿಸಿ ಟಿ20 ವಿಶ್ವಕಪ್‌ಗೆ ಕೌಂಟ್‌ಡೌನ್‌: 100 ದಿನಗಳಷ್ಟೇ ಬಾಕಿ

ICC WC 2022

ಬಹುತೇಕ ಎಲ್ಲಾ ಕ್ರಿಕೆಟ್ ರಾಷ್ಟ್ರಗಳು ಈಗಾಗಲೇ ಬ್ಯುಸಿಯಾದ ವೇಳಾಪಟ್ಟಿಯನ್ನ ಹೊಂದಿದ್ದು, ಭಾರತ ತಂಡ ಸೇರಿದಂತೆ ಪ್ರಮುಖ ದೇಶಗಳ ಎಲ್ಲಾ ತಂಡಗಳು ಏಕದಿನ, ಟೆಸ್ಟ್‌, ಟಿ20 ಸರಣಿಗಳಲ್ಲಿ ತೊಡಗಿಗೊಂಡಿವೆ. ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದೆ.

ಇನ್ನು ಆಸ್ಟ್ರೇಲಿಯಾ ತಂಡ ಶ್ರೀಲಂಕಾ ವಿರುದ್ಧ ಸರಣಿ ಆಡುತ್ತಿದೆ. ಬಾಂಗ್ಲಾದೇಶ ವೆಸ್ಟ್ ಇಂಡೀಸ್ ಪ್ರವಾಸವನ್ನು ಮುಂದುವರೆಸಿದೆ. ನ್ಯೂಜಿಲೆಂಡ್ ತಂಡ ಐರ್ಲೆಂಡ್ ಪ್ರವಾಸಕ್ಕೆ ತೆರಳಿದೆ. ಪಾಕಿಸ್ತಾನ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ಸರಣಿ ಗೆದ್ದಿತ್ತು.

ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಗಳು ನಡುವೆ ಟಿ20 ವಿಶ್ವಕಪ್

ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಗಳು ನಡುವೆ ಟಿ20 ವಿಶ್ವಕಪ್

ಹೀಗೆ ಕ್ರಿಕೆಟ್ ರಾಷ್ಟ್ರಗಳು ಒಂದರ ಹಿಂದೆ ಮತ್ತೊಂದು ಕ್ರಿಕೆಟ್‌ ಸರಣಿಗಳನ್ನು ಆಡುತ್ತಿವೆ. ಎಲ್ಲಾ ತಂಡಗಳು ಕೂಡ ತಮ್ಮ ಸರಣಿಯಲ್ಲಿ ಟಿ20 ಪಂದ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಇದಕ್ಕೆ ಪ್ರಮುಖ ಕಾರಣ ಮುಂಬರುವ ಟಿ20 ವಿಶ್ವಕಪ್. ಅಕ್ಟೋಬರ್ 16 ರಿಂದ ಟಿ20 ವಿಶ್ವಕಪ್ ಮೆಗಾ ಟೂರ್ನಿ ಆರಂಭವಾಗಲಿದೆ. ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದ್ದು, ಇದೇ ಮೊದಲ ಬಾರಿಗೆ ಕಾಂಗರೂ ರಾಷ್ಟ್ರ ಚುಟುಕು ಕ್ರಿಕೆಟ್ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ.

100 ದಿನ ಮಾತ್ರ ಟೂರ್ನಿಗೆ ಬಾಕಿ

ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಇನ್ನು ನೂರು ದಿನ ಮಾತ್ರ ಬಾಕಿ ಇದೆ. ಇಂದಿನಿಂದ ನಿಖರವಾಗಿ 100 ದಿನಗಳಲ್ಲಿ, ಟಿ20 ವಿಶ್ವಕಪ್‌ನ ಮೊದಲ ಪಂದ್ಯ ಆರಂಭವಾಗಲಿದೆ. ಫೈನಲ್ ಸೇರಿದಂತೆ ಈ ಟೂರ್ನಿಯಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 16 ರಿಂದ ಗುಂಪು ಹಂತದ ಪಂದ್ಯಗಳು ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ-ನಮೀಬಿಯಾ ಮುಖಾಮುಖಿಯಾಗಲಿವೆ. ಗುಂಪು ಹಂತದಲ್ಲಿ ಒಟ್ಟು 12 ಪಂದ್ಯಗಳು ನಡೆಯಲಿವೆ. ಶ್ರೀಲಂಕಾ, ನಮೀಬಿಯಾ, ವೆಸ್ಟ್ ಇಂಡೀಸ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸ್ಕಾಟ್ಲೆಂಡ್ ಮುಖಾಮುಖಿಯಾಗಲಿವೆ.

IND vs ENG: 2ನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿ ಇದೆಯಾ? ಪಿಚ್ ವರದಿ, ಬೌಂಡರಿ ಲೆಂತ್ ಮಾಹಿತಿ ಇಲ್ಲಿದೆ

ಎಂಸಿಜಿಯಲ್ಲಿ ನವೆಂಬರ್ 13, 2022ಕ್ಕೆ ಫೈನಲ್ ಪಂದ್ಯ

ಎಂಸಿಜಿಯಲ್ಲಿ ನವೆಂಬರ್ 13, 2022ಕ್ಕೆ ಫೈನಲ್ ಪಂದ್ಯ

ಟಿ20 ವಿಶ್ವಕಪ್ 2022ರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ದಿನಾಂಕವೂ ಹೊರಬಿದ್ದಿದ್ದು, ನವೆಂಬರ್ 9 ಮತ್ತು 10ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ ಹಾಗೂ ಅಡಿಲೇಡ್ ಓವಲ್‌ನಲ್ಲಿ ಸೆಮಿಫೈನಲ್ಸ್ ನಡೆಯಲಿದೆ. ಇನ್ನು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನವೆಂಬರ್ 13, 2022ರಂದು ಫೈನಲ್ ಪಂದ್ಯ ನಡೆಯಲಿದೆ.

ಪದೇ ಪದೇ ಶಾರ್ಟ್ ಬಾಲ್‌ಗೆ ಔಟಾಗುತ್ತಿರುವ ಶ್ರೇಯಸ್‌ ಅಯ್ಯರ್‌: ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಸಿಗೋದು ಅನುಮಾನ!

8 ಲಕ್ಷಕ್ಕೂ ಅಧಿಕ ಫ್ಯಾನ್ಸ್‌ ಭಾಗಿಯಾಗುವ ಸಾಧ್ಯತೆ

8 ಲಕ್ಷಕ್ಕೂ ಅಧಿಕ ಫ್ಯಾನ್ಸ್‌ ಭಾಗಿಯಾಗುವ ಸಾಧ್ಯತೆ

ಅಕ್ಟೋಬರ್ 23 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಹೊರತುಪಡಿಸಿ, ಇಂದು ಬಿಡುಗಡೆಯಾದ ಎಲ್ಲಾ ಪಂದ್ಯಗಳಿಗೆ ಹೆಚ್ಚುವರಿ ಟಿಕೆಟ್‌ಗಳೊಂದಿಗೆ 800,000 ಕ್ಕೂ ಹೆಚ್ಚು ಅಭಿಮಾನಿಗಳು ಐಸಿಸಿ ಪುರುಷರ T20 ವಿಶ್ವಕಪ್ 2022 ಗೆ ಹಾಜರಾಗಲು ನಿರೀಕ್ಷಿಸಲಾಗಿದೆ. ಈ ಪಂದ್ಯಕ್ಕಾಗಿ ಟಿಕೆಟ್‌ಗಳ ಸಾಮಾನ್ಯ ಹಂಚಿಕೆ ಐದು ನಿಮಿಷಗಳಲ್ಲಿ ಮಾರಾಟವಾಗಿದೆ. ಫೆಬ್ರವರಿಯಲ್ಲಿ ಸಾರ್ವಜನಿಕ ಮಾರಾಟಕ್ಕೆ ಬರಲಿದೆ. ಪಂದ್ಯಕ್ಕೆ ಹೆಚ್ಚಿನ ಟಿಕೆಟ್‌ಗಳು ಲಭ್ಯವಿದ್ದರೆ ಅವುಗಳನ್ನು ನಂತರದ ದಿನಾಂಕದಲ್ಲಿ ಬಿಡುಗಡೆ ಮಾಡಲಾಗುತ್ತದೆ.

Hardik Pandya ಪಂದ್ಯ ಮುಗಿದ ನಂತರ ಹೀಗೆ ಹೇಳಿದ್ದೇಕೆ | *Cricket | Onendia Kannada
ಮುಂಬರುವ ವಿಶ್ವಕಪ್‌ ಆಡಲಿರುವ ತಂಡಗಳು

ಮುಂಬರುವ ವಿಶ್ವಕಪ್‌ ಆಡಲಿರುವ ತಂಡಗಳು

ಈ ಬಾರಿಯ ಟಿ20 ಚಾಂಪಿಯನ್ ಆಸ್ಟ್ರೇಲಿಯಾ, ರನ್ನರ್ ಅಪ್ ನ್ಯೂಜಿಲೆಂಡ್ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ, ನಂತರದ ಅತ್ಯುನ್ನತ ಶ್ರೇಣಿಯ ತಂಡಗಳಾಗಿ, ಪುರುಷರ T20 ವಿಶ್ವಕಪ್ 2022 ರ 'ಸೂಪರ್ 12' ಹಂತಕ್ಕೆ ನೇರ ಪ್ರವೇಶವನ್ನು ಪಡೆಯುತ್ತವೆ.

Story first published: Friday, July 8, 2022, 15:13 [IST]
Other articles published on Jul 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+