T20 ವಿಶ್ವಕಪ್: ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11ನಲ್ಲಿ ಈ ನಾಲ್ವರಿಗೆ ಅವಕಾಶ ಡೌಟ್!

ಐಸಿಸಿ ಟಿ20 ವಿಶ್ವಕಪ್‌ನ ಅತ್ಯಂತ ಹೈವೋಲ್ಟೇಜ್ ಪಂದ್ಯವು ಇದೇ ಭಾನುವಾರ (ಅ.23)ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕ್ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಇದು ಸೂಪರ್ 12 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯವಾಗಿದೆ. ಆದ್ದರಿಂದ, ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ಗೆಲುವಿನೊಂದಿಗೆ ಪಂದ್ಯ ಪ್ರಾರಂಭಿಸುವ ಲೆಕ್ಕಾಚಾರ ಹೊಂದಿದೆ.
ಟೀಂ ಇಂಡಿಯಾ ಕಳೆದ ವರ್ಷದ ಟಿ20 ವಿಶ್ವಕಪ್‌ನ ನೆನಪುಗಳನ್ನು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಯೋಜಿಸಿದೆ. ಅಂದು ದುಬೈನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಹತ್ತು ವಿಕೆಟ್‌ಗಳಿಂದ ಭಾರತವನ್ನು ಮುಜುಗರಕ್ಕೀಡು ಮಾಡಿತ್ತು. ಇದು ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಅವರ ಮೊದಲ ಜಯವಾಗಿದೆ. ಈ ಬಾರಿ ಭಾರತ ಉತ್ತಮ ಸಿದ್ಧತೆಯೊಂದಿಗೆ ವಿಶ್ವಕಪ್ ತಲುಪಲಿದೆ. ಈ ಪಂದ್ಯಕ್ಕೆ ಆಡುವ ಹನ್ನೊಂದು ಆಟಗಾರರು ಬಹುತೇಕ ನಿರ್ಧಾರವಾಗಿದೆ ಎಂದು ರೋಹಿತ್ ಬಹಿರಂಗಪಡಿಸಿದ್ದಾರೆ.
ಹೀಗಾಗಿ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಇರುವ ಆಟಗಾರರನ್ನು ಈ ಕೆಳಗೆ ಕಾಣಬಹುದು.

ಹರ್ಷಲ್ ಪಟೇಲ್
ಭಾರತವು ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಮಧ್ಯಮ ವೇಗಿ ಹರ್ಷಲ್ ಪಟೇಲ್ ಅವರನ್ನು ಕೈಬಿಡಬಹುದು. ಭಾರತದ ಪೇಸ್ ಸಂಯೋಜನೆಯು ಮೂವರು ವೇಗದ ಬೌಲರ್‌ಗಳು ಮತ್ತು ವೇಗದ ಬೌಲಿಂಗ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಒಳಗೊಂಡಿರುತ್ತದೆ. ಪವರ್‌ಪ್ಲೇ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್, ಡೆತ್ ಓವರ್ ಸ್ಪೆಷಲಿಸ್ಟ್ ಅರ್ಷದೀಪ್ ಸಿಂಗ್ ಮತ್ತು ಪವರ್‌ಪ್ಲೇ ಮತ್ತು ಕೊನೆಯ ಓವರ್‌ಗಳಲ್ಲಿ ಮಿಂಚಬಲ್ಲ ಮೊಹಮ್ಮದ್ ಶಮಿ ಇಲೆವೆನ್‌ನಲ್ಲಿ ಮೂವರು ವೇಗದ ಬೌಲರ್‌ಗಳಾಗಿರುತ್ತಾರೆ. ಆಸೀಸ್ ವಿರುದ್ಧ ಅಭ್ಯಾಸದಲ್ಲಿ 20ನೇ ಓವರ್ ಬೌಲ್ ಮಾಡಿದ ಶಮಿ ಕೇವಲ ನಾಲ್ಕು ರನ್ ಬಿಟ್ಟುಕೊಟ್ಟು ಮೂರು ವಿಕೆಟ್ ಪಡೆದರು.

ರಿಷಭ್ ಪಂತ್
ಬ್ಯಾಟಿಂಗ್‌ನಲ್ಲಿ ಫ್ಲಾಪ್ ಆಗಿರುವ ರಿಷಬ್ ಪಂತ್, ಇತ್ತೀಚೆಗೆ ಸಿಕ್ಕ ಯಾವುದೇ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಪಾಕ್ ವಿರುದ್ಧದ ಪಂದ್ಯದಲ್ಲಿ ಸೈಡ್ ಬೆಂಚ್‌ನಲ್ಲಿ ನಿಲ್ಲಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸಲು ಸಾಧ್ಯವಾಗದ ರಿಷಭ್ ಕೆಲವು ಪಂದ್ಯಗಳಲ್ಲಿ ಆರಂಭಿಕರಾಗಿ ಪ್ರಯತ್ನಿಸಿದರೂ ಅಲ್ಲಿಯೂ ದಯನೀಯವಾಗಿ ವಿಫಲರಾದರು. ಹಾಗಾಗಿ ಅವರ ಬದಲು ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಅವರ ಕಳಪೆ ಫಾರ್ಮ್ ಹೊರತಾಗಿ, ರಿಷಬ್ ಅವರ ಮೊಣಕಾಲಿನ ಗಾಯದ ಬಗ್ಗೆಯೂ ಅನುಮಾನಗಳಿವೆ. ಆಸೀಸ್ ವಿರುದ್ಧದ ಅಭ್ಯಾಸದ ವೇಳೆ, ಈತ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಕುಳಿತಿರುವುದನ್ನು ಕಾಣಬಹುದು.
Ind Vs Pak : ಅಭ್ಯಾಸ ಪಂದ್ಯದಲ್ಲಿ ಭಾರತದ ಬೌಲಿಂಗ್ ನೋಡಿ ಬೆಚ್ಚಿಬಿದ್ದ ಬಾಬರ್ ಅಜಂ ಮಾಡಿದ್ದೇನು ಗೊತ್ತಾ?

ದೀಪಕ್ ಹೂಡಾ
ವಿಶ್ವಕಪ್‌ಗೆ ಭಾರತದ ಬ್ಯಾಟಿಂಗ್ ಲೈನ್ ಅಪ್ ಸೆಟ್ಟೇರಿದೆ. ಅದರ ಮೇಲೆ ಹೆಚ್ಚಿನ ಕೆಲಸವನ್ನು ನಿರೀಕ್ಷಿಸುವ ಅಗತ್ಯವಿಲ್ಲ. ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಮೊದಲ ಆರು ಸ್ಥಾನಗಳಲ್ಲಿರಲಿದ್ದಾರೆ. ಹೀಗಾಗಿ ಆಲ್ ರೌಂಡರ್ ದೀಪಕ್ ಹೂಡಾ ಪ್ಲೇಯಿಂಗ್ ಇಲೆವೆನ್‌ನಿಂದ ಔಟ್ ಆಗುವುದು ಖಚಿತ. ಯಾರಾದರೂ ಅನಿರೀಕ್ಷಿತವಾಗಿ ಗಾಯಗೊಂಡರೆ ಮಾತ್ರ ಅವರು ಆಡುವ ಸಾಧ್ಯತೆಯಿದೆ.

ರವಿಚಂದ್ರನ್ ಅಶ್ವಿನ್
ಅನುಭವಿ ಆಫ್ ಸ್ಪಿನ್ನರ್ ಮತ್ತು ಆಲ್ ರೌಂಡರ್ ಆರ್ ಅಶ್ವಿನ್ ಪಾಕಿಸ್ತಾನದ ವಿರುದ್ಧ ಅವಕಾಶ ಪಡೆಯುವ ಸಾಧ್ಯತೆಯಿಲ್ಲದ ನಾಲ್ಕನೇ ಆಟಗಾರ. ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಬೌಲಿಂಗ್ ಆಲ್ ರೌಂಡರ್ ಗಳ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಒಬ್ಬರಿಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗಲಿದೆ. ಅಕ್ಷರ್‌ಗೆ ಅಲ್ಲಿ ಸ್ವಲ್ಪ ಅನುಕೂಲವಿದೆ. ಯಾವುದೇ ಸವಾಲಿನ ಹಂತದಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯವು ಆಟಗಾರನನ್ನು ಹೆಚ್ಚು ಅಪಾಯಕಾರಿಯನ್ನಾಗಿ ಮಾಡುತ್ತದೆ. ಹೀಗಾಗಿ ಅಕ್ಷರ್ ಪಟೇಲ್ ಭಾರತದ ಮೊದಲ ಆಯ್ಕೆಯಾಗಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications