IPL ಇತಿಹಾಸದಲ್ಲಿ ಹೆಚ್ಚು 50 ದಾಖಲಿಸಿ, ಒಂದೂ ಶತಕ ದಾಖಲಿಸದ 5 ಪ್ಲೇಯರ್ಸ್

ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಸೀಸನ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಇದೇ ತಿಂಗಳ ಮಾರ್ಚ್ 26ರಿಂದ ಆರಂಭವಾಗಲಿರುವ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಈಗಾಗಲೇ ಫ್ರಾಂಚೈಸಿಗಳು ತರಬೇತಿ ಆರಂಭಿಸಿದ್ದು, ಸೂರತ್‌ನಲ್ಲಿ ಸಿಎಸ್‌ಕೆ ತರಬೇತಿ ಶಿಬಿರ ನಡೆಯುತ್ತಿದೆ. ಈ ಬಾರಿ 10 ತಂಡಗಳಿದ್ದು, ರೋಚಕ ಟೂರ್ನಿಯನ್ನು ನಿರೀಕ್ಷಿಸಲಾಗಿದೆ.
ಐಪಿಎಲ್ ಇತಿಹಾಸದಲ್ಲಿ ಈಗಾಗಲೇ ಹಲವು ಆಟಗಾರರು ಶತಕ ಸಿಡಿಸಿದ್ದಾರೆ. ಈ ಬಾರಿ ಯಾರು ಶತಕ ಬಾರಿಸಬಹುದು ಎಂದು ಅಂದಾಜಿಸಬಹುದು. ಇದರ ಜೊತೆಗೆ ಟೂರ್ನಿಯಲ್ಲಿ ಶತಕ ಸಿಡಿಸದೇ ಇರುವ ಕ್ರಿಕೆಟರ್ಸ್ ಕೂಡ ಇದ್ದಾರೆ. ಶತಕ ಸಮೀಪಿಸಿದರೂ ದುರದೃಷ್ಟವಶಾತ್ ಮೂರಂಕಿ ಕಾಣಲಿಲ್ಲ. ಹೀಗಾಗಿ ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ಅರ್ಧ ಶತಕಗಳನ್ನು ಗಳಿಸಿದ ಐವರು ಇಲ್ಲಿದ್ದು, ಅವರು ಎಂದಿಗೂ ಶತಕ ಬಾರಿಸಲಿಲ್ಲ.

ಗೌತಮ್ ಗಂಭೀರ್
ಗೌತಮ್ ಗಂಭೀರ್ ಐಪಿಎಲ್‌ನಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವವರಲ್ಲಿ ಒಬ್ಬರು. ಅವರು ಎರಡು ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಟ್ರೋಫಿ ಜಯಿಸಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿರುವ ಗಂಭೀರ್ 154 ಐಪಿಎಲ್ ಪಂದ್ಯಗಳಲ್ಲಿ 4,218 ರನ್ ಗಳಿಸಿದ್ದಾರೆ. ಇವರ ಬ್ಯಾಟಿಂಗ್ ಸರಾಸರಿ 31.01 ಆಗಿದೆ.
123.91 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಗೌತಿ ಅವರ ಹೆಸರಿನಲ್ಲಿ 36 ಅರ್ಧಶತಕಗಳಿವೆ. ಆದರೆ ಒಮ್ಮೆಯೂ ಶತಕ ಸಿಡಿಸಲಿಲ್ಲ. ಗಂಭೀರ್ ಅವರ ಗರಿಷ್ಠ ಸ್ಕೋರ್ 93 ರನ್. ಈ ಬಾರಿ ಅವರು ಲಕ್ನೋ ಸೂಪರ್ ಜೈಂಟ್ಸ್‌ಗೆ ಸಲಹೆಗಾರರಾಗಿದ್ದಾರೆ.

ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ ಐಪಿಎಲ್‌ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಆರಂಭಿಕ ಋತುವಿನಿಂದಲೂ ಸಕ್ರಿಯವಾಗಿರುವ ಉತ್ತಪ್ಪ ಈ ಬಾರಿ CSK ಜೊತೆಗಿದ್ದಾರೆ. ಆರ್‌ಸಿಬಿ, ಕೆಕೆಆರ್, ಪುಣೆ ವಾರಿಯರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ. ಅವರು 193 ಪಂದ್ಯಗಳಿಂದ 27.94 ರ ಸರಾಸರಿಯಲ್ಲಿ 4722 ರನ್ ಗಳಿಸಿದ್ದಾರೆ. 130 ಸ್ಟ್ರೈಕ್‌ರೇಟ್ ಆಗಿದೆ. ಅವರ ಹೆಸರಿನಲ್ಲಿ 25 ಅರ್ಧ ಶತಕಗಳಿವೆ. ಆರಂಭಿಕ ಹಂತದಲ್ಲಿ ಹಲವು ಆಟಗಾರರು ಶತಕ ಬಾರಿಸಿದರೂ, ಶತಕ ಬಾರಿಸುವ ಭಾಗ್ಯ ಈ ಬ್ಯಾಟ್ಸ್‌ಮನ್‌ಗೆ ಬರಲಿಲ್ಲ.

ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ ಅನುಭವಿ ಆಟಗಾರ. ಕೆಕೆಆರ್ ನಾಯಕರಾಗಿದ್ದ ಕಾರ್ತಿಕ್ , ಈ ಬಾರಿ ಆರ್‌ಸಿಬಿ ಜೊತೆಗಿದ್ದಾರೆ. ಕಾರ್ತಿಕ್ 192 ಇನ್ನಿಂಗ್ಸ್‌ಗಳಿಂದ 25.7 ಸರಾಸರಿಯಲ್ಲಿ 4046 ರನ್ ಗಳಿಸಿದ್ದಾರೆ. 19 ಅರ್ಧಶತಕ ಬಾರಿಸಿರುವ ಕಾರ್ತಿಕ್ ಒಂದೇ ಒಂದು ಶತಕ ಗಳಿಸಲು ವಿಫಲರಾದರು. ಈ ಬಾರಿ ಆರ್‌ಸಿಬಿಯಲ್ಲಿ ಉತ್ತಮ ಪ್ರದರ್ಶನ ಎದುರು ನೋಡುತ್ತಿರುವ ಆಟಗಾರರಾಗಿದ್ದಾರೆ.

ಎಂಎಸ್ ಧೋನಿ
ಎಂಎಸ್ ಧೋನಿ ಐಪಿಎಲ್‌ನ ಲೆಜೆಂಡರಿ ಆಟಗಾರ. ಸಿಎಸ್‌ಕೆ ನಾಯಕ ಧೋನಿ ನಾಲ್ಕು ಬಾರಿ ತಂಡಕ್ಕೆ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಬಾರಿಯೂ ಧೋನಿಯೇ ಸಿಎಸ್‌ಕೆ ನಾಯಕ. ಹಲವು ಬಾರಿ ಶತಕ ಸಿಡಿಸಿದ್ದರೂ ಇನ್ನೂ ಶತಕ ಸಿಡಿಸಿಲ್ಲ. ಧೋನಿ 193 ಇನ್ನಿಂಗ್ಸ್‌ಗಳಲ್ಲಿ 4746 ರನ್ ಗಳಿಸಿದ್ದಾರೆ. ಧೋನಿ ಸರಾಸರಿ 39.55 ಮತ್ತು 135.83 ಸ್ಟ್ರೈಕಿಂಗ್ ಸರಾಸರಿ ಹೊಂದಿದ್ದಾರೆ. ಅವರು 23 ಅರ್ಧಶತಕಗಳನ್ನು ಗಳಿಸಿದರು ಸಹ ಒಂದು ಶತಕವನ್ನು ಗಳಿಸಲು ಸಾಧ್ಯವಾಗಿಲ್ಲ.

ಫಾಫ್ ಡುಪ್ಲೆಸಿಸ್
ಫಫ್ ಡುಪ್ಲೆಸಿಸ್ ಕಳೆದ ಋತುವಿನಲ್ಲಿ ಸಿಎಸ್‌ಕೆ ಜೊತೆ ಉತ್ತಮ ಪ್ರದರ್ಶನ ನೀಡಿದ ಆಟಗಾರ. ಈ ಬಾರಿ ಆರ್‌ಸಿಬಿಗೆ ಬಂದಿರುವ ಈ ಆಟಗಾರ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಬಹುದು. ಡುಪ್ಲೆಸಿಸ್ 93 ಇನ್ನಿಂಗ್ಸ್‌ಗಳಿಂದ 34.94 ಸರಾಸರಿಯಲ್ಲಿ 2935 ರನ್ ಗಳಿಸಿದ್ದಾರೆ. 131.09 ಸ್ಟ್ರಟ್ ಕೂಡ ಇದೆ. ಅಗ್ರ ಕ್ರಮಾಂಕದ ಆಟಗಾರ ಡುಪ್ಲೆಸಿಸ್ ಇದುವರೆಗೆ 22 ಅರ್ಧಶತಕಗಳನ್ನು ಗಳಿಸಿದ್ದಾರೆ. ಆದರೆ ಅವರು ಕೂಡ ಇನ್ನೂ ಶತಕ ಗಳಿಸಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications