ಆಕಾಶ್ ಛೋಪ್ರಾ ಆಯ್ಕೆಯ ಕನಸಿನ ಐಪಿಎಲ್ XI
ಬೆಂಗಳೂರು, ಮೇ 29: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018 ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಿ, ಮುಕ್ತಾಯ ಕಂಡಿದೆ. ಎರಡು ವರ್ಷಗಳ ನಿಷೇಧದ ಬಳಿಕ ಕಣಕ್ಕಿಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಂತಿಮ ಹಣಾಹಣಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಈ ನಡುವೆ ಈ ಟೂರ್ನಮೆಂಟ್, ಹಲವು ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುವಲ್ಲಿ ಯಶಸ್ವಿಯಾಗಿದೆ.
ಟೀಂ ಇಂಡಿಯಾದ ಮಾಜಿ ಕ್ರಿಕೆಟರ್, ಹಾಲಿ ಕಾಮೆಂಟೆಟರ್ ಕಮ್ ವಿಶ್ಲೇಷಕ ಆಕಾಶ್ ಛೋಪ್ರಾ ಅವರು ತಮ್ಮ ಟ್ವಿಟ್ಟರ್ ಖಾತೆ ಮೂಲಕ ತಮ್ಮ ಕನಸಿನ ಐಪಿಎಲ್ XI ತಂಡವನ್ನು ಪ್ರಕಟಿಸಿದ್ದಾರೆ.

ಕಿಂಗ್ಸ್ XI ಪಂಜಾಬ್ ತಂಡದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಸುನೀಲ್ ನರೇನ್ ಅವರನ್ನು ತಮ್ಮ ತಂಡದ ಆರಂಭಿಕ ಆಟಗಾರರಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ತಂಡದ ನಾಯಕ ಸ್ಥಾನಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ನಡುವೆ ಭಾರಿ ಪೈಪೋಟಿ ನಡೆದು ಕೊನೆಗೆ ಎಂಎಸ್ ಧೋನಿ ಅವರನ್ನು ನಾಯಕರಾಗಿ ಆಯ್ಕೆ ಮಾಡಿದ್ದಾರೆ.

ಆಕಾಶ್ ಛೋಪ್ರಾ ಕನಸಿನ XI ಐಪಿಎಲ್ 2018
1. ಸುನೀಲ್ ನರೇನ್
2. ಕೆಎಲ್ ರಾಹುಲ್
3. ಅಂಬಟಿ ರಾಯುಡು
4. ಕೇನ್ ವಿಲಿಯಮ್ಸನ್
5. ರಿಷಬ್ ಪಂತ್
6. ಎಂಎಸ್ ಧೋನಿ (ನಾಯಕ)
7. ಕೃಷ್ಣಪ್ಪ ಗೌತಮ್
8. ರಷಿದ್ ಖಾನ್
9. ಆಂಡ್ರ್ಯೂ ಟೈ
10. ಉಮೇಶ್ ಯಾದವ್
11. ಸಿದ್ದಾರ್ಥ್ ಕೌಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications