ಟಿ20 ವಿಶ್ವಕಪ್‌ನಲ್ಲಿ ಫಿಟ್ನೆಸ್ ಸಮಸ್ಯೆ ಎದುರಿಸಬಲ್ಲ ಭಾರತದ 3 ಆಟಗಾರರು!

ಟಿ20 ವಿಶ್ವಕಪ್‌ಗೂ ಭಾರತದ ಪ್ರಮುಖ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯಗೊಂಡಿರುವುದು ಟೀಂ ಇಂಡಿಯಾಗೆ ಅನಿರೀಕ್ಷಿತ ಹಿನ್ನಡೆಯಾಗಿದೆ. ಭಾರತದ ಸ್ಟಾರ್ ವೇಗಿ ಗಾಯದ ಚೇತರಿಕೆ ನಂತರ ಟೀಂ ಇಂಡಿಯಾಗೆ ವಾಪಸ್ಸಾಗಿದ್ದರು. ಆದ್ರೆ ಮತ್ತೆ ಗಾಯದಿಂದಾಗಿ T20 ವಿಶ್ವಕಪ್ ಸ್ಥಾನವನ್ನು ಕಳೆದುಕೊಂಡರು. ಬುಮ್ರಾ ಅನುಪಸ್ಥಿತಿಯು ಖಂಡಿತವಾಗಿಯೂ ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಬುಮ್ರಾ ಬದಲಿ ಆಟಗಾರನನ್ನು ಹುಡುಕುವುದು ಅಷ್ಟು ಸುಲಭವಲ್ಲ.

ಆದ್ರೆ ಕೇವಲ ಬುಮ್ರಾ ಅವರ ಗಾಯವು ಭಾರತದ ಪ್ರಸ್ತುತ ಕಾಳಜಿಯನ್ನು ಕೊನೆಗೊಳಿಸುವುದಿಲ್ಲ. ವಿಶ್ವಕಪ್‌ಗೂ ಮುನ್ನ ಭಾರತದ ಹೆಚ್ಚಿನ ಆಟಗಾರರು ಗಾಯಗೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಭಾರತದ ಹಲವು ಆಟಗಾರರು ಗಾಯಗಳಿಂದ ಬಳಲುತ್ತಿದ್ದಾರೆ. ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವವರಲ್ಲಿ ಪ್ರಸ್ತಕ್ತ ಟೀಂ ಇಂಡಿಯಾದಲ್ಲಿ ಇರುತ್ತಾರೆ. ಭಾರತೀಯ ಲೈನ್-ಅಪ್‌ನಲ್ಲಿ ಇನ್ನೂ ಗಾಯದ ಭೀತಿಯಲ್ಲಿರುವ ಮೂವರು ಆಟಗಾರರು ಯಾರು ಎಂದು ಈ ಕೆಳಗೆ ಕಾಣಬಹುದು.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರದ್ದೇ ಫಿಟ್ನೆಸ್ ಸಮಸ್ಯೆ. ಅವರ ಫಿಟ್ನೆಸ್ ಅನ್ನು ಹೆಚ್ಚು ನಿರೀಕ್ಷಿಸುವಂತಿಲ್ಲ. ಅಧಿಕ ತೂಕವು ರೋಹಿತ್‌ಗೆ ಇನ್ನೂ ಕಾಡುತ್ತಿದೆ. ರೋಹಿತ್ ಗಾಯಗೊಂಡ್ರೆ ಭಾರತದ ಲೆಕ್ಕಾಚಾರವೆಲ್ಲ ತಪ್ಪುತ್ತದೆ. ರೋಹಿತ್ ಶರ್ಮಾ ಕೂಡ ಭಾರತಕ್ಕೆ ಆರಂಭಿಕರಾಗಿ ಸಾಕಷ್ಟು ಭರವಸೆ ನೀಡಿದ್ದಾರೆ.

ರೋಹಿತ್ ಕೂಡ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರೋಹಿತ್ ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡುತ್ತಿದ್ದಾರೆ. ಹಿಟ್‌ಮ್ಯಾನ್‌ನ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಅವರು ಗಾಯಗೊಳ್ಳದಂತೆ ಭಾರತವು ಎಚ್ಚರಿಕೆಯಿಂದ ಮುಂದುವರಿಯಬೇಕು.

ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಪ್ರಮುಖ ದಾಖಲೆ ಸರಿಗಟ್ಟಿದ ಬಾಬರ್ ಅಜಂ

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ಭಾರತದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಕೂಡ ಗಾಯದ ಭೀತಿಯಲ್ಲಿದ್ದಾರೆ. ಭುವನೇಶ್ವರ್ ಈಗ ಭಾರತದ ಪರ ಸತತ ಪಂದ್ಯಗಳನ್ನು ಆಡುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ಟಿ20 ಪಂದ್ಯವನ್ನಾಡಿರುವ ಆಟಗಾರನಾಗಿದ್ದಾರೆ. ಏಷ್ಯಾಕಪ್ ಬಳಿಕ ಭುವಿ ಆಸ್ಟ್ರೇಲಿಯಾ ವಿರುದ್ಧವೂ ಆಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಸದ್ಯ ಯಾವುದೇ ಗಾಯದ ಸಮಸ್ಯೆ ಇಲ್ಲದಿದ್ದರೂ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ.

ಭುವಿ ಗಾಯದ ಸಮಸ್ಯೆಯಿಂದಾಗಿ ಭಾರತ ತಂಡದಿಂದ ಬಹಳ ಕಾಲ ಹೊರಗುಳಿಯಬೇಕಾಯಿತು. ಬುಮ್ರಾ ನಂತರ ಭುವನೇಶ್ವರ್ ಗಾಯಗೊಂಡರೆ, ಭಾರತಕ್ಕೆ ಸರಿಪಡಿಸಲಾಗದ ತಲೆನೋವಾಗಲಿದೆ. ಭುವಿ ಡೆತ್ ಓವರ್ ಗಳಲ್ಲಿ ಎದುರಾಳಿಯನ್ನ ಸೋಲಿಸಬಹುದಾದರೂ, ಹೊಸ ಚೆಂಡಿನಲ್ಲಿ ಉತ್ತಮ ಸ್ವಿಂಗ್ ಮೂಲಕ ವಿಕೆಟ್ ಕಬಳಿಸುವುದರಲ್ಲಿ ನಿಸ್ಸೀಮರು. ಭಾರತವು ಭುವಿಗೆ ಹೆಚ್ಚಿನ ವಿಶ್ರಾಂತಿಯನ್ನು ನೀಡಬೇಕಾಗಿದೆ ಮತ್ತು ಗಾಯದಿಂದ ಮುಕ್ತವಾಗಿರಲು ಅಗತ್ಯವಿದೆ.

9 ಕೋಟಿ ! ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ದಾಖಲೆಯ ಹಣ ಪಡೆದ ಕೊಹ್ಲಿ

ಹರ್ಷಲ್ ಪಟೇಲ್

ಹರ್ಷಲ್ ಪಟೇಲ್

ಭಾರತದ ಮಧ್ಯಮ ವೇಗಿ ಆಲ್ ರೌಂಡರ್ ಹರ್ಷಲ್ ಇತ್ತೀಚಿನ ದಿನಗಳಲ್ಲಿ ಗಾಯದ ಭೀತಿ ಎದುರಿಸುತ್ತಿರುವ ಸ್ಟಾರ್. ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಬಂದಿದ್ದ ಹರ್ಷಲ್ ಪಟೇಲ್ ಇದೀಗ ದಕ್ಷಿಣ ಆಫ್ರಿಕಾ ಸರಣಿಯನ್ನು ಆಡುತ್ತಿದ್ದಾರೆ. ಗಾಯದ ವಿರಾಮದ ನಂತರ ಹರ್ಷಲ್ ಪುನರಾಗಮನವಾಗಿದೆ. ಹರ್ಷಲ್ ಆಸೀಸ್ ಸರಣಿಯ ಮೊದಲು ಫಿಟ್ನೆಸ್ ಮರಳಿ ಪಡೆದರು. ಆದ್ರೆ ಪಕ್ಕೆಲುಬಿನ ಗಾಯದಿಂದಾಗಿ ಹರ್ಷಲ್ ಇನ್ನೂ ಗಾಯದ ಭೀತಿಯಲ್ಲಿದ್ದಾರೆ. ಟ 20 ವಿಶ್ವಕಪ್‌ನಲ್ಲಿ ಭಾರತವು ಹರ್ಷಲ್‌ಗೆ ನಿರ್ಣಾಯಕ ಪಾತ್ರವನ್ನು ನೀಡುತ್ತದೆ. ಆದರೆ ಅವರು ಗಾಯಗೊಳ್ಳುವ ಸಾಧ್ಯತೆಗಳು ಇನ್ನೂ ಇವೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, September 30, 2022, 23:22 [IST]
Other articles published on Sep 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X