Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ ಆಗಿದ್ದಾರೆ: ವದಂತಿಗಳಿಗೆ ತೆರೆ ಎಳೆದ ಸೂರ್ಯಕುಮಾರ್ ಯಾದವ್

Jasprit bumrah

ಟೀಂ ಇಂಡಿಯಾ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಕುರಿತಾಗಿ ಮಹತ್ವದ ವಿಷಯವನ್ನ ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಬುಮ್ರಾ ಫಿಟ್ನೆಸ್ ಕುರಿತಾಗಿ ಮಾಹಿತಿಗಳನ್ನ ಬಿಚ್ಚಿಟ್ಟಿದ್ದಾರೆ.

ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆದಿರಲಿಲ್ಲ. ಬುಮ್ರಾ ಬದಲು ಉಮೇಶ್ ಯಾದವ್ ಸ್ಥಾನ ಪಡೆದಿದ್ದು, ಹರ್ಷಲ್ ಪಟೇಲ್ ಕೂಡ ಗಾಯಗೊಂಡ ಬಳಿಕ ಕಂಬ್ಯಾಕ್ ಪಂದ್ಯವನ್ನಾಡಿದ್ರು. ಆದ್ರೆ ಬುಮ್ರಾಗೆ ಏಕೆ ಅವಕಾಶ ನೀಡಲಿಲ್ಲ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಬುಮ್ರಾ ಫಿಟ್ನೆಸ್ ಕುರಿತಾಗಿ ವದಂತಿಗಳು ಹರಿದಾಡಿದ್ದವು. ಆದ್ರೆ ಸೂರ್ಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ನೀಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ!

ಜಸ್ಪ್ರೀತ್ ಬುಮ್ರಾ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ!

ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೂರ್ಯಕುಮಾರ್ ಯಾದವ್ ಆತ ಸಂಪೂರ್ಣವಾಗಿ ಫಿಟ್‌ ಆಗಿದ್ದು, ಯೋಚಿಸಬೇಕಾದ ವಿಚಾರವೇನು ಇಲ್ಲ ಎಂದಿದ್ದಾರೆ. ಜೊತೆಗೆ ಆತನ ಪ್ಲೇಯಿಂಗ್ ಇಲೆವೆನ್‌ಗೆ ಮರಳಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ಬುಮ್ರಾ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯವನ್ನಷ್ಟೇ ಅಲ್ಲದೆ ಇದಕ್ಕೂ ಮೊದಲು ಏಷ್ಯಾಕಪ್‌ ಟೂರ್ನಿಯಲ್ಲೂ ಸಹ ಭಾಗಿಯಾಗಿರಲಿಲ್ಲ. ಬೆನ್ನು ನೋವಿಗೆ ತುತ್ತಾಗಿದ್ದ ಬುಮ್ರಾ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರು.

ಟಿ20 ವಿಶ್ವಕಪ್‌ಗೂ ಮುನ್ನ ಭಾರತದ ಪ್ರದರ್ಶನ ಕುಗ್ಗಿದೆ: ಟೀಂ ಇಂಡಿಯಾಗೆ ವಾರ್ನಿಂಗ್ ಕೊಟ್ಟ RP ಸಿಂಗ್

ಬುಮ್ರಾ ಫಿಟ್ನೆಸ್ ಕುರಿತಾಗಿ ತಿಳಿಸುವ ಅಧಿಕಾರ ನನಗಿಲ್ಲ!

ಬುಮ್ರಾ ಫಿಟ್ನೆಸ್ ಕುರಿತಾಗಿ ತಿಳಿಸುವ ಅಧಿಕಾರ ನನಗಿಲ್ಲ!

"ವಾಸ್ತವವಾಗಿ ಅಂತಹ ಯಾವುದೇ ಸಂವಹನದ ಬಗ್ಗೆ ನನಗೆ ತಿಳಿದಿಲ್ಲ, ಇದು ನನ್ನ ಡಿಪಾರ್ಟ್‌ಮೆಂಟ್ ಅಲ್ಲ, ನೀವು ಅದರ ಬಗ್ಗೆ ನನ್ನನ್ನು ಕೇಳಬಾರದು ಎಂದು ನಗುತ್ತಾ ಸೂರ್ಯಕುಮಾರ್ ಯಾದವ್ ಉತ್ತರಿಸಿದ್ದಾರೆ. ಜೊತೆಗೆ ಈ ವಿಚಾರಗಳನ್ನ ನೀವು ಫಿಸಿಯೋಗಳು ಮತ್ತು ತಂಡದ ಮ್ಯಾನೇಜ್‌ಮೆಂಟ್‌ಗೆ ಕೇಳಬೇಕಿದೆ ಎಂದಿದ್ದಾರೆ.

"ಆದರೆ ತಂಡದಲ್ಲಿ ಹಾಗೂ ಡ್ರೆಸ್ಸಿಂಗ್ ರೂಂ ವಾತಾವರಣ ಉತ್ತಮವಾಗಿದೆ ಮತ್ತು ಎಲ್ಲರೂ ತುಂಬಾನೆ ಫಿಟ್ ಆಗಿದ್ದಾರೆ ಮತ್ತು ಎರಡನೇ T20 ಪಂದ್ಯಕ್ಕೆ ಸಿದ್ಧರಾಗಿದ್ದಾರೆ" ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಬುಮ್ರಾ ಅವರ ಪಂದ್ಯದ ಫಿಟ್‌ನೆಸ್ ಮತ್ತು ಉಮೇಶ್ ಯಾದವ್ ವಿಷಯಗಳ ಯೋಜನೆಯಲ್ಲಿ ಎಲ್ಲಿ ಹೊಂದಿಕೊಳ್ಳುತ್ತಾರೆ ಎಂದು ಕೇಳಿದಾಗ ಸೂರ್ಯಕುಮಾರ್ ಹೇಳಿದರು.

ಬುಮ್ರಾ ಬಗ್ಗೆ ಮತ್ತಷ್ಟು ಮಾತನಾಡಿದ ಸೂರ್ಯಕುಮಾರ್ ಯಾದವ್ ''ಆತ ಸಂಪೂರ್ಣ ಫಿಟ್ ಆಗಿದ್ದು ಯೋಚಿಸುವ ಅಗತ್ಯವಿಲ್ಲ'' ಎಂದರು. ಟೀಂ ಇಂಡಿಯಾ 208ರನ್‌ಗಳನ್ನ ಡಿಫೆಂಡ್ ಮಾಡಿಕೊಳ್ಳಲು ಎಡವಿದಾಗ ಭಾರತದ ಬೌಲಿಂಗ್ ಯುನಿಟ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದುರಾಗಿವೆ. ಬುಮ್ರಾ ವಾಪಸ್ಸಾತಿಗೆ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

'ನನ್ನ ಮಗಳು ಸನಾ ಕ್ರಿಕೆಟ್ ಆಡಿದ್ದರೆ, ಈಕೆಯಂತಾಗಲಿ ಎಂದು ಹೇಳುತ್ತಿದ್ದೆ'; ಸೀಕ್ರೆಟ್ ಬಿಚ್ಚಿಟ್ಟ ಸೌರವ್ ಗಂಗೂಲಿ

ಹರ್ಷಲ್ ಪಟೇಲ್ ಈಗಷ್ಟೇ ಚೇತರಿಸಿಕೊಂಡಿದ್ದಾರೆ

ಹರ್ಷಲ್ ಪಟೇಲ್ ಈಗಷ್ಟೇ ಚೇತರಿಸಿಕೊಂಡಿದ್ದಾರೆ

ಹರ್ಷಲ್ ಪಟೇಲ್ ಫಿಟ್ನೆಸ್ ಬಗ್ಗೆಯು ಕೇಳಿಬಂದ ಪ್ರಶ್ನೆಗೆ ಹರ್ಷಲ್ ಪಟೇಲ್ ಈಗಷ್ಟೇ ಇಂಜ್ಯುರಿಯಿಂದ ಚೇತರಿಸಿಕೊಂಡು ಕಂಬ್ಯಾಕ್ ಮಾಡಿದ್ದಾರೆ. ಅವರ ಸ್ಲೋ ಬಾಲ್ ಎಂತಹದ್ದೇ ಬ್ಯಾಟ್ಸ್‌ಮನ್‌ಗೆ ಸವಾಲಾಗಿದ್ದು, ವೇರಿಯೇಷನ್ ಉತ್ತಮವಾಗಿದೆ ಎಂದು ಹೊಗಳಿದ್ದಾರೆ.

ಇನ್ನು ಭುವನೇಶ್ವರ್ ಕುಮಾರ್ ಕುರಿತಾಗಿಯೂ ಬೆಂಬಲಿಸಿರುವ ಸೂರ್ಯ, ಪ್ರತಿಯೊಬ್ಬರಿಗೂ ಅವರ ಜವಾಬ್ದಾರಿ ಏನೆಂದು ತಿಳಿದಿದೆ ಮತ್ತು ನಿರ್ವಹಣೆ ಮಾಡುತ್ತಿದ್ದಾರೆ ಎಂದು ಟೀಂ ಇಂಡಿಯಾ ಬೌಲರ್‌ಗಳನ್ನು ಬೆಂಬಲಿಸಿದ್ರು.

Story first published: Thursday, September 22, 2022, 19:30 [IST]
Other articles published on Sep 22, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+