DK ಆಟ ನೋಡಿದ್ರೆ, ನನಗೆ ಮತ್ತೆ ಕ್ರಿಕೆಟ್ ಆಡ್ಬೇಕು ಅನ್ನಿಸ್ತಿದೆ: ಎಬಿ ಡಿವಿಲಿಯರ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ದಿನೇಶ್ ಕಾರ್ತಿಕ್ ಅದ್ಭುತ ಆಟವಾಡುತ್ತಿದ್ದಾರೆ. ಆರ್‌ಸಿಬಿಯನ್ನ ಗೆಲುವಿನ ದಡ ತಲುಪಿಸುವಲ್ಲಿ ದಿನೇಶ್ ಕಾರ್ತಿಕ್ ಯಶಸ್ವಿಯಾಗಿದ್ದಾರೆ. ಹೀಗೆ ಕಾರ್ತಿಕ್ ಬ್ಯಾಟಿಂಗ್ ನೋಡಿದ ಸೂಪರ್ ಸ್ಟಾರ್ ಎಬಿ ಡಿವಿಲಿಯರ್ಸ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಸೀಸನ್‌ನಲ್ಲಿ ಆರ್‌ಸಿಬಿ ಪರ ಆರು ಪಂದ್ಯಗಳನ್ನ ಆಡಿರುವ ದಿನೇಶ್ ಕಾರ್ತಿಕ್ 209ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು, 18 ಬೌಂಡರಿ ಹಾಗೂ 14 ಸಿಕ್ಸರ್ ಸಹಿತ 197 ರನ್ ಕಲೆಹಾಕಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅಜೇಯ 66ರನ್‌ಗಳ ನೆರವಿನಿಂದ ಡೆಲ್ಲಿ ತಂಡದ ವಿರುದ್ಧ ಆರ್‌ಸಿಬಿ ಗೆಲುವು ಕಂಡಿತು.
ಆರ್‌ಸಿಬಿ ಪರ ಫಿನಿಷರ್ ಆಗಿ ಕಾಣಿಸಿಕೊಳ್ಳುತ್ತಿರುವ ದಿನೇಶ್ ಕಾರ್ತಿಕ್ ಎಬಿ ಡಿವಿಲಿಯರ್ಸ್ ಸ್ಥಾನ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ದಿನೇಶ್ ಕಾರ್ತಿಕ್ ಆಟ ಕಂಡು ಮೆಚ್ಚುಗೆ ವ್ಯಕ್ತಪಡಿಸಿರುವ ಎಬಿಡಿ '' ದಿನೇಶ್ ಕಾರ್ತಿಕ್ ಆಟ ನೋಡಿದ್ರೆ, ನನಗೆ ಮತ್ತೆ ಕ್ರಿಕೆಟ್ ಆಡಬೇಕೆನ್ನಿಸುವಂತೆ ಆಗುತ್ತಿದೆ, ಒತ್ತಡದ ನಡುವೆಯು ಆತನ ಆಟವನ್ನ ನೋಡಿದ್ರೆ (360) ನನಗೆ ರೋಮಾಂಚನವಾಗುತ್ತಿದೆ'' ಎಂದು ಎಬಿಡಿ ವಿಯುಸ್ಪೋರ್ಟ್ ಸ್ಟ್ರೀಮಿಂಗ್ ಯೂಟ್ಯೂಬ್ ಚಾನೆಲ್‌ಗೆ ತಿಳಿಸಿದ್ದಾರೆ.
ಎಬಿಡಿಯ ಈ ಮಾತುಗಳನ್ನ ಕೇಳಿದ ಬಳಿಕ ಆತನ ಫ್ಯಾನ್ಸ್ ಎಬಿಡಿ ಮತ್ತೆ ಕ್ರಿಕೆಟ್ ಮರಳಲಿ, ಆರ್‌ಸಿಬಿ ಪರ ಮತ್ತೆ ಆಡಲಿ ಎಂಬ ಒತ್ತಾಯ ಮಾಡಿದ್ದಾರೆ. ಎಬಿಡಿ ಮತ್ತೆ ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟಿದ್ದೇ ಆದಲ್ಲಿ ಆತನ ಫಾಲೋವರ್ಸ್‌ಗೆ ದೊಡ್ಡ ಹಬ್ಬವೇ ಸರಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications